ನೀರು ಪೋಲಾಗದಂತೆ ನೋಡಿಕೊಳ್ಳಿ

ರಬಕವಿ-ಬನಹಟ್ಟಿ: ನೀರು ಪೋಲಾಗದಂತೆ ನೋಡಿಕೊಳ್ಳಿ. ಯಾರೂ ನೀರಿಗಾಗಿ ಕಿತ್ತಾಡಬೇಡಿ. ಇರುವುದರಲ್ಲಿಯೇ ಇತರರಿಗೂ ಹಂಚಿ ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಜನತೆಗೆ ಮನವಿ ಮಾಡಿದರು.

ರಬಕವಿಯ ಸರ್ವೇ ನಂ. 64 ರಲ್ಲಿನ ಗುಡ್ಡದಪ್ರದೇಶದ ನಿವಾಸಿಗಳು ವಾಸಿಸುವ ಸ್ಥಳಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ ಮಾತನಾಡಿದ ಅವರು, ನಗರಸಭೆ ಅಕಾರಿಗಳು ಅಂದಾಜು 5 ಕಿ.ಮೀ. ನಿಂದ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡಿದ್ದಾರೆ. ತಾವೆಲ್ಲರೂ ಮಿತವಾಗಿ ನೀರನ್ನು ಬಳಕೆ ಮಾಡಬೇಕು ಎಂದರು.

ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಬನಹಟ್ಟಿಯ ಕೆರೆಯನ್ನು ಸದ್ಬಳಕೆ ಮಾಡಿಕೊಳ್ಳುವ ಶಾಶ್ವತ ಯೋಜನೆಯ ಪ್ರಸ್ತಾವನೆ ಸರ್ಕಾರಕ್ಕೆ ಕಳಿಸಲಾಗಿದೆ. ಮುಂದಿನ ವರ್ಷದ ಅವಗೆ ಇದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ನಿಮಗೆ ಸಂಧ್ಯಾ ಸುರಕ್ಷಾ ಹಣ ಬರುತ್ತದೆಯಾ ಎಂದು ವಯೋವೃದ್ಧೆಯನ್ನು ಜಿಲ್ಲಾಧಿಕಾರಿ ಕೇಳಿದಾಗ ವೃದ್ಧೆ ಬರುವುದಿಲ್ಲ ಸಾಹೇಬರೇ ಎಂದು ಉತ್ತರಿಸಿದಳು. ಅಲ್ಲಿಯೇ ಇದ್ದ ತಹಸೀಲ್ದಾರ್‌ರನ್ನು ಕರೆದು ಇವರ ದಾಖಲಾತಿ ಪಡೆದು ಸರ್ಕಾರಿ ಸೌಲಭ್ಯ ಒದಗಿಸುವಂತೆ ತಿಳಿಸಿದರು. ಪೌರಾಯುಕ್ತ ಆರ್. ಎಂ. ಕೊಡಗೆ, ನಿವಾಸಿ ಬಾಳೇಶ ಇರಳಿ ಇತರರಿದ್ದರು.

ಪ್ರತಿದಿನ 32 ಕಾರ್ಡ್ ಮಾಡಿಕೊಡಿ
ರಬಕವಿಯ ವಿದ್ಯಾನಗರ ಬಡಾವಣೆಯಲ್ಲಿರುವ ಪ್ರಧಾನ ಅಂಚೆ ಕಚೇರಿಗೆ ಜಿಲ್ಲಾಕಾರಿ ಆರ್.ರಾಮಚಂದ್ರನ್ ಭೇಟಿ ನೀಡಿ ಆಧಾರ್ ಕೇಂದ್ರ ಪರಿಶೀಲಿಸಿದರು. ಪ್ರತಿದಿನ ಎಷ್ಟು ಕಾರ್ಡ್ ಮಾಡಿಕೊಡುತ್ತೀರಿ ಎಂದು ಡಿಸಿ ಪ್ರಶ್ನಿಸಿದಾಗ 15 ಕಾರ್ಡ್ ಎಂದು ಸಿಬ್ಬಂದಿ ಉತ್ತರಿಸಿದಾಗ, ಪ್ರತಿ ದಿನ 32 ಆಧಾರ್ ಕಾರ್ಡ್‌ಗಳನ್ನು ಕಡ್ಡಾಯವಾಗಿ ಮಾಡಿಕೊಡಲೇಬೇಕು ಎಂದು ಖಡಕ್ಕಾಗಿ ಸೂಚಿಸಿದರು.

ಜಮಖಂಡಿ ಉಪವಿಭಾಗಾಕಾರಿ ಮಹಮ್ಮದ್ ಇಕ್ರಮ್, ಯೋಜನಾ ಅಭಿವೃದ್ಧಿ ಅಕಾರಿ ವಿಜಯ ಮೆಕ್ಕಳಕಿ, ತೇರದಾಳ ವಿಶೇಷ ತಹಸೀಲ್ದಾರ್ ಮೆಹಬೂಬಿ, ರಬಕವಿ-ಬನಹಟ್ಟಿ ಗ್ರೇಡ್-2 ತಹಸೀಲ್ದಾರ್ ಎಸ್.ಬಿ. ಕಾಂಬಳೆ, ಪೌರಾಯುಕ್ತ ಆರ್.ಎಂ. ಕೊಡಗೆ, ಡಿ. ಬಿ. ಮಾಯಣ್ಣವರ ಇತರರಿದ್ದರು.

Leave a Reply

Your email address will not be published. Required fields are marked *