PHOTOS| ಬೆಳಗಾವಿ ಬ್ಯೂಟಿ ಲಕ್ಷ್ಮೀ ರೈ ಬಿಕಿನಿ ಅವತಾರಕ್ಕೆ ಬೋಲ್ಡ್​ ಆದ ಅಭಿಮಾನಿಗಳು!

ಬೆಂಗಳೂರು: ದಕ್ಷಿಣ ಭಾರತದ ಜನಪ್ರಿಯ ನಟಿ ಲಕ್ಷ್ಮೀ ರೈ ಅವರು ಬಿಕಿನಿ ತೊಟ್ಟು ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂನಲ್ಲಿ ಹರಿಬಿಟ್ಟಿರುವ ಫೋಟೊವೊಂದು ವೈರಲ್​ ಆಗಿದ್ದು, ಪಡ್ಡೆ ಹುಡುಗರು ನಿದ್ದೆಗೆಡಿಸಿದೆ.

ಪಿಂಕ್​ ಬಣ್ಣದ ಬಿಕಿನಿ ತೊಟ್ಟು ಕಣ್ಣಿಗೆ ಕೂಲಿಂಗ್​ ಗ್ಲಾಸ್​ ಹಾಕಿಕೊಂಡು ಬೀಚ್​ವೊಂದರ ಮುಂದೆ ಕ್ಯಾಮರಾಗೆ ಪೋಸ್​ ನೀಡಿರುವ ಫೋಟೊವನ್ನು ಲಕ್ಷ್ಮೀ ರೈ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದು, ನೀವು ಅದನ್ನು ಹೇಗೆ ಮಾಡುತ್ತೀರಿ ನನಗೆ ತಿಳಿದಿಲ್ಲ ಎಂದು ಯಾರೋ ಒಬ್ಬ ನನಗೆ ಹೇಳಿದ್ದ. ನನಗೆ ಆಯ್ಕೆ ನೀಡಲಾಗಿಲ್ಲ ಎಂದು ಅವನಿಗೆ ಹೇಳುತ್ತೇನೆ ಎಂದು ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ. ಫೋಟೊ ವೈರಲ್​ ಆಗಿದ್ದು, ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿ, ಲಕ್ಷ್ಮೀ ರೈ ಬೋಲ್ಡ್​ ನೋಟಕ್ಕೆ ಫಿದಾ ಆಗಿದ್ದು, ಕಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ.

ಲಕ್ಷ್ಮೀ ರೈ ಚಿತ್ರರಂಗಕ್ಕೆ ಬಂದು 14 ವರ್ಷಗಳಾದರೂ ಅವರ ಹಾಟ್​​ ಬ್ಯೂಟಿ ಮಾತ್ರ ಕಡಿಮೆಯಾಗಿಲ್ಲ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟನೆ ಮಾಡಿರುವ ಲಕ್ಷ್ಮಿ ಗಾಸಿಪ್​​​​ ಸುದ್ದಿಗಳಿಂದಲೇ ಪ್ರಸಿದ್ಧರಾಗಿದ್ದಾರೆ. ಕನ್ನಡದಲ್ಲಿ ಸ್ನೇಹನಾ ಪ್ರೀತಿನಾ ಮತ್ತು ಕಲ್ಪನಾ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಜೂಲಿ ಚಿತ್ರದ ಮೂಲಕ ಬಾಲಿವುಡ್​​ಗೆ ಪ್ರವೇಶಿಸಿದ್ದರು. ಅವರು ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಕನ್ನಡದಲ್ಲಿ ಝಾನ್ಸಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಲಕ್ಷ್ಮಿ ರೈ 2005ರಲ್ಲಿ ತಮಿಳು ಭಾಷೆಯ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಮೂಲತಃ ಕನ್ನಡಿಗಳಾಗಿರುವ ಲಕ್ಷ್ಮೀ ರೈ ಹುಟ್ಟಿದ್ದು, ಬೆಳಗಾವಿಯಲ್ಲಿ. ಹೀಗಾಗಿ ಇವರನ್ನು ಕುಂದಾನಗರಿ ಸುಂದರಿ ಎಂದು ಕರೆಯಲಾಗುತ್ತದೆ. (ಏಜೆನ್ಸೀಸ್​)

View this post on Instagram

Water babies @sonnalliseygall @lostjourno ❤️

A post shared by Raai Laxmi (@iamraailaxmi) on

View this post on Instagram

Givers have to set limits bcoz takers rarely do.👍

A post shared by Raai Laxmi (@iamraailaxmi) on

View this post on Instagram

#Neeya2 🐍 coming soon this may 10th 💖❤️🥰

A post shared by Raai Laxmi (@iamraailaxmi) on

Leave a Reply

Your email address will not be published. Required fields are marked *