16 C
Bangalore
Saturday, December 7, 2019

ಗ್ರಂಥಾಲಯ ಸದ್ಬಳಕೆ ಮಾಡಿಕೊಳ್ಳಿ

Latest News

ಎಲ್ಲ ಸಮುದಾಯಗಳ ನಾಯಕ ಬಾಬಾಸಾಹೇಬ್

ಚಿಕ್ಕಬಳ್ಳಾಪುರ: ಪುತ್ಥಳಿಗೆ ಮಾಲಾರ್ಪಣೆ, ಉಪನ್ಯಾಸ ಸೇರಿ ವಿವಿಧ ಕಾರ್ಯಕ್ರಮಗಳೊಂದಿಗೆ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್‌ರವರ ಪರಿನಿಬ್ಬಾಣ ದಿನ ಶುಕ್ರವಾರ ನಡೆಯಿತು....

ಮತಯಂತ್ರಕ್ಕೆ ಪೊಲೀಸ್ ಸರ್ಪಗಾವಲು

ಹಾವೇರಿ: ಜಿಲ್ಲೆಯ ರಾಣೆಬೆನ್ನೂರ ಹಾಗೂ ಹಿರೇಕೆರೂರ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ತಾಲೂಕಿನ ದೇವಗಿರಿಯಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್​ನ ಸ್ಟ್ರಾಂಗ್ ರೂಂನಲ್ಲಿ ಪೊಲೀಸ್ ಸರ್ಪ...

ಅಳಿದುಳಿದ ಉಳ್ಳಾಗಡ್ಡಿಗೂ ಡಿಮಾಂಡ್

ರಾಣೆಬೆನ್ನೂರ: ಕಳೆದ ಒಂದು ತಿಂಗಳ ಹಿಂದೆ ಸಂಪೂರ್ಣ ಬೆಲೆ ಕಳೆದುಕೊಂಡಿದ್ದ ಉಳ್ಳಾಗಡ್ಡಿ ಬೆಳೆಗೆ ಇದೀಗ ಭಾರಿ ಡಿಮಾಂಡ್ ಬಂದಿದೆ. ದರದಲ್ಲಿ ಕೂಡ ಭಾರಿ...

ಸಿಸಿಐನಿಂದ ಹತ್ತಿ ಖರೀದಿ ಶುರು

ಲಕ್ಷ್ಮೇಶ್ವರ: ಒಂದು ವಾರದಿಂದ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಿಂದಾಗಿ ಭಾರತೀಯ ಹತ್ತಿ ನಿಗಮ (ಸಿಸಿಐ)ದವರು ಬೆಂಬಲ ಬೆಲೆಯಡಿ ಹತ್ತಿ...

ಕೆಲಗೇರಿ ಕೆರೆ ಸಂರಕ್ಷಣೆಗೆ ಕ್ರಮ

ಧಾರವಾಡ: ನಗರದ ಇತಿಹಾಸ ಮತ್ತು ನೈಸರ್ಗಿಕ ಪರಂಪರೆ ಪ್ರತಿನಿಧಿಸುವ ಕೆಲಗೇರಿ ಮತ್ತು ಸಾಧನಕೇರಿ ಕೆರೆಗಳನ್ನು ಸಂರಕ್ಷಿಸಿ ಅಬಿವೃದ್ಧಿಪಡಿಸಲಾಗುತ್ತದೆ. ಕೆರೆಗಳ ಸೌಂದಯೀಕರಣಗೊಳಿಸಿ ಪ್ರವಾಸಿತಾಣಗಳಾಗಿ ರೂಪಿಸಲು...

ರಬಕವಿ/ಬನಹಟ್ಟಿ: ಸಮಾಜದ ಪ್ರತಿಯೊಬ್ಬ ವ್ಯಕ್ತಿ ಗ್ರಂಥಾಲಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜ್ಞಾನ ಪಡೆದುಕೊಳ್ಳಬೇಕು ಎಂದು ಬೆಂಗಳೂರಿನ ರೀಡ್‌ಬುಕ್ ೌಂಡೇಷನ್ ಅಧ್ಯಕ್ಷ ಡಾ.ಎಸ್.ಎಲ್.ಕಾಡದೇವರಮಠ ತಿಳಿಸಿದರು.

ಬನಹಟ್ಟಿಯ ತಮ್ಮಣ್ಣಪ್ಪ ಚಿಕ್ಕೋಡಿ ಮಹಾವಿದ್ಯಾಲಯದಲ್ಲಿ ಕಾಲೇಜು ಗ್ರಂಥಾಲಯದಲ್ಲಿ ಬಳಕೆದಾರರ ಸಂಬಂಧ ನಿರ್ವಹಣೆ ಕುರಿತು ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದ ವಿವಿಧ ಶಾಲೆ-ಕಾಲೇಜುಗಳಲ್ಲಿ ‘ನನ್ನ ಏಳಿಗೆಯ ಶಿಲ್ಪ ನಾನೇ’ ಎಂಬ ಯೋಜನೆಯಡಿ 8ನೇ ವರ್ಗದಿಂದ ಪದವಿ ಮಟ್ಟದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ, ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಲಬುರಗಿ ವಿಶ್ವವಿದ್ಯಾಲಯದ ಗ್ರಂಥಪಾಲಕ ಡಾ.ಸುರೇಶ ಜಂಗೆ, ಬೆಳಗಾವಿಯ ಡಾ.ವಿನಾಯಕ ಬಂಕಾಪುರ, ಧಾರವಾಡದ ಡಾ.ರಮೇಶ ನಾಯಕ, ಸೊಲ್ಲಾಪುರದ ಡಾ. ವಿಜಯಕುಮಾರ ಮೂಲಿಮನಿ, ಹುಬ್ಬಳ್ಳಿಯ ಪ್ರೊ.ಬಿ.ಎಸ್. ಮಾಳವಾಡ ಮಾತನಾಡಿದರು.

ಜನತಾ ಶಿಕ್ಷಣ ಸಂಘದ ಅಧ್ಯಕ್ಷ ಸುಭಾಷಚಂದ್ರ ಭದ್ರನ್ನವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಬಸವರಾಜ ಜಾಡಗೌಡ, ಉಪಾಧ್ಯಕ್ಷ ಶ್ರೀಶೈಲ ಭದ್ರನ್ನವರ, ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಣಕಾರ, ಎಂ.ಎಸ್. ಮುನ್ನೊಳ್ಳಿ ಇದ್ದರು.

ಸುರೇಖಾ ಜಾಧವ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ.ಜಿ.ಆರ್. ಜುನ್ನಾಯ್ಕರ್ ಸ್ವಾಗತಿಸಿದರು. ಗ್ರಂಥಪಾಲಕ ಪ್ರೊ.ವೈ.ಬಿ. ಕೊರಡೂರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾವೇರಿ ಜಗದಾಳ ಪರಿಚಯಿಸಿದರು. ಪ್ರೊ.ರಶ್ಮಿ ಕೊಕಟನೂರ ನಿರೂಪಿಸಿದರು. ಡಾ.ಮಂಜುನಾಥ ಬೆನ್ನೂರ ವಂದಿಸಿದರು.

ಜನತಾ ಸಂಘದ ಆಡಳಿತ ಮಂಡಳಿ ಸದಸ್ಯರು, ರಾಜ್ಯ ಮತ್ತು ಹೊರ ರಾಜ್ಯಗಳ ವಿವಿಧ ವಿಶ್ವವಿದ್ಯಾಲಯಗಳ ಮತ್ತು ಕಾಲೇಜುಗಳ ಗ್ರಂಥಪಾಲಕರು ಪಾಲ್ಗೊಂಡಿದ್ದರು.

 

Stay connected

278,739FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...