ಪ್ರತಿಯೊಬ್ಬರೂ ಮಾತೃಭಾಷೆ ಪ್ರೀತಿಸಿ

ರಬಕವಿ/ಬನಹಟ್ಟಿ: ಮಾತೃಭಾಷೆ ಕನ್ನಡವನ್ನು ಎಲ್ಲರೂ ಪ್ರೀತಿಸಬೇಕು. ಮಾತೃ ಭಾಷೆಯಲ್ಲಿಯೇ ಹೊಸ ಪದಗಳು ಹುಟ್ಟಲು ಸಾಧ್ಯ ಎಂದು ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ ಸಲಹೆ ನೀಡಿದರು.

ಶುಕ್ರವಾರ ಸಮೀಪದ ಯಲ್ಲಟ್ಟಿ ಕೊಣ್ಣೂರ ನುಡಿ ಸಡಗರದ ಅಕ್ಷರ ಜಾತ್ರೆ-3ರ ಸಮಾರಂಭದಲ್ಲಿ ನಗೆಬುಗ್ಗೆ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಶಿಕ್ಷಕರು ಮಕ್ಕಳಿಗೆ ಸಾಹಿತ್ಯ ಓದುವ ಅಭಿರುಚಿ ಬೆಳೆಸಬೇಕು. ಕೇವಲ ಅಂಕ ಪಡೆಯಲು ಓದಿಸಬಾರದು ಎಂದರು.

ಸರ್ಕಾರದ ಆದೇಶದಂತೆ ಮಕ್ಕಳು 5 ವರ್ಷ 10 ತಿಂಗಳಾದ ಬಳಿಕವೇ ಶಾಲೆಗೆ ಕಳುಹಿಸಿ. ಏಕೆಂದರೆ ಮಕ್ಕಳು ಚಿಕ್ಕವರಿದ್ದಾಗ ಮಲಗಲೇ ಬೇಕು. ಬುದ್ಧಿ ವಿಕಾಸವಾಗುವುದು ನಿದ್ದೆಯಲ್ಲಿ ಮಾತ್ರ. ಅವರಿಗೆ ಮುಕ್ತವಾಗಿ ಕಲಿಯಲು ಅವಕಾಶ ಕಲ್ಪಿಸಿಕೊಡಿ ಎಂದರು.ರಬಕವಿ-ಬನಹಟ್ಟಿ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಸವರಾಜ ಮಹಾಮನಿ, ನರಸಿಂಹ ಜೋಶಿ ಹಾಸ್ಯದ ಚಟಾಕೆಗಳ ಮುಖಾಂತರ ನಗಿಸಿದರು. ಈರಣ್ಣ ಬಾಣಕಾರ ನಿರೂಪಿಸಿ, ವಂದಿಸಿದರು

Leave a Reply

Your email address will not be published. Required fields are marked *