More

  ಶ್ರೀಶೈಲ ಜಗದ್ಗುರುಗಳ ಜನವರಿ ತಿಂಗಳ ಧಾರ್ಮಿಕ ಪ್ರವಾಸ

  ರಬಕವಿ/ಬನಹಟ್ಟಿ: ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಜನವರಿ ತಿಂಗಳಲ್ಲಿ ರಾಜ್ಯದ ವಿವಿಧೆಡೆ ಧಾರ್ಮಿಕ ಪ್ರವಾಸ ಕೈಗೊಳ್ಳಲಿದ್ದಾರೆ.

  ಜ. 3 ರಂದು ಬೈಲಹೊಂಗಲ ತಾಲೂಕಿನ ದೊಡವಾಡದಲ್ಲಿ ಜಡಿಸಿದ್ಧೇಶ್ವರ ಶ್ರೀಗಳ ಅನುಷ್ಠಾನ ಮಂಗಲ ಸಮಾರಂಭದ ಸಾನ್ನಿಧ್ಯ ವಹಿಸುವರು. 4 ಮತ್ತು 5 ರಂದು ಅರಸೀಕೆರೆಯಲ್ಲಿ ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮ ಜಾಗೃತಿ ಸಮಾರಂಭದಲ್ಲಿ ಭಾಗವಹಿಸುವರು. 7 ರಂದು ಹರಿಹರದಲ್ಲಿ ಶ್ರೀಶೈಲ ಪೀಠದ ಜಗದ್ಗುರು ಪಂಚಾಚಾರ್ಯ ವಿಶ್ವಧರ್ಮ ವಿದ್ಯಾಪೀಠದಲ್ಲಿ ಸಮನ್ವಯಸಿರಿ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸುವರು. 11 ರಂದು ಹುಬ್ಬಳ್ಳಿಯಲ್ಲಿ ಯೋಗದ ನಡಿಗೆ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸುವರು. 12 ರಂದು ಬೈಲಹೊಂಗಲ ತಾಲೂಕಿನ ಕಿತ್ತೂರಿನಲ್ಲಿ ಗೋ ವಂಶ ಸಂರಕ್ಷಣಾ ವರದಿ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸುವರು. 13 ರಂದು ಚಿಕ್ಕೋಡಿ ತಾಲೂಕಿನ ಯಡೂರದಲ್ಲಿ ಹನ್ನೊಂದು ದಿನಗಳವರೆಗೆ ಜರುಗುವ ವೀರಭದ್ರೇಶ್ವರ ಲಿಂಗಕ್ಕೆ ಹನ್ನೊಂದು ಲಕ್ಷ ಬಿಲ್ವಾರ್ಚನೆ ಮತ್ತು ರುದ್ರಾಕ್ಷಾರ್ಚನೆ ಸಮಾರಂಭಕ್ಕೆ ಚಾಲನೆ ನೀಡುವರು. 15 ರಂದು ಚಿಕ್ಕೋಡಿ ತಾಲೂಕಿನ ಕಲ್ಲೋಳದ ಕೃಷ್ಣಾ ನದಿ ತಟದಲ್ಲಿ ಸಂಕ್ರಮಣದ ಪುಣ್ಯಸ್ನಾನ, ಭಕ್ತರಿಗೆ ಕೃಷ್ಣಾ ಜಲಾಶೀರ್ವದಿಸುವರು. ನಂತರ ಬೃಹತ್ ವೇದಿಕೆಯಲ್ಲಿ ನೂರಾರು ಸಾಧು ಸಂತರ ಸಮ್ಮುಖದಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿಸುವರು. 20 ರಂದು ನಾಗಠಾಣದಲ್ಲಿ ಮಹಾದೇವಪ್ಪ ಬಂಡಿ ಅವರ ನೂತನ ಮನೆಯಲ್ಲಿ ಇಷ್ಟಲಿಂಗಪೂಜೆ ನೆರವೇರಿಸುವರು. 22 ರಂದು ಸವದತ್ತಿ ತಾಲೂಕಿನ ಹೂಲಿಯಲ್ಲಿ ಸಾಂಬಯ್ಯನ ಮಠದ ಜಾತ್ರಾ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸುವರು. 23 ರಿಂದ 25 ರ ವರೆಗೆ ಚಿಕ್ಕೋಡಿ ತಾಲೂಕಿನ ಯಡೂರದಲ್ಲಿ ವೀರಭದ್ರೇಶ್ವರ ವಿಶಾಳಿ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಲಾದ ವಿಶ್ವಚೇತನ ಪ್ರಶಸ್ತಿ ಪ್ರದಾನ, ಮಹಾರಥೋತ್ಸವ ಮೊದಲಾದ ಕಾರ್ಯಗಳ ಸಾನ್ನಿಧ್ಯ ವಹಿಸುವರು. 26 ರಂದು ಜಮಖಂಡಿ ತಾಲೂಕಿನ ಹಿಪ್ಪರಗಿಯಲ್ಲಿ ಸಿದ್ಧರಾಮೇಶ್ವರ ಜನಕಲ್ಯಾಣ ಪ್ರತಿಷ್ಠಾನದ ಶಾಲಾ ಸಮೂಹಗಳ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸುವರು. 29 ಮತ್ತು 30 ರಂದು ಮಹಾರಾಷ್ಟ್ರದ ಗಡಹಿಂಗ್ಲಜ್ ತಾಲೂಕಿನ ನೂಲದಲ್ಲಿ ಹಿರೇಮಠದ ನೂತನ ಶ್ರೀಗಳ ಪಟ್ಟಾಧಿಕಾರ ಸಮಾರಂಭದ ಸಾನ್ನಿಧ್ಯ ವಹಿಸುವರು. ಅಂದು ಮಧ್ಯಾಹ್ನ 3ಕ್ಕೆ ಬೆಳಗಾವಿಯ ಮಹಾಲಕ್ಷ್ಮೀ ದೇವಸ್ಥಾನ ಜಾತ್ರಾಮಹೋತ್ಸವದ ಸಾನ್ನಿಧ್ಯ ವಹಿಸುವರು. 31ರಂದು ಹೂವಿನಹಡಗಲಿ ತಾಲೂಕಿನ ಸೋಗಿ ಪುರವರ್ಗ ಕಟ್ಟೆಮನಿ ಮಠದ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸುವರು ಎಂದು ಶ್ರೀಶೈಲ ಪೀಠದ ವಾರ್ತಾಧಿಕಾರಿ ರಬಕವಿ ಬನಹಟ್ಟಿಯ ಬಸಯ್ಯ ವಸ್ತ್ರದ ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts