ಹಸಿರು ಪರಿಸರ ನಿರ್ಮಾಣಕ್ಕೆ ಪಣ ತೊಡಿ

ರಬಕವಿ-ಬನಹಟ್ಟಿ: ಹಸಿರು ಪರಿಸರ ನಿರ್ಮಿಸಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಜ್ಞಾನೋದಯ ಶಾಲೆ ಮುಖ್ಯ ಶಿಕ್ಷಕಿ ವರಮಹಾಲಕ್ಷ್ಮೀ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ರಾಂಪುರದ ಜ್ಞಾನೋದಯ ಪ್ರೌಢಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೆಟ್ಟ ಗಿಡವನ್ನು ಪೋಷಣೆ ಮಾಡಿ ಪರಿಸರ ಸಮತೋಲನ ಕಾಪಾಡಲು ಮುಂದಾಗಬೇಕು. ಪರಿಸರದ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ತಾಲೂಕು ಸಮನ್ವಯಾಕಾರಿ ಸವಿತಾ ಚಾಕಲಬ್ಬಿ, ಸವಿತಾ ಹೊಸೂರ, ಶೈಲಜಾ ಹೊಸಕೋಟಿ, ವಿದ್ಯಾ ಇತರರಿದ್ದರು.