ಆಹಾರ ಗುಣಮಟ್ಟಕ್ಕೆ ಒತ್ತು ನೀಡಿ

ರಬಕವಿ/ಬನಹಟ್ಟಿ: ಆಹಾರ ಸುರಕ್ಷತೆ ಹಾಗೂ ಗುಣಮಟ್ಟದ ಕಾಯ್ದೆಯನ್ವಯ ಹೋಟೆಲ್‌ಗಳಲ್ಲಿ ಆಹಾರ ಪದಾರ್ಥ ತಯಾರಿಕೆಯಲ್ಲಿ ಬಳಕೆಯಾಗುವ ಕಚ್ಚಾ ವಸ್ತುಗಳನ್ನು ವಿಕ್ರಯ ಮಾಡುವ ಸಂದರ್ಭ ಸಂರಕ್ಷಣೆ ಹಾಗೂ ಗುಣಮಟ್ಟಕ್ಕೆ ಒತ್ತು ನೀಡಬೇಕು ಎಂದು ಆಹಾರ ಸಂರಕ್ಷಣಾ ಅಧಿಕಾರಿ ಅಪ್ಪಾಜಿ ಹೂಗಾರ ಹೇಳಿದರು.

ಅವಳಿ ನಗರದ ಡೆಂಪೋ ಡೇರಿ ಹಾಗೂ ಬನಹಟ್ಟಿ ಸಹಕಾರಿ ನೂಲಿನ ಗಿರಣಿಗಳ ಕ್ಯಾಂಟೀನ್ ಸೇರಿ ವಿವಿಧ ಕಡೆ ಹೋಟೆಲ್‌ಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಹೋಟೆಲ್‌ಗಳಲ್ಲಿ ಆಹಾರ ವಿತರಣೆ ವೇಳೆ ಸ್ವಚ್ಛತೆಯೊಂದಿಗೆ ಗ್ರಾಹಕರಿಗೆ ಶುದ್ಧ ಆಹಾರ ಒದಗಿಸುವಲ್ಲಿ ಮುಂದಾಗಬೇಕು ಎಂದರು.

ಸ್ವಚ್ಛತೆ ಹಾಗೂ ಅಡುಗೆ ತಯಾರಿಕೆಯಲ್ಲಿ ಯಾವುದೇ ರಸಾಯನಿಕ ವಸ್ತುಗಳನ್ನು ಬಳಸದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಹೂಗಾರ ತಿಳಿಸಿದರು.

ಬಣ್ಣದ ರಸಾಯನ ಬಳಕೆ
ಕೆಲ ಡಬ್ಬಾ ಅಂಗಡಿಗಳಲ್ಲಿ ತಿನಿಸು ರುಚಿಯಾಗಲು ಕೆಲ ಬಣ್ಣದಿಂದ ಕೂಡಿದ ರಸಾಯನಿಕ ಕೆಮಿಕಲ್ ಮಿಶ್ರಣ ಮಾಡುತ್ತಿರುವುದು ತಿಳಿದು ಬಂದಿದ್ದು, ಕೂಡಲೇ ಅಂತಹ ವಿಷಕಾರಿ ಪದಾರ್ಥಗಳನ್ನು ನಿಷೇಧಿಸಬೇಕು. ಈಗಾಗಲೆ ಕೆಲವೆಡೆ ಪರಿಶೀಲನೆ ನಡೆಸಿದ್ದು, ಅಂತವರಿಗೆ ನೋಟಿಸ್ ನೀಡಿ ತಿಳಿಹೇಳಲಾಗಿದೆ. ಅದನ್ನೇ ಮುಂದುವರಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *