ಹುಟ್ಟಿನಿಂದಲೇ ಕಾಲುಗಳಿಲ್ಲದ ಯುವಕ: ವಿಡಿಯೋ ವೈರಲ್​ ಆದ ಬೆನ್ನಲ್ಲೇ ಬಹುದೊಡ್ಡ ಕನಸು ನನಸಾಗ್ತಿದೆ!

ಕೊಲ್ಲಂ: ಸಾಮಾಜಿಕ ಜಾಲತಾಣ ಎಷ್ಟು ಅಪಾಯಕಾರಿಯೋ ಅಷ್ಟೇ ಉಪಕಾರಿಯು ಹೌದು. ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ಅದು ಅವಲಂಬಿತವಾಗಿರುತ್ತದೆ. ಕೇರಳದಲ್ಲಿ ನಡೆದ ಈ ಒಂದು ಘಟನೆ ಜಾಲತಾಣದ ಮಹತ್ವವನ್ನು ಸಾರುತ್ತದೆ. ಇತ್ತೀಚೆಗಷ್ಟೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಹುಟ್ಟಿನಿಂದಲೇ ಕಾಲುಗಳನ್ನು ಕಳೆದುಕೊಂಡಿರುವ ವಿಕಲಚೇತನ ಯುವಕ ಹಾಗೂ ಕಾಲೇಜು ವಿದ್ಯಾರ್ಥಿ ಅಲಿಫ್ ಮೊಹಮ್ಮದ್ ಅವರನ್ನು ಇಬ್ಬರು ಫ್ರೆಂಡ್ಸ್​ ಹೊತ್ತು ಸಾಗುವುದು ವಿಡಿಯೋದಲ್ಲಿತ್ತು. ವಿಡಿಯೋ ಜತೆ ಅದರ ಹಿಂದಿನ ಮನಕಲಕುವ ಕತೆಯೂ ಕೂಡ ವೈರಲ್​ ಆಗಿತ್ತು. … Continue reading ಹುಟ್ಟಿನಿಂದಲೇ ಕಾಲುಗಳಿಲ್ಲದ ಯುವಕ: ವಿಡಿಯೋ ವೈರಲ್​ ಆದ ಬೆನ್ನಲ್ಲೇ ಬಹುದೊಡ್ಡ ಕನಸು ನನಸಾಗ್ತಿದೆ!