ಪಕ್ಷಾಂತರ ನಿಷೇಧ ಕಾಯ್ದೆ ತಿದ್ದುಪಡಿ ಅವಶ್ಯ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯ

ಬೆಂಗಳೂರು: ಪಕ್ಷಾಂತರ ದೊಡ್ಡ ಸಮಸ್ಯೆ. ಪಕ್ಷಾಂತರ ನಿಷೇಧ ಕಾಯ್ದೆ ತಿದ್ದುಪಡಿ ಅವಶ್ಯವಿದೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡಯ ಹೇಳಿದರು.

ಪ್ರೆಸ್ ಕ್ಲಬ್ ಆಯೋಜಿಸಿದ್ದ ‘ನವಭಾರತದ ನಿರ್ಮಾಣದಲ್ಲಿ ಮಾಧ್ಯಮದ ಪಾತ್ರ’ಕುರಿತ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.

ಪಕ್ಷಾಂತರ ನಿಷೇಧ ಸಬಲವಾಗಿಲ್ಲ. ಸಾಕಷ್ಟು ದೋಷಗಳು ಈ ಕಾಯ್ದೆಯಲ್ಲಿವೆ. ಈಗ ಈ ಕಾಯ್ದೆ ತಿದ್ದುಪಡಿಗೆ ಕಾಲ ಕೂಡಿ ಬಂದಿದೆ ಎಂದರು. ಕೆಲವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೆ ಪಕ್ಷಕ್ಕೆ ಹೋಗುತ್ತಾರೆ. ಆ ಸಮಯದಲ್ಲಿ ಯಾರಿಗೂ ಯಾವುದೇ ಹುದ್ದೆಗಳನ್ನು ನೀಡಬಾರದು. ಕಾನೂನಿನಲ್ಲಿ ಸ್ಪಷ್ಟತೆ ಕೂಡ ಇದ್ದರೆ ಇದಕ್ಕೆ ತಡೆಒಡ್ಡಬಹುದು. ಪಕ್ಷಾಂತರ ಮಾಡುವುದೇ ಕೆಲವರಿಗೆ ರುಚಿಸುತ್ತದೆ ಎಂದು ವಿಷಾಧಿಸಿದರು.

ಪಕ್ಷಾಂತರ ಕಾಯ್ದೆ ವಿಚಾರದಲ್ಲಿ ಸ್ಪೀಕರ್,ಚೇರ್ಮನ್ ಅವರಿಗೆ ಕೆಲವು ಅಧಿಕಾರ ಕೊಡಲಾಗಿದೆ. ಆದರೆ, ಅವರು, ತೀರ್ಮಾನ ತೆಗೆದುಕೊಳ್ಳುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಅದೇ ರೀತಿ ನ್ಯಾಯಾಲಯದಲ್ಲೂ ಈ ಪ್ರಕರಣಗಳಿಗೆ ಶೀಘ್ರಗತಿಯಲ್ಲಿ ನ್ಯಾಯ ಸಿಗುವುದಿಲ್ಲ. ಎಷ್ಟೋ ವೇಳೆ ಪಕ್ಷಾಂತರ ಮಾಡಿವವರ ಅಧಿಕಾರಾವಧಿಯೇ ಮುಗಿದು ಹೋಗುತ್ತದೆ. ಹೀಗಾಗದಂತೆ ನ್ಯಾಯಾಲಯ ತೀರ್ಪು ನೀಡುವ ವಿಚಾರದಲ್ಲೂ ಕಾಲಮಿತಿ ನಿಗದಿ ಅವಶ್ಯವಿದೆ ಎಂದು ಅಭಿಪ್ರಾಯಪಟ್ಟರು.

ಜನರು, ಮಕ್ಕಳು ಎಲ್ಲರೂ ಲೋಕಸಭೆ ಕಲಾಪವನ್ನು ನೋಡುತ್ತಿರುತ್ತಾರೆ. ಆದರೆ , ಅಲ್ಲಿ ನಡೆಯುವ ಕೆಳಹಂತದ ನಡವಳಿಕೆ ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಮಾಧ್ಯಮಗಳಲ್ಲಿ ಈಗ ನೆಗೆಟಿವ್ ಸುದ್ದಿಗಳಿಗೆ ಈಗ ಮಾನ್ಯತೆ ಸಿಗುತ್ತಿದೆ. ಯಾರೋ ಒಬ್ಬ ಜನಪ್ರತಿನಿಧಿ ಒಳ್ಳೆಯ ಭಾಷಣ ಮಾಡಿದರೆ ಮಾಧ್ಯಮಗಳು ಅದನ್ನು ಹೈಲೈಟ್ ಮಾಡುವುದಿಲ್ಲ. ಜನಪ್ರತಿನಿಧಿಗಳ ಉತ್ತಮ ಕಾರ್ಯಗಳನ್ನೂ ಕೂಡ ಮಾಧ್ಯಮಗಳು ತೋರಿಸಬೇಕು ಎಂದು ಸಲಹೆ ನೀಡಿದರು. ದೇಶದ ಏಳಿಗೆಯಲ್ಲಿ ಮಾಧ್ಯಮ ಬಹುಮುಖ್ಯ ಪಾತ್ರ ವಹಿಸಿದೆ. ಮಾಧ್ಯಮ ಜನತೆಗೆ ಮಾಹಿತಿ ನೀಡುತ್ತದೆ. ನಾನು ಮಾಧ್ಯಮಕ್ಕೆ ಧನ್ಯವಾದ ತಿಳಿಸುತ್ತೇನೆ. ನನ್ನ ವಿವಿಧ ಹುದ್ದೆಗಳಿಗೆ, ಏಳಿಗೆಗೆ ಮಾಧ್ಯಮ ಕೂಡ ಕಾರಣ ಎಂದು ಹೇಳಿದರು. ಮಾಧ್ಯಮಗಳಲ್ಲಿ ವರದಿ ಮತ್ತು ವಿಮರ್ಶೆ ನಡುವೆ ಅಂತರ ಇರಬೇಕು. ನ್ಯೂಸ್ ಮತ್ತು ವ್ಯೂಸ್ ಎರಡನ್ನೂ ಸೇರಿಸಿಬಿಟ್ಟರೆ ನ್ಯಾಯ ಒದಗಿಸದಂತಲ್ಲ ಎಂದರು.

ಜಾತಿ, ಸಮುದಾಯ, ಹಣಗಳು ರಾಜಕೀಯದಲ್ಲಿ ಪ್ರಾಬಲ್ಯ ಪಡೆಯುತ್ತಿವೆ. ಆದ್ದರಿಂದ ರಾಜಕೀಯ ಪಕ್ಷಗಳು ಸ್ಪಷ್ಟ ನೀತಿ ಸಂಹಿತೆ ಹೊಂದಿರಬೇಕು. ಅದನ್ನು ಸಂಸತ್ತಿನ ಒಳಗೂ ಹಾಗೂ ಹೊರಗೂ ಖಾತ್ರಿಪಡಿಸಬೇಕು. ಆಗ ಮಾತ್ರ ಪ್ರಜಾಪ್ರಭುತ್ವ ಬಲಪಡಿಸಲು ಸಾಧ್ಯ ಎಂದು ತಿಳಿಸಿದರು.

ಸಂಸದ ಪಿಸಿ ಮೋಹನ್, ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶಣೈ, ಪ್ರಧಾನ ಕಾರ್ಯದರ್ಶಿ ಕಿರಣ್, ಉಪಾಧ್ಯಕ್ಷ ಶಾಮ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಬಸ್ಸಿನೊಳಗೆ ಕುಸಿದು ಬಿದ್ದ ಯುವಕನಿಗೆ ಪುನರ್ಜನ್ಮ ನೀಡಿದ ನರ್ಸ್​ಗೆ ಮೆಚ್ಚುಗೆಯ ಮಹಾಪೂರ!

ಪಿಎಸ್​ಐ ನೇಮಕಾತಿ ಹಗರಣದ ಆರೋಪಿ ಆರ್. ಡಿ. ಪಾಟೀಲ್ ಬಳಸಿದ್ದ ಸ್ವಿಫ್ಟ್​  ಕಾರು ವಶಕ್ಕೆ

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…