ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ

ರಬಕವಿ/ಬನಹಟ್ಟಿ: ದೇಶದೆಲ್ಲಡೆ ಮೋದಿ ಅಲೆ ಇದ್ದು, ಮತ್ತೊಮ್ಮೆ ಬಿಜೆಪಿ ಗೆಲ್ಲಿಸುವುದರ ಮೂಲಕ ಮೋದಿ ಅವರನ್ನು ಪ್ರಧಾನಿ ಮಾಡೋಣ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ, ತೆರದಾಳ ಶಾಸಕ ಸಿದ್ದು ಸವದಿ ಹೇಳಿದರು.

ಬನಹಟ್ಟಿ ನಗರದರಲ್ಲಿ ಲೋಕಸಭೆ ಚುನಾವಣೆ ನಿಮಿತ್ತ ತೇರದಾಳ ಮತಕ್ಷೇತ್ರಾದ್ಯಂತ ಗುರುವಾರ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವಧಿಯಲ್ಲಿ ರಾಷ್ಟ್ರ ಎಲ್ಲ ರಂಗದಲ್ಲೂ ಸಾಧನೆ ಮಾಡಿದೆ. ಅವರು ಅಭಿವೃದ್ಧಿ ಕಾರ್ಯಗಳ ಜತೆಗೆ ದೇಶದ ಸುರಕ್ಷತೆಗೆ ಹಾಗೂ ಎಲ್ಲ ವರ್ಗದವರಿಗೂ ಹಲವು ಮಹತ್ವದ ಯೋಜನೆಗಳನ್ನು ನೀಡಿದ್ದಾರೆ. ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿಗೆ ಮತ ಹಾಕಿ ಎಂದರು.

ಕಾರ್ಯಕರ್ತರಾದ ಕುಮಾರ ಕದಂ, ಶಿವಾನಂದ ಬುದ್ನಿ, ಹಿರಾಚಂದ ಕಾಸರ, ಶಂಕರ ಕುರಂದವಾಡ, ಶಿವಾನಂದ ಕಾಗಿ, ಆನಂದ ಬಾಡಗಂಡಿ, ರಾಮದಾಸ ಸಿಂಘನ, ಮಹಾದೇವ ಚನಾಳ ಇತರರಿದ್ದರು.