More

  ಆಫ್ಘಾನ್​ ಬಾವುಟ ಹಿಡಿದು ಪ್ರತಿಭಟನೆ: ತಾಲಿಬಾನಿಗಳ ಗುಂಡೇಟಿಗೆ ಇಬ್ಬರು ಬಲಿ​

  ಕಾಬುಲ್​: ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡ ಬೆನ್ನಲ್ಲೇ ತಾಲಿಬಾನಿಗಳ ಅಟ್ಟಹಾಸ ಮುಂದುವರಿದಿದೆ. ಆಫ್ಘಾನ್​ ಬಾವುಟ ಹಿಡಿದು ಪ್ರತಿಭಟಿಸುತ್ತಿದ್ದ ಇಬ್ಬರು ಪ್ರತಿಭಟನಾಕಾರರನ್ನು ತಾಲಿಬಾನ್​ ಬಂಡುಕೋರರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

  ಈ ಘಟನೆ ಆಫ್ಘಾನ್​ನ ಜಲಾಲಬಾದ್​ನಲ್ಲಿ ನಡೆದಿದ್ದು, ಡಜನ್​ಗೂ ಅಧಿಕ ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಪ್ರತಿಭಟನಾಕಾರರು ಆಫ್ಘಾನ್​ ಬಾವುಟ ಹಿಡಿದು ತಾಲಿಬಾನ್​ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು.

  ತಾಲಿಬಾನಿಗಳು ಆಫ್ಘಾನ್​ ಬಾವುಟವನ್ನು ಕಿತ್ತೆಸೆದು ತಾಲಿಬಾನ್​ ಬಾವುಟವನ್ನು ಹಾರಿಸಿದ್ದು, ಮತ್ತೆ ಆಫ್ಘಾನ್​ ಬಾವುಟವನ್ನು ಮರುಸ್ಥಾಪಿಸಿ ಎಂದು ಒಂದು ಗುಂಪು ಪ್ರತಿಭಟನೆ ನಡೆಸುವಾಗ ತಾಲಿಬಾನಿಗಳು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದೆ.

  ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿರುವ ತಾಲಿಬಾನ್​ ಇದೀಗ ಸರ್ಕಾರ ರಚನೆಗೆ ತಯಾರಿ ನಡೆಸುತ್ತಿದೆ ಎಂದು ತಿಳಿದು. ಈಗಾಗಲೇ ಅನೇಕ ಸಾವು-ನೋವುಗಳು ಆಫ್ಘಾನ್​ನಲ್ಲಿ ಸಂಭವಿಸುತ್ತಿವೆ. ಒಂದು ವೇಳೆ ತಾಲಿಬಾನ್​ ಆಡಳಿತ ಜಾರಿಯಾದರೆ, ಆಫ್ಘಾನ್​ ಅಕ್ಷರಶಃ ನರಕವಾಗಲಿದೆ. (ಏಜೆನ್ಸೀಸ್​)

  ಅಫ್ಘಾನಿಸ್ತಾನ ಆಕ್ರಮಿಸಿಕೊಂಡ ಬೆನ್ನಲ್ಲೇ ತಾಲಿಬಾನ್​ ಸದಸ್ಯನನ್ನು ಜೈಲಿನಿಂದ ಬಿಡುಗಡೆ ಮಾಡಿದ ಪಾಕ್​..!

  ತಾಲಿಬಾನನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ ಸಂಸದ! ದೇಶದ್ರೋಹದ ಪ್ರಕರಣ ದಾಖಲು

  ಗೋಡ್ಸೆಯ ದೇಶಪ್ರೇಮಕ್ಕೆ ಜೈ…ನಾನೇನ್ ನನ್ನ ಜಾತಿ ಹೇಳಿದ್ನಾ? ಎಂದು ಪ್ರಶ್ನಿಸಿದ ನಟಿ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts