More

    ಮಹಾ ಪುಂಡಾಟಿಕೆ ವಿರುದ್ಧ ಪ್ರತಿಭಟನೆ

    ರಬಕವಿ/ಬನಹಟ್ಟಿ: ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟು ಪುಂಡಾಟಿಕೆ ಮೆರೆಯುತ್ತಿರುವ ಶಿವಸೇನೆ ಕಾರ್ಯಕರ್ತರ ಕ್ರಮ ಖಂಡಿಸಿ ಅವಳಿ ನಗರದಲ್ಲಿ ಕರ್ನಾಟಕ ರಾಜ್ಯೋತ್ಸವ ಸಮಿತಿ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಪ್ರಶಾಂತ ಚನಗೊಂಡ ಅವರಿಗೆ ಮನವಿ ಸಲ್ಲಿಸಲಾಯಿತು.

    ಸಮಿತಿ ಅಧ್ಯಕ್ಷ ಚಿದಾನಂದ ಸೊಲ್ಲಾಪುರ ಮಾತನಾಡಿ, ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜ ಸುಟ್ಟು ನಾಡಿಗೆ ಅವಮಾನ ಮಾಡಿದ್ದಾರೆ. ಇದೇ ರೀತಿ ಪುಂಡಾಟಿಕೆ ಮುಂದುವರಿಸಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.

    ರಾಜಕೀಯ ಲಾಭಕ್ಕಾಗಿ ಕನ್ನಡ ಮತ್ತು ಮರಾಠಿ ಭಾಷಿಕರ ನಡುವೆ ಬೆಂಕಿ ಹಚ್ಚುತ್ತಿರುವ ಶಿವಸೇನೆ ಶಾಸಕರು, ಕಾರ್ಯಕರ್ತರಿಗೆ ಸಿಎಂ ಉದ್ಧವ್ ಠಾಕ್ರೆ ಪ್ರಮುಖ ಕಾರಣರಾಗಿದ್ದಾರೆ. ಭಾರತ ಮಾತೆ ಮಡಿಲಲ್ಲಿರುವ ನಾವೆಲ್ಲರೂ ಅಣ್ಣತಮ್ಮಂದಿರಂತೆ ಬದುಕಬೇಕೆನ್ನುವುದನ್ನು ಮರೆತು, ಅಧಿಕಾರ ಸಿಕ್ಕಿದೆ ಎಂದು ಮನಬಂದಂತೆ ವರ್ತನೆ ಮಾಡಿದರೆ ಮರಾಠಿಗರೇ ನಿಮ್ಮನ್ನು ಸಹಿಸಲ್ಲ. ಇದು ಪ್ರಜಾಪ್ರಭುತ್ವ ದೇಶ. ಇಲ್ಲಿ ಯಾರೂ ಪಾಳೇಗಾರರಲ್ಲ ಎಂದು ಹೇಳಿದರು.

    ಕರವೇ ಅಧ್ಯಕ್ಷ ಬಸಯ್ಯ ವಸದ ಮಾತನಾಡಿ, ಮಹಾಜನ ವರದಿಯೇ ಅಂತಿಮ ಎಂದು ಲೋಕಸಭೆಯಲ್ಲಿ ಹಿಂದೆಯೇ ಹೇಳಲಾಗಿದೆ. ಕಾಂಗ್ರೆಸ್ ಕೂಡ ಅದನ್ನು ಒಪ್ಪಿಕೊಂಡಿದೆ. ಈಗಾಗಲೇ ಸಮಸ್ಯೆ ಕುರಿತು ವಿಷಯ ತಣ್ಣಗಾಗಿದ್ದರೂ ಮತ್ತೆ ಮಹಾ ಸಿಎಂ ಉದ್ಧವ ಠಾಕ್ರೆ ಸುಪ್ರಿಂಕೋರ್ಟ್‌ನಲ್ಲಿ ಗಡಿ ಕುರಿತು ತಕರಾರು ಹೂಡಿ ಹೊಸ ಅರ್ಜಿ ಸಲ್ಲಿಸಿದ್ದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

    ರಬಕವಿ ಕರವೇ ಘಟಕದ ಅಧ್ಯಕ್ಷ ಬಾಬು ಗಂಗಾವತಿ ಮಾತನಾಡಿದರು. ಈರಣ್ಣ ಗುಣಕಿ, ರವಿ ಮುತ್ತೂರ, ರವಿ ಸಿರಗಾರ, ಪ್ರಕಾಶ ಕುಂಬಾರ, ಶಿವಾನಂದ ಬಾಗಲಕೋಟಮಠ, ರವೀಂದ್ರ ಅಷ್ಟಗಿ, ಸಾಹಿತ್ಯ ಬಳಗದ ಮುಖಂಡ ಕಿರಣ ಆಳಗಿ, ಚೇತನ ಮುತ್ತೂರ, ಸುಭಾಷ ಮದರಖಂಡಿ, ಡಾ.ರವಿ ಜಮಖಂಡಿ, ದಯಾನಂದ ಹಿರೇಮಠ, ಸಾಗರ ನಿಪ್ಪಾಣಿ, ಸಿದ್ದು ಮುಶಪ್ಪಗೋಳ, ಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮಶಿ ಮಗದುಮ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts