ಪ್ರತಿಫಲ ಬಯಸದ ಸೇವೆಯಲ್ಲಿದೆ ಅಪರಿಮಿತ ಸಂತೋಷ

ರಬಕವಿ-ಬನಹಟ್ಟಿ: ಯಾವುದೇ ಪ್ರತಿಲ ಇಲ್ಲದೆ ಮಾಡುವ ಸೇವೆ ಅಪರಿಮಿತ ಸಂತೋಷ ನೀಡುತ್ತದೆ ಎಂದು ರಬಕವಿಯ ತ್ರಿಶಲಾದೇವಿ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ.ಪದ್ಮಜೀತ್ ನಾಡಗೌಡಪಾಟೀಲ ಹೇಳಿದರು.

ತಾಲೂಕಿನ ಸಮೀಪದ ಸಸಾಲಟ್ಟಿ ಗ್ರಾಮದಲ್ಲಿ 21 ಬಡವರಿಗೆ ಉಚಿತ ನೇತ್ರ ಶಸ್ತ್ರ ಚಿಕಿತ್ಸೆ ನಡೆಸಿದ ಬಳಿಕ ಕನ್ನಡಕ ವಿತರಿಸಿ ಅವರು ಮಾತನಾಡಿದರು.

ಬಡವರಿಗೆ ಅಗತ್ಯವಿರುವ ನೇತ್ರ ಶಸ ಚಿಕಿತ್ಸೆ ಉಚಿತವಾಗಿ ಮಾಡಿ, ಅವರಿಗೆ ಕನ್ನಡಕಗಳನ್ನು ನೀಡುವುದು ಕೂಡ ಭಗವಂತನ ಸೇವೆಗೆ ಸರಿಸಮವಾಗಿದೆ. ಬಡವರ ಸೇವೆಯಲ್ಲೇ ಭಗವಂತನ ಸೇವೆ ಮಾಡಿರುವ ಹೆಮ್ಮೆ ನನಗಿದೆ. ಎಲ್ಲರೂ ತಮಗೆ ಲಭ್ಯವಿರುವ ಸೇವೆಯನ್ನು ಬಡವರಿಗೆ ಕಲ್ಪಿಸಿದಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣಗೊಳ್ಳಲಿದೆ ಎಂದರು.

ಗ್ರಾಪಂ ಅಧ್ಯಕ್ಷ ಭರಮು ಉಳ್ಳಾಗಡ್ಡಿ ಮಾತನಾಡಿ, ವೈದ್ಯೋ ನಾರಾಯಣೋ ಹರಿ ಎಂಬ ಸಂಸ್ಕೃತ ನುಡಿಯಂತೆ ಬಡವರ ಸಮಸ್ಯೆಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿರುವ ಡಾ. ಪಧ್ಮಜೀತ್ ನಾಡಗೌಡಪಾಟೀಲರ ಸೇವೆ ಶ್ಲಾಘನೀಯ ಎಂದರು. ದೇವರಾಜ ಬಳಿಗಾರ, ಸಂಜಯ ಅಮ್ಮಣಗಿಮಠ ಇತರರಿದ್ದರು.

Leave a Reply

Your email address will not be published. Required fields are marked *