ಪೋಸ್ಕೋ ಕಾಯ್ದೆಯಡಿ ಮೂವರು ಬಂಧನ

ರಬಕವಿ/ಬನಹಟ್ಟಿ: ಬಾಲಕಿಯನ್ನು ಪುಸಲಾಯಿಸಿ ಅಪರಣ ಮಾಡಿದ ಆರೋಪದ ಮೇರೆಗೆ ಮೂವರನ್ನು ಬನಹಟ್ಟಿ ಪೊಲೀಸರು ಬಂಧಿಸಿದ್ದಾರೆ.

ಸಚಿನ್ ನಾರಾಯಣ ಕಾಜವೆ, ಸಂತೋಷ ನಾರಾಯಣ ಕಾಜವೆ ಹಾಗೂ ಬೇಬಿ ನಾರಾಯಣ ಕಾಜವೆ ಬಂಧಿತರು. ರಬಕವಿ-ಬನಹಟ್ಟಿ ತಾಲೂಕಿನ ರಾಂಪುರಿನ ಬಾಲಕಿ ತಂದೆ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಪೋಸ್ಕೋ ಕಾಯ್ದೆಯಡಿ ಬಂಧಿಸಿದ್ದಾರೆ. ಬಾಲಕಿ ಸುರಕ್ಷಿತವಾಗಿ ಮರಳಿದ್ದಾಳೆ. ಈ ಕುರಿತು ಸಿಪಿಐ ಅಶೋಕ ಸದಲಗಿ, ಪಿಎಸ್‌ಐ ಎಸ್.ಎಂ. ಅವಜಿ ತನಿಖೆ ಮುಂದುವರಿಸಿದ್ದಾರೆ.