ಲೈಂಗಿಕ ಸಂಭೋಗ ಅಥವಾ ಆಹಾರ! ಎರಡರಲ್ಲಿ ನಿಮ್ಮ ಆಯ್ಕೆ ಯಾವುದೆಂಬ ಪ್ರಶ್ನೆಗೆ ಶ್ರುತಿ ಕೊಟ್ಟ ಉತ್ತರ ವೈರಲ್​

blank

ಚೆನ್ನೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ಸೆಲೆಬ್ರಿಟಿಗಳಲ್ಲಿ ನಟಿ ಶ್ರುತಿ ಹಾಸನ್​ ಕೂಡ ಒಬ್ಬರು. ಶ್ರುತಿ ಆಗಾಗ ತಮ್ಮ ಅಭಿಮಾನಿಗಳ ಜೊತೆ ತಮ್ಮ ಹಲವು ಸಂಗತಿಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ದಕ್ಷಿಣ ಭಾರತದ ಚಿತ್ರಗಳಲ್ಲದೇ, ಹಿಂದಿಯಲ್ಲೂ ಶ್ರುತಿ ಮಿಂಚು ಹರಿಸಿದ್ದಾರೆ. ತಮ್ಮ ಸೌಂದರ್ಯ, ಮಾದಕತೆ ಹಾಗೂ ಡ್ಯಾನ್ಸಿಂಗ್​ ಸ್ಕಿಲ್​ನಿಂದ ಸಾಕಷ್ಟು ಅಭಿಮಾನಿಗಳನ್ನು ಶ್ರುತಿ ಹೊಂದಿದ್ದಾರೆ.

ಶ್ರುತಿ ತಮ್ಮ ಬೋಲ್ಡ್​ ಹೇಳಿಕೆಗಳಿಂದಲೇ ಮನೆ ಮಾತಾಗಿದ್ದಾರೆ. ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಶ್ರುತಿಗೆ ಬೋಲ್ಡ್​ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಅದೇನೆಂದರೆ, ಲೈಂಗಿಕ ಸಂಭೋಗ ಅಥವಾ ಆಹಾರ ಇವೆರಡರಲ್ಲಿ ಆಯ್ಕೆ ಮಾಡಿಕೊಳ್ಳುವುದಾದರೆ, ಯಾವುದನ್ನು ಆಯ್ಕೆ ಮಾಡುತ್ತೀರಿ ಎಂದು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ಶ್ರುತಿ ಕೊಟ್ಟಿರುವ ಉತ್ತರ ಇದೀಗ ವೈರಲ್​ ಆಗಿದೆ.

ಆಹಾರ ಮತ್ತು ಲೈಂಗಿಕತೆಗೆ ಹೇಗೆ ಹೋಲಿಕೆ ಮಾಡುತ್ತೀರಿ? ಆಹಾರವೇ ಇಲ್ಲದಿದ್ದರೆ ನಾವೆಲ್ಲ ಸಾಯುತ್ತೇವೆ. ಆದರೆ, ಲೈಂಗಿಕ ಸಂಭೋಗ ಹೊಂದದಿದ್ದರೆ, ನಾವ್ಯಾರು ಸಾಯುವುದಿಲ್ಲ. ಆಹಾರವೇ ಮುಖ್ಯ ಎಂದು ಶ್ರುತಿ ಉತ್ತರ ನೀಡಿದ್ದಾರೆ. ಇದೀಗ ಶ್ರುತಿ ನೀಡಿದ ಉತ್ತರಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಶ್ರುತಿ ಕೊನೆಯದಾಗಿ ಪವನ್​ ಕಲ್ಯಾಣ್​ ನಟನೆಯ ವಕೀಲ್​ ಸಾಬ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.​ ಸದ್ಯ ಯಂಗ್​ ರೆಬೆಲ್​​ ಸ್ಟಾರ್​ ಪ್ರಭಾಸ್​ ಅಭಿನಯದ ಕನ್ನಡಿಗ ಪ್ರಶಾಂತ್​ ನೀಲ್​ ನಿರ್ದೇಶನದ ಸಲಾರ್​ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಶ್ರುತಿ ಜರ್ನಲಿಸ್ಟ್​ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರವನ್ನು ವಿಜಯ್​ ಕಿರಂಗದೂರ್​ ಅವರ ಹೊಂಬಾಳೆ ಬ್ಯಾನರ್​ ಅಡಿಯಲ್ಲಿ ಏಕಕಾಲದಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರೀಕರಿಸಲಾಗುತ್ತಿದೆ. ಹಿಂದಿ, ತಮಿಳು ಮತ್ತು ಮಲಾಯಳಂನಲ್ಲೂ ಚಿತ್ರ ಡಬ್​ ಆಗಲಿದ್ದು, ಇದೊಂದು ಬಿಗ್​ ಬಜೆಟ್​ ಪ್ಯಾನ್​ ಇಂಡಿಯಾ ಸಿನಿಮಾ ಆಗಿದೆ. (ಏಜೆನ್ಸೀಸ್​)

40 ವರ್ಷ ಕಾಡಿನಲ್ಲೇ ನೆಮ್ಮದಿಯಾಗಿದ್ದ ಈತ ನಾಗರಿಕ ಜಗತ್ತಿಗೆ ಮರಳಿದ ಎಂಟೇ ವರ್ಷಕ್ಕೆ ಕ್ಯಾನ್ಸರ್​ನಿಂದ ಸಾವು!

ಸೋಶಿಯಲ್​ ಮೀಡಿಯಾ ಸೆನ್ಸೇಷನ್​ ದೀಪ್ತಿ ಸುನೈನಾ ಪ್ರೇಮ್​ ಕಹಾನಿ ಬಯಲು: ಯೂಟ್ಯೂಬರ್​ ಜತೆ ದೀಪ್ತಿ ಪ್ಯಾರ್!​

ಸಾವಿನಲ್ಲೂ ನಾಲ್ವರ ಪ್ರಾಣ ಉಳಿಸಿ ಸಾರ್ಥಕತೆ ಮೆರೆದ ಹಾವೇರಿ ಯುವತಿ

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…