More

    ದೇಶ ರಕ್ಷಣೆಗೆ ಹಿಂದುಗಳು ಸಂಘಟಿತರಾಗಲಿ

    ರಬಕವಿ/ಬನಹಟ್ಟಿ: ಯಾವ ದೇಶದಲ್ಲಿ ರಾಷ್ಟ್ರೀಯತೆ ಗಟ್ಟಿ ಇರುತ್ತದೆಯೋ ಆ ರಾಷ್ಟ್ರ ಜಗತ್ತನ್ನು ಆಳಲು ಸಾಧ್ಯ ಎಂದು ಹಿಂದು ಜಾಗರಣ ವೇದಿಕೆ ಸಂಯೋಜಕ ಶಿವಾನಂದ ಬಡಿಗೇರ ಹೇಳಿದರು.

    ರಬಕವಿ ಬನಹಟ್ಟಿ ತಾಲೂಕಿನ ರಾಂಪುರ ನಗರದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಷ್ಠಾನ ಹಾಗೂ 157ನೇ ವಿವೇಕ ಜನ್ಮೋತ್ಸವ ಕಾರ್ಯಕ್ರಮ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

    ದೇಶದ ರಾಷ್ಟ್ರೀಯತೆ, ಹಿಂದುತ್ವ, ಈ ದೇಶದ ಪರಂಪರೆ ತಿಳಿದುಕೊಳ್ಳಲು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಬೇಕು. ಹಿಂದು ಧರ್ಮ ಅತ್ಯಂತ ಪ್ರಾಚೀನ ಧರ್ಮವಾಗಿದೆ. ದೇಶದ ಮೂಲ ಸಂಸ್ಕೃತಿ, ಮೂಲ ಮಂತ್ರ, ರಾಷ್ಟ್ರೀಯತೆ, ಜೀವನ ಪದ್ಧತಿ ಹಿಂದುತ್ವವಾಗಿದೆ. ಹಿಂದುಗಳಿಗೆ ಇರುವ ಒಂದೇ ದೇಶ ಭಾರತ. ಹಿಂದುಗಳಿಗೆ ಭಾರತ ಭಾರತವಾಗಿ ಉಳಿಯಬೇಕಾದರೆ ಸಂಘಟನೆಯಾಗಬೇಕಾಗಿದೆ ಎಂದರು.

    ರಾಂಪುರ ಸಂಗಮೇಶ್ವರ ಶ್ರೀಗಳು ಮಾತನಾಡಿ, ಅನಂತ ಶಕ್ತಿ, ಧೈರ್ಯ, ತಾಳ್ಮೆಯೊಂದಿಗೆ ಮುಂದೆ ನುಗ್ಗಿ ದೇಶ, ಧರ್ಮ, ಪರಂಪರೆ ರಕ್ಷಣೆಗೆ ತ್ಯಾಗಿಯಾಗುವಲ್ಲಿ ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಅಳವಡಿಸಿಕೊಳ್ಳಿ ಎಂದು ಹೇಳಿದರು.

    ನಿವೃತ್ತ ಉಪನ್ಯಾಸಕ ಎಂ.ಎಸ್. ಬದಾಮಿ ಅಧ್ಯಕ್ಷತೆ ವಹಿಸಿದ್ದರು. ಮುಖೇಶ ತೇಲಿ, ಶಾಸಕ ಸಿದ್ದು ಸವದಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಶಿವಾನಂದ ಗಾಯಕವಾಡ, ಪುಂಡಲೀಕ ಪಾಲಭಾಂವಿ, ಪರುಶುರಾಮ ಬಸವ್ವಗೋಳ, ಈರಣ್ಣ ಚಿಂಚಖಂಡಿ, ರಾಜು ಅಂಬಲಿ, ಬಸನಗೌಡ ಪಾಟೀಲ, ಸುರೇಶ ಅಕ್ಕಿವಾಟ, ಬಸವರಾಜ ತೆಗ್ಗಿ, ಪ್ರಭು ಪೂಜಾರಿ ಇತರರು ಇದ್ದರು. ಪ್ರಕಾಶ ಸಿಂಗನ ಸ್ವಾಗತಿಸಿದರು. ಎಂ.ಎ. ಹೊಸಮನಿ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts