ನ್ಯೂಯಾರ್ಕ್: ಭಾರತದ ಗ್ರಾಂಡ್‌ಮಾಸ್ಟರ್ ವೈಶಾಲಿ ರಮೇಶ್‌ಬಾಬು ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್‌ಷಿಪ್‌ನ ಮಹಿಳಾ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಭಾರತಕ್ಕೆ ಎರಡು ಪದಕ ಲಭಿಸಿದಂತಾಗಿದ್ದು, ರ‌್ಯಾಪಿಡ್ ವಿಭಾಗದಲ್ಲಿ ಕೊನೆರು ಹಂಪಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಚೀನಾದ ಜು ವೆನ್‌ಜುನ್ ವಿಶ್ವ ಬ್ಲಿಟ್ಜ್ ಚಾಂಪಿಯನ್ ಎನಿಸಿದ್ದಾರೆ. ಪುರುಷರ ವಿಭಾಗದಲ್ಲಿ ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ಹಾಗೂ ರಷ್ಯಾದ ಇಯಾನ್ ನೆಪೊಮಿನಿಯಾಚಿ ಜಂಟಿ ವಿಜೇತರಾಗಿ ಹೊರಹೊಮ್ಮಿದ್ದು, ಇದೇ ಮೊದಲ ಬಾರಿಗೆ ಇಬ್ಬರು ಆಟಗಾರರು ಪ್ರಶಸ್ತಿ ಹಂಚಿಕೊಂಡಿದ್ದಾರೆ.
ಭಾರತದ ಏಕೈಕ ಭರವಸೆ ಆಗಿದ್ದ ಆರ್. ವೈಶಾಲಿ ಬುಧವಾರ ನಡೆದ 4 ಸುತ್ತಿನ ಕ್ವಾರ್ಟರ್‌ೈನಲ್‌ನ ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರೂ, 2.5-1.5ರಿಂದ ಚೀನಾದ ಗ್ರಾಂಡ್ ಮಾಸ್ಟರ್ ಝು ಜಿನರ್ ವಿರುದ್ಧ ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾದರು. ನಂತರ ಸೆಮಿೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಜು ವೆನ್‌ಜುನ್ ಎದುರು 2.5-0.5 ರಿಂದ ವೈಶಾಲಿ ಸೋಲು ಅನುಭವಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ೈನಲ್‌ನಲ್ಲಿ ಚೀನಾದದವರೇ ಆದ ಲೀ ಟಿಂಗ್‌ಜೀ 2.5-3.5 ರಿಂದ ಗೆದ್ದ ವೆನ್‌ಜುನ್ ವಿಶ್ವ ಬ್ಲಿಟ್ಜ್ ಚಾಂಪಿಯನ್ ಕಿರೀಟ ಜಯಿಸಿದರು. 2023ರ ವಿಶ್ವ ಚಾಂಪಿಯನ್‌ಷಿಪ್ ೈನಲ್ ಬಳಿಕ ಇವರಿಬ್ಬರೂ ಮತ್ತೆ ಮುಖಾಮುಖಿಯಾದರು.
ಪುರುಷರ ವಿಭಾಗದ ೈನಲ್‌ನ ಐದು ಬಾರಿ ವಿಶ್ವ ಚಾಂಪಿಯನ್ ಕಾರ್ಲ್‌ಸೆನ್ ಹಾಗೂ ನೆಪೊಮಿನಿಯಾಚಿ ತಲಾ 2 ಅಂಕಗಳ ಸಮಬಲ ಸಾಧಿಸಿದರು. ವಿಜೇತರ ನಿರ್ಣಯಕ್ಕೆ ನಡೆದ ಸಡನ್ ಡೆತ್‌ನ ಸತತ ಮೂರು ಪಂದ್ಯಗಳೂ ಡ್ರಾಗೊಂಡವು. ನಂತರ ಕಾರ್ಲ್‌ಸೆನ್ ಪ್ರಶಸ್ತಿ ಹಂಚಿಕೊಳ್ಳುವ ಆರ್‌ಅನ್ನು ನೆಪೊಮಿನಿಯಾಚಿಗೆ ನೀಡಿದರು. ವಿಶ್ವ ಚೆಸ್ ಸಂಸ್ಥೆ ಫಿಡೆ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ನೆಪೊಮಿನಿಯಾಚಿ, ಜಂಟಿಯಾಗಿ ಪ್ರಶಸ್ತಿ ಸ್ವೀಕರಿಸಲು ಸಮ್ಮತಿಸಿದರು. ಕಾರ್ಲ್‌ಸೆನ್‌ಗೆ ಇದು ಎಂಟನೇ ವಿಶ್ವ ಬ್ಲಿಟ್ಜ್ ಟ್ರೋಫಿ, ಒಟ್ಟಾರೆ 18ನೇ ಪ್ರಮುಖ ಪ್ರಶಸ್ತಿ ಇದಾಗಿದೆ. ತಲಾ ಐದು ಬಾರಿ ರ‌್ಯಾಪಿಡ್, ಕ್ಲಾಸಿಕ್ ವಿಭಾಗದಲ್ಲಿ ಚಾಂಪಿಯನ್ ಎನಿಸಿದ್ದಾರೆ.