More

  ನೀನೇಕೆ ಬಿಳಿಕೂದಲು ಮರೆಮಾಚುವುದಿಲ್ಲ? ತಂದೆಯ ಪ್ರಶ್ನೆಗೆ ಸಮೀರಾ ರೆಡ್ಡಿ ಕೊಟ್ಟ ಉತ್ತರಕ್ಕೆ ಎಲ್ಲರೂ ಫಿದಾ!

  ನವದೆಹಲಿ: ಒಂದು ಕಾಲದಲ್ಲಿ ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಸಮೀರಾ ರೆಡ್ಡಿ ಮದುವೆಯಾದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ವರದನಾಯಕ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಜತೆ ನಟಿಸುವ ಮೂಲಕ ಕನ್ನಡಿಗರಿಗೂ ಸಮೀರಾ ಪರಿಚಿತರಾಗಿದ್ದಾರೆ.

  ಕಳೆದ ಮೂರು ವರ್ಷಗಳಿಂದ ಸಮೀರಾ, ಸಕಾರಾತ್ಮಕ ದೇಹದ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ನೈಜ ಸೌಂದರ್ಯ ಅಂದ್ರೆ ಏನು ಎಂಬುದನ್ನು ತಿಳಿಸುವ ಮೂಲಕ ಬಹುತೇಕರಿಗೆ ಮಾದರಿಯಾಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ತಂದೆಯೊಂದಿಗೆ ಬಿಳಿಕೂದಲು ಬಗ್ಗೆ ಸಂವಹನ ನಡೆಸಿದರು. ನೀನು ಬಿಳಿಕೂದಲಿಗೆ ಬಣ್ಣ ಹಚ್ಚಿಕೊಳ್ಳದೇ ಹಾಗೇ ಇರುವುದನ್ನು ನೋಡಿ ನಿನ್ನ ಬಗ್ಗೆ ಜನರು ಏನೆಂದುಕೊಳ್ಳುತ್ತಾರೋ ಎಂಬ ಚಿಂತೆಯಿದೆ. ನೀನೇಕೆ ಬಿಳಿಕೂದಲನ್ನು ಮುಚ್ಚಿಕೊಳ್ಳುವುದಿಲ್ಲ ಎಂದು ಸಮೀರಾರನ್ನು ಅವರ ತಂದೆ ಕೇಳುತ್ತಾರೆ.

  ಇದಕ್ಕೆ ಸಮೀರಾ ಬಹಳ ಸೊಗಸಾಗಿ ಉತ್ತರ ನೀಡಿದ್ದಾರೆ. ನನಗೆ ನನ್ನ ನೋಟದ​ ಮೇಲೆ ವ್ಯಾಮೋಹವಿಲ್ಲ. ತನ್ನದೇ ಆದ “ಸಿಹಿಯಾದ ಸಮಯವನ್ನು ತೆಗೆದುಕೊಳ್ಳಲು ಬಯಸುತ್ತೇನೆ ಮತ್ತು ಬಯಸಿದಾಗ ಬಣ್ಣವನ್ನು ಹಾಕಿಕೊಳ್ಳುತ್ತೇನೆಂದು ಹೇಳಿದ್ದಾರೆ. ಮಂಗಳವಾರ ಎರಡು ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲೇ ಶೇರ್​ ಮಾಡಿರುವ ಸಮೀರಾ, ತನ್ನ ತಂದೆಗೆ ಸ್ವ-ಪ್ರೀತಿ ಮತ್ತು ಸ್ವೀಕಾರದ ಬಗ್ಗೆ ತಿಳಿಸಿದ್ದಾರೆ.

  ಬೇರೆಯವರು ಬಿಳಿಕೂದಲನ್ನು ಮರೆಮಾಚಿದರೆ, ನನಗೆ ವಯಸ್ಸಾಗಿದೆ ಎಂದರ್ಥವೇ? ನಾನು ಸುಂದರವಾಗಿಲ್ಲವೇ? ಅಂದವಾಗಿಲ್ಲವೇ? ಆಕರ್ಷಕವಲ್ಲವೇ? ನನ್ನ ನೋಟದ ಬಗ್ಗೆ ನನಗೆ ಮೊದಲಿನಂತೆ ವ್ಯಾಮೋಹವಿಲ್ಲ. ನಾನು ಎರಡು ವಾರಗಳಿಗೊಮ್ಮೆ ಬಣ್ಣ ಹಚ್ಚುತ್ತಿದ್ದೆ. ಯಾರೊಬ್ಬರು ಕೂಡ ನನ್ನ ಕೂದಲಲ್ಲಿ ಬಿಳಿ ಗೆರೆಯನ್ನು ಸಹ ನೋಡುತ್ತಿರಲಿಲ್ಲ. ಇಂದು ನಾನು ನನ್ನದೇ ಆದ ಸಿಹಿ ಸಮಯವನ್ನು ತೆಗೆದುಕೊಳ್ಳುತ್ತೇನೆ ಮತ್ತು ನನಗೆ ಅನಿಸಿದರೆ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಉತ್ತರಿಸಿದ್ದಾರೆ.

  ಮುಂದುವರಿದು ನಾನು ಒಬ್ಬಂಟಿಯಾಗಿಲ್ಲ ಎಂದು ನನಗೆ ತಿಳಿದಿದೆ. ನಮ್ಮ ಹಳೆಯ ಚಿಂತನೆಯ ಪ್ರಕ್ರಿಯೆಗಳು ಅಂತ್ಯಗೊಂಡಾಗ ಮಾತ್ರ ಬದಲಾವಣೆ ಮತ್ತು ಸ್ವೀಕಾರ ಆರಂಭವಾಗುತ್ತದೆ. ಯಾವಾಗ ಆತ್ಮವಿಶ್ವಾಸವು ಸ್ವಾಭಾವಿಕವಾಗಿ ತನ್ನ ಮಾರ್ಗವನ್ನು ಕಂಡುಕೊಳ್ಳುತ್ತದೆಯೋ ಆಗ ಮುಖವಾಡ ಅಥವಾ ಹೊದಿಕೆಯ ಅವಶ್ಯಕತೆ ಇರುವುದಿಲ್ಲ. ಕೊನೆಗೆ ನನ್ನ ತಂದೆಗೂ ಅರ್ಥವಾಯಿತು. ತಂದೆಯಾಗಿ ಅವರ ಕಾಳಜಿಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಪ್ರತಿದಿನ ನಾವು ಕಲಿಯುವುದನ್ನು ಮುಂದುವರಿಸುತ್ತೇವೆ ಮತ್ತು ಬದಲಾವಣೆಯಿಂದ ಶಾಂತಿಯನ್ನು ಕಾಣುತ್ತೇವೆ ಎಂದಿದ್ದಾರೆ. ಸಮೀರಾ ಅವರ ಉತ್ತರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

  ಅಂದಹಾಗೆ ಸಮೀರಾ ಅವರ ವೈವಾಹಿಕ ಜೀವನದ ಬಗ್ಗೆ ತಿಳಿಯುವುದಾದರೆ, 2014 ರಲ್ಲಿ ಮಹಾರಾಷ್ಟ್ರ ಉದ್ಯಮಿ ಅಕ್ಷಯ್ ವರ್ಧೆಯನ್ನು ಸಮೀರಾ ಅವರು ಸಾಂಪ್ರದಾಯಿಕ ವಿವಾಹವಾದರು. ದಂಪತಿಗಳು 2015 ರಲ್ಲಿ ಮಗ ಹ್ಯಾನ್ಸ್ ವರ್ಡೆ ಮತ್ತು 2019ರಲ್ಲಿ ನೈರಾ ಅವರನ್ನು ಸ್ವಾಗತಿಸಿದ್ದಾರೆ.

  ಸಿನಿಮಾ ವಿಚಾರಕ್ಕೆ ಬಂದಾಗ ಸಮೀರಾ ರೆಡ್ಡಿ ಕೊನೆಯದಾಗಿ 2013ರಲ್ಲಿ ತೆರೆಕಂಡ ಕನ್ನಡ ಚಿತ್ರ ವರದನಾಯಕದಲ್ಲಿ ಕಾಣಿಸಿಕೊಂಡರು. ನಂತರ ಬಣ್ಣದ ಲೋಕದಿಂದ ದೂರಾದರು. ಆದರೆ, ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುತ್ತಾರೆ. (ಏಜೆನ್ಸೀಸ್​)

  ಫ್ಲೈಓವರ್​ ಮೇಲೆ ಭೀಕರ ಅಪಘಾತ; ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದ ಇಬ್ಬರು ಸ್ಥಳದಲ್ಲೇ ಸಾವು..

  ಮಾವನ ಮಗನಿಂದಲೇ ಮತ್ತೆ ಮತ್ತೆ ಅತ್ಯಾಚಾರ?; ಅಜ್ಜಿ ತೀರಿ ಹೋದಾಗ ಊರಿಗೆ ಬಂದಿದ್ದ ಯುವತಿಗೆ ಮದುವೆ ಆಮಿಷ…

  ಪ್ರೀತಿಯ ಸೋಗಲ್ಲಿ ಮೋಸ: ಈತನಿಂದ ಮೋಸ ಹೋದವರೆಷ್ಟೋ?; ಮೊಬೈಲ್​ಫೋನಲ್ಲಿತ್ತು 6 ಯುವತಿಯರ ವಿಡಿಯೋ..

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts