ಉಚಿತ ಪ್ರಾಣಾಯಾಮ, ಧ್ಯಾನ ತರಬೇತಿ

ರಬಕವಿ-ಬನಹಟ್ಟಿ: ಬನಹಟ್ಟಿಯ ಯೋಗ ಗುರು ಡಾ. ಪರಶುರಾಮ ರಾವಳ ಅವರ ಆರೋಗ್ಯ ಯೋಗ ಪೀಠದಲ್ಲಿ ಉಚಿತ ಯೋಗ, ಪ್ರಾಣಾಯಾಮ ಮತ್ತು ಧ್ಯಾನ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ತಿಂಗಳಿಂದ ಯೋಗ ಪ್ರಾರಂಭವಾಗಿದ್ದು, ಅಕೃತವಾಗ ಇಲ್ಲಿನ ಧ್ಯಾನದ ಕುಟೀರಗಳಿಗೆ ಜೂ. 21 ರಂದು ಚಾಲನೆ ನೀಡಲಾಗುತ್ತದೆ.

ಪತ್ರಿಕೆಯೊಂದಿಗೆ ಮಾತನಾಡಿದ ಡಾ. ರಾವಳ, ನರೇಂದ್ರ ಮೋದಿ ಮತ್ತು ಯೋಗ ಗುರು ರಾಮದೇವ ಗುರೂಜಿ ನನಗೆ ಆದರ್ಶ ವ್ಯಕ್ತಿಗಳು. ಎರಡು ತಿಂಗಳು ರಾಮದೇವ ಗುರೂಜಿಯವರಿದ್ದ ಹರಿದ್ವಾರಕ್ಕೆ ತೆರಳಿ ಯೋಗ ಅಭ್ಯಾಸ ಪಡೆದುಕೊಂಡಿದ್ದೇನೆ. ಸ್ವತಃ ನಾನು ಕೂಡ ಆಯುರ್ವೇದ ವೈದ್ಯ ಇರುವುದರಿಂದ ನಮ್ಮ ಭಾರತೀಯ ಸಂಪ್ರದಾಯಗಳನ್ನು ಜನರಿಗೆ ತಿಳಿಸಿಕೊಟ್ಟು ಸೇವೆ ಮಾಡಬೇಕೆನ್ನುವುದೇ ನನ್ನ ಉದ್ದೇಶವಾಗಿದೆ ಎಂದರು.

ಪ್ರತಿದಿನ ಬೆಳಗ್ಗೆ 5.30 ರಿಂದ 6.30ರವರೆಗೆ ಯೋಗ, ಪ್ರಾಣಾಯಾಮ, ಧ್ಯಾನ ಹಾಗೂ ಆರೋಗ್ಯದ ಕುರಿತು ವಿವರಿಸಲಾಗುವುದು. ಸಾವಯವ ಕೃಷಿ ಮತ್ತು ಆಹಾರ ಪದಾರ್ಥಗಳ ಸೇವನೆ ಬಗ್ಗೆಯೂ ಹೇಳಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಮಾಹಿತಿಗಾಗಿ ಮೊ. 98809 76151 ಗೆ ಸಂಪರ್ಕಿಸಬಹುದು.

Leave a Reply

Your email address will not be published. Required fields are marked *