ಬಾವಿಯಲ್ಲಿ ವ್ಯಕ್ತಿ ಶವ ಪತ್ತೆ

ರಬಕವಿ/ಬನಹಟ್ಟಿ: ಮಾನಸಿಕ ಅಸ್ವಸ್ಥನಾಗಿದ್ದ ವ್ಯಕ್ತಿಯೊಬ್ಬ ಬನಹಟ್ಟಿ ನಗರದ ಬಾವಿ ಬಳಿ ಕುಳಿತುಕೊಂಡ ವೇಳೆ ಆಯತಪ್ಪಿ ಬಿದ್ದಿದ್ದಾನೆ ಎನ್ನಲಾಗಿದ್ದು, ಶನಿವಾರ ಬಾವಿಯಲ್ಲಿ ಶವ ಪತ್ತೆಯಾಗಿದೆ.

ಬನಹಟ್ಟಿ ನಗರದ ಅಶೋಕ ಕಾಲನಿಯ ನಿವಾಸಿ ಶಂಕರ ನಾವಿ (63) ಮೃತ್ತ. ಬನಹಟ್ಟಿ ನಗರದ ಬಸ್ ನಿಲ್ದಾಣ ಹತ್ತಿರದ ನಗರಸಭೆ ಮಳಿಗೆ ಹಿಂಭಾಗದ ನೀರು ತುಂಬಿದ ಹಳೇ ಬಾವಿ ಹತ್ತಿರ ಶಂಕರ ನಾವಿ ಮಂಗಳವಾರ ಮಧ್ಯಾಹ್ನ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದ್ದು, ಶನಿವಾರ ಶವ ತೇಲಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಂಗಳವಾರ ಮಧ್ಯಾಹ್ನವೇ ಮನೆ ಬಿಟ್ಟು ಹೋಗಿದ್ದ ವ್ಯಕ್ತಿ ಮರಳಿ ವಾಪಸ್ ಮನೆ ಬಾರದಿದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು ಎನ್ನಲಾಗಿದೆ. ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.