ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸೋಣ

ರಬಕವಿ/ಬನಹಟ್ಟಿ: ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ನಗುವ ಹಾಗೆ ಮಾಡಲು ನಮ್ಮ ಮನಸ್ಸುಗಳು ಬದಲಾಗಬೇಕು. ಆ ನಿಟ್ಟಿನಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.

ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡ ಲೋಕಸಭಾ ಚುನಾವಣೆಯ ತೇರದಾಳ ಮತಕ್ಷೇತ್ರದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಂದರೆ ಕೇವಲ ಒಬ್ಬ ವ್ಯಕ್ತಿ ಅಲ್ಲ. ಅದೊಂದು ಸಂಘಟನಾತ್ಮಕ ಶಕ್ತಿ. ಪಕ್ಷದ ಸಿದ್ಧಾಂತಗಳನ್ನು ನಂಬಿ ನಡೆಯಿರಿ. ಏನು ಅರಿಯದ ಯುವ ಸಮೂಹಕ್ಕೆ ಸುಳ್ಳು ಭ್ರಮೆ ಮೂಡಿಸುತ್ತಿದ್ದಾರೆ. ಬಿಜೆಪಿಯವರು ಇತಿಹಾಸ ತಿರುಚುತ್ತಿದ್ದಾರೆ. ಕಾಂಗ್ರೆಸ್ ಶಕ್ತಿ ಕುಗ್ಗಿಸುವ ಕೆಲಸವಾಗುತ್ತಿದೆ. ಇದರ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಸ್ವಾರ್ಥಕ್ಕಾಗಿ ದುಡಿಯದೆ ಸೇವೆಗಾಗಿ ದುಡಿಯಿರಿ ಎಂದರು.

ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ಸಂಗಪ್ಪ ಕುಂದಗೋಳ, ನೀಲಕಂಠ ಮುತ್ತೂರ, ನಿಜಗುಣಿ ಶಿರಹಟ್ಟಿ, ನಸೀಮ ಮೊಖಾಸಿ, ಉಸ್ಮಾನ ಲೆಂಗ್ರೆ, ಸತ್ಯಪ್ಪ ಮಗದುಮ, ಬಿ.ಎ. ಉಳ್ಳಾಗಡ್ಡಿ, ಹುಮಾಯೂನ ಮುಲ್ಲಾ, ಸಂಗಪ್ಪ ಉಪ್ಪಲದಿನ್ನಿ, ರಾಹುಲ ಕಲಾಲ, ಶ್ರೀಪಾದ ಗುಂಡಾ, ಬಸವರಾಜ ದೇವನ್ನವರ, ಬುಜಬಲಿ ವೆಂಕಟಾಪುರ, ಸುಕುಮಾರ ಪಾಟೀಲ, ಚಿದಾನಂದ ಗಾಳಿ ಸೇರಿ ಇತರರಿದ್ದರು.

ಎಲ್ಲವನ್ನೂ ಸಹಿಸಿಕೊಳ್ಳುವವನಿಗೆ ನಾಯಕತ್ವ ಗುಣ ಇರುತ್ತದೆ. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷವನ್ನು ಬಲಿಷ್ಠಗೊಳಿಸಿ.
– ಉಮಾಶ್ರೀ ಮಾಜಿ ಸಚಿವೆ