ಟಿಇಟಿ ಅರ್ಹತಾ ಪ್ರಮಾಣಪತ್ರದ ಸಿಂಧುತ್ವದ ಅವಧಿ 7 ವರ್ಷದಿಂದ ಜೀವಮಾನದವರೆಗೆ ವಿಸ್ತರಣೆ

ನವದೆಹಲಿ: ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಯಲ್ಲಿ ಉತ್ತೀರ್ಣರಾದ ಪ್ರಶಿಕ್ಷಣಾರ್ಥಿಗಳ ಅರ್ಹತಾ ಪ್ರಮಾಣ ಪತ್ರದ ಸಿಂಧೂತ್ವವನ್ನು 7 ವರ್ಷದಿಂದ ಜೀವಮಾನ ಅವಧಿಯವರೆಗೆ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿರುವುದಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್​ ಪೊಖ್ರಿಯಾಲ್​ ಗುರುವಾರ ಘೋಷಣೆ ಮಾಡಿದ್ದಾರೆ. 2011ರಿಂದ ಜೀವಮಾನದವರೆಗೂ ಟಿಇಟಿ ಪ್ರಮಾಣ ಪತ್ರ ಮಾನ್ಯವಾಗಿರಲಿದ್ದು, ಸರ್ಕಾರ ನಡೆಸುವ ನೇಮಕಾತಿಗಳಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ಹಿಂದೆ ಕೇವಲ 7 ವರ್ಷಗಳಿಗೆ ಮಾತ್ರ ಟಿಇಟಿ ಪ್ರಮಾಣ ಪತ್ರ ಸೀಮಿತವಾಗಿತ್ತು. ಅವಧಿ ಮುಗಿದರೆ ಮತ್ತೊಮ್ಮೆ … Continue reading ಟಿಇಟಿ ಅರ್ಹತಾ ಪ್ರಮಾಣಪತ್ರದ ಸಿಂಧುತ್ವದ ಅವಧಿ 7 ವರ್ಷದಿಂದ ಜೀವಮಾನದವರೆಗೆ ವಿಸ್ತರಣೆ