More

  ಉತ್ತರ ಪ್ರದೇಶ ಚುನಾವಣೆ ಮೇಲೆ ಲಖಿಂಪುರ್​ ಖೇರಿ ಹಿಂಸಾಚಾರ ಪ್ರಕರಣ ಪ್ರಭಾವ ಹೇಗಿರಲಿದೆ? ಬಿಜೆಪಿ ಮಹತ್ವದ ಸಭೆ

  ನವದೆಹಲಿ: ಕಳೆದ ವಾರ ನಡೆದ ಲಖಿಂಪುರ್​ ಖೇರಿ ಹಿಂಸಾಚಾರ ಘಟನೆಯು ಇಡೀ ದೇಶಾದ್ಯಂತ ಬಹಳ ಚರ್ಚೆಯನ್ನು ಹುಟ್ಟುಹಾಕಿದ್ದು, ಉತ್ತರ ಪ್ರದೇಶದ ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ಪ್ರಭಾವ ಬೀರುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುದೀರ್ಘ ನಾಲ್ಕು ಗಂಟೆಗಳ ಕಾಲ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.

  ಕಳೆದ ಭಾನುವಾರ (ಅ.3) ಲಖಿಂಪುರ್​ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಸಚಿವ ಅಜಯ್​ ಮಿಶ್ರಾ ಪುತ್ರ ಆಶಿಶ್​ ಮಿಶ್ರಾ, ಕಾರು ಹರಿಸಿ, ನಾಲ್ವರು ರೈತರನ್ನು ಬಲಿಪಡೆದಿರುವ ಆರೋಪ ಕೇಳಿಬಂದಿದ್ದು, ಉತ್ತರ ಪ್ರದೇಶದ ಪೊಲೀಸರಿಂದ ಬಂಧನಕ್ಕೂ ಒಳಗಾಗಿದ್ದಾರೆ. ಈ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್​ ಉತ್ತರ ಪ್ರದೇಶ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿಯು ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.

  ಇನ್ನು ಮಗ ಮಾಡಿರುವ ಅನಾಹುತದಿಂದ ತಂದೆ ಅಜಯ್​ ಮಿಶ್ರಾ ರಾಜೀನಾಮೆ ನೀಡಬೇಕೆಂಬ ಕೂಗು ಕೇಳಿಬಂದಿತ್ತು. ಆದರೆ, ಸದ್ಯ ಅದು ನಡೆಯುವ ಸಾಧ್ಯತೆ ಇಲ್ಲ. ಕಳೆದ ವಾರ ಅಮಿತ್​ ಷಾ ಜತೆ ಮಾತನಾಡಿರುವ ಸಚಿವ ಅಜಯ್​ ಮಿಶ್ರಾ, ನಾನಾಗಲಿ, ನನ್ನ ಮಗನಾಗಲಿ ಘಟನಾ ಸ್ಥಳದಲ್ಲಿ ಇರಲಿಲ್ಲ ಎಂದಿದ್ದಾರೆ. ಆದರೆ, ಅಗತ್ಯವಿದ್ದಲ್ಲಿ ತನಿಖೆಯ ಸಂಶೋಧನೆಗಳ ಆಧಾರದ ಮೇಲೆ ಮತ್ತೆ ರಾಜೀನಾಮೆ ವಿಚಾರವನ್ನು ಪರಿಶೀಲಿಸುವ ಸಾಧ್ಯತೆಗಳು ಇವೆ ಎಂದು ಮೂಲಗಳು ಸೂಚಿಸಿವೆ.

  ನಿನ್ನೆ ನಡೆದ ಸಭೆಯಲ್ಲೂ ಬಿಜೆಪಿ ಸಚಿವರು ರಾಜೀನಾಮೆ ಬಗ್ಗೆ ಚರ್ಚಿಸಿದೆ ಎಂದು ತಿಳಿದುಬಂದಿದೆ. ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಎಲ್​. ಸಂತೋಷ್​, ಉತ್ತರ ಪ್ರದೇಶದ ಉಸ್ತುವಾರಿ ರಾಧಾ ಮೋಹನ್​ ಸಿಂಗ್​, ಚುನಾವಣ ಉಸ್ತುವಾರಿ ಧರ್ಮೇಂದ್ರ ಪ್ರಧಾನ್​, ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್​, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸುನೀಲ್​ ಬನ್ಸಾಲ್​ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಉಪಸ್ಥಿತರಿದ್ದರು.

  ರೈತರ ಸಾವುಗಳು ಮತ್ತು ಆಶಿಶ್ ಮಿಶ್ರಾ ಬಂಧನದ ಕುರಿತು ರಾಜ್ಯ ಪೊಲೀಸರ ವಿಳಂಬ ಪ್ರತಿಕ್ರಿಯೆ ರೈತರನ್ನು ಕೆರಳಿಸಿದೆ. ರಾಜ್ಯದ ಜನಸಂಖ್ಯೆಯ ಶೇಕಡ 11 ರಷ್ಟಿರುವ ಮತ್ತು ಬಿಜೆಪಿಯೊಂದಿಗೆ ಅಸಮಾಧಾನಗೊಂಡಂತೆ ಕಾಣುವ ಬ್ರಾಹ್ಮಣರು ಅಥವಾ ರೈತರನ್ನು ದೂರವಿಡುವ ಎರಡು ಆಯ್ಕೆಗಳು ಬಿಜೆಪಿ ಮುಂದಿದೆ. ಮಿಶ್ರಾ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಇವರ ಜನಸಂಖ್ಯೆ ತೀರಾ ಕಡಿಮೆ. ಇನ್ನು ರಾಜ್ಯದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಕ್ಷೇತ್ರ ದಲಿತ ಮತಬ್ಯಾಂಕ್ ಉತ್ತುಂಗಕ್ಕೇರಿದಾಗ, ಸಿಎಂ ಆಗಿ ರಜಪೂತ್​ ಸಮುದಾಯದ ಯೋಗಿ ಆದಿತ್ಯನಾಥ್ ಅವರನ್ನು ಉನ್ನತ ಹುದ್ದೆಗೆ ಆಯ್ಕೆ ಮಾಡಿರುವುದು ಬ್ರಾಹ್ಮಣರ ಅಸಮಾಧಾನಕ್ಕೂ ಕಾರಣವಾಗಿದೆ.

  ಎರಡನೇ ಅವಧಿಗೂ ಸಿಎಂ ಯೋಗಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಬಿಜೆಪಿ ಸಮುದಾಯದ ಜನರ ಒಲವನ್ನು ಮರಳಿ ಪಡೆಯಲು ಶ್ರಮಿಸುತ್ತಿದೆ. ಆದರೆ, ಇದೀಗ ಲಖಿಂಪುರ್​ ಖೇರಿ ಘಟನೆಯು ಬಿಜೆಪಿಗರನ್ನು ಅಡಕತ್ತರಿಗೆ ಸಿಲುಕಿಸಿದೆ. ಸಚಿವರು ಪುತ್ರ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದು, ಅವರಿಗೆ ಬೆಂಬಲವಾಗಿ ನಿಂತರೆ ರೈತರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಭಯ ಕಾಡುತ್ತಿದೆ. ಈ ಎಲ್ಲ ಅಂಶಗಳನ್ನು ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಯುಪಿ ಅಲ್ಲಿ ಮುಂದೆ ಯಾವ ಬದಲಾವಣೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

  ಸ್ನೇಹಾನಾ ಸೈಮಾನಾ?; ವಿಶ್ವಸಂಸ್ಥೆಯಲ್ಲಿ ಸಿಡಿದ ಲೇಡಿ ಮಿಸೈಲ್ಸ್

  21ರಿಂದ 1-5ನೇ ತರಗತಿ; ಬಿಸಿಯೂಟದ ಜತೆಗೆ ಪ್ರೖೆಮರಿ ಸ್ಕೂಲ್ ಶುರು..

  ಪಂಚಾಯಿತಿಗೆ ಪವರ್: 29 ಇಲಾಖೆಗಳ ಜವಾಬ್ದಾರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ..

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts