ನಟಿ ಸಮಂತಾ ಅಮೆರಿಕಕ್ಕೆ ತೆರಳಿರುವುದು ಚರ್ಮ ರೋಗದ ಚಿಕಿತ್ಸೆಗಾಗಿ ಅಲ್ಲ… ಇಲ್ಲಿದೆ ಅಸಲಿ ಕಾರಣ

blank

ಹೈದರಾಬಾದ್​: ಕೆಲವು ದಿನಗಳಿಂದ ನಟಿ ಸಮಂತಾ ಕುರಿತಾದ ಸುದ್ದಿಯೊಂದು ಹರಿದಾಡುತ್ತಿದೆ. ಸಮಂತಾ ಅವರು ಚರ್ಮ ರೋಗದಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ ಎಂಬ ಸುದ್ದಿ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುಳಿದಾಡುತ್ತಿದೆ. ಸ್ಯಾಮ್​ಗೆ ಏನಾಗಿದೆ ಅಂತಾ ಅಭಿಮಾನಿಗಳು ಆತಂಕಕ್ಕೀಡಾಗಿರುವಾಗಲೇ ಸಮಂತಾಗೆ ಏನು ಆಗಿಲ್ಲ. ಅವರು ಅಮೆರಿಕಕ್ಕೆ ತೆರಳಿರುವ ಉದ್ದೇಶವೇ ಬೇರೆ ಎಂಬ ಸುದ್ದಿ ಹೊರಬಿದ್ದಿದೆ.

blank

ಜಾಲತಾಣದಲ್ಲಿ ಹರಿದಾಡುತ್ತಿರುವಂತೆ ಸ್ಯಾಮ್​ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಿಲ್ಲ. ಬದಲಾಗಿ ತಮ್ಮ ಮುಂದಿನ ಸಿನಿಮಾ ಪ್ರಾಜೆಕ್ಟ್​ಗೆ ಸಿದ್ಧತೆ ಮಾಡಿಕೊಳ್ಳಲು ಅಮೆರಿಕಕ್ಕೆ ಹಾರಿದ್ದಾರಂತೆ. ಈಗಾಗಲೇ ಸ್ಯಾಮ್​ ಅಮೆರಿಕದಲ್ಲಿ ತಯಾರಿ ಶುರು ಮಾಡಿದ್ದಾರಂತೆ. ತಜ್ಞರ ಅಡಿಯಲ್ಲಿ ಕಟ್ಟುನಿಟ್ಟಾದ ಫಿಟ್ನೆಸ್ ಮತ್ತು ಜೀವನಶೈಲಿಯನ್ನು ಅನುಸರಿಸುತ್ತಿದ್ದಾರೆಂದು ತಿಳಿದುಬಂದಿದೆ.

ಸೈನ್ಸ್​ ಫಿಕ್ಸನ್​ ಸರಣಿ ಸಿಟಾಡೆಲ್​ನಲ್ಲಿ ತಮ್ಮ ಪಾತ್ರಕ್ಕಾಗಿ ಸಮಂತಾ ಅಮೆರಿಕದಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದು ದೊಡ್ಡ ಬಜೆಟ್​ನ ಸಿನಿಮಾ. ಸಾಕಷ್ಟು ಸಿದ್ಧತೆ ಬೇಕಾಗಿರುವುದರಿಂದ ಸಿನಿಮಾ ಕ್ಷೇತ್ರದಲ್ಲಿ ಪಳಗಿರುವ ತಜ್ಞರ ಸಮ್ಮುಖದಲ್ಲಿ ಸಮಂತಾ ತರಬೇತಿ ಪಡೆಯುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿವೆ.

ರುಸ್ಸೋ ಬ್ರದರ್ಸ್ ನಿರ್ಮಾಣದ ಸಿಟಾಡೆಲ್, ಭಾರತೀಯ ಆವೃತ್ತಿಯನ್ನು ಸಹ ಹೊಂದಿದ್ದು, ವರುಣ್ ಧವನ್ ಜೊತೆಗೆ ಸಮಂತಾ ನಟಿಸಲಿದ್ದಾರೆ. ಇದನ್ನು ನಿರ್ದೇಶಕರಾದ ರಾಜ್ ನಿಡಿ ಮೋರು ಮತ್ತು ಕೃಷ್ಣ ಡಿಕೆ ಜಂಟಿಯಾಗಿ ನಿರ್ದೇಶಿಸಲಿದ್ದಾರೆ. ಇದೇ ಸಂದರ್ಭದಲ್ಲಿ, ಅಮೆರಿಕನ್ ಸರಣಿಯಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಸರಣಿ ಮುಂದಿನ ವರ್ಷ ಬಿಡುಗಡೆಯಾಗಲಿದೆ.

ಮತ್ತೊಂದೆಡೆ, ನಿನ್ನೆಯಷ್ಟೇ ಸ್ಯಾಮ್ ಅವರ ಶಾಕುಂತಲಂ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಸಿನಿಮಾ ಬಿಡುಗಡೆ ದಿನಾಂಕ ಸಹ ಅನಾವರಣಗೊಂಡಿದೆ. ಸಮಂತಾ ಮತ್ತು ದೇವ್ ಮೋಹನ್ ಅವರ ಪ್ಯಾನ್ ಇಂಡಿಯಾ ಸಿನಿಮಾ ನವೆಂಬರ್ 4ಕ್ಕೆ ತೆರೆಕಾಣಲಿದ್ದು, ಪ್ರೇಕ್ಷಕರನ್ನು ಮಹಾಭಾರತದ ಕಥಾಲೋಕಕ್ಕೆ ಕರೆದೊಯ್ಯಲಿದೆ. ಅಲ್ಲು ಅರ್ಜುನ್ ಅವರ ಮಗಳು ಅಲ್ಲು ಅರ್ಹ ಮೊದಲ ಬಾರಿಗೆ ಬಾಲನಟಿಯಾಗಿ ಸಿನಿಮಾದಲ್ಲಿ ಕಮಾಲ್ ಮಾಡಲು ಸಿದ್ಧರಾಗಿದ್ದಾಳೆ. (ಏಜೆನ್ಸೀಸ್​)

VIDEO| ಟೇಕಾಫ್​ ಆದ ಬೆನ್ನಲ್ಲೇ ವಿದ್ಯುತ್​ ತಂತಿಗೆ ಡಿಕ್ಕಿಯಾಗಿ ಹೆಲಿಕಾಪ್ಟರ್​ ಪತನ: ಸಂಸದ ಸೇರಿ ನಾಲ್ವರ ಸ್ಥಿತಿ ಗಂಭೀರ ​

PHOTOS| ಮಾಲ್ಡೀವ್ಸ್​ ಕಡಲ ಕಿನಾರೆಯಲ್ಲಿ ಹಾಟ್​ ಬ್ಯೂಟಿ ಅಮಲಾರ ಬೋಲ್ಡ್​ ಅವತಾರಗಳು!

ದುಡ್ಡು ಕೊಟ್ಟರೆ ನಮ್ಮ ಸಾಹೇಬರು ಗಾಡಿ ಹಿಡಿಯೋದಿಲ್ಲ! ಲೋಕಾ ದಾಳಿ ಬಳಿಕ ಪೇದೆಗಳಿಬ್ಬರ ಆಡಿಯೋ ವೈರಲ್​

Share This Article
blank

ಬಿಸಾಡುವ ಮುನ್ನ ತಿಳಿಯಿರಿ Watermelon Seeds ಪವರ್​​: ಇದರಲ್ಲಿದೆ 5 ನಂಬಲಾಗದ ಆರೋಗ್ಯ ಪ್ರಯೋಜನೆಗಳು

Watermelon Seeds: ಬೇಸಿಗೆಯಲ್ಲಿ ಬಿಸಿಲು ಜೋರಾದ ತಕ್ಷಣ ದೇಹವನ್ನು ತಂಪಾಗಿಸಲು ನಾವು ಹೆಚ್ಚಾಗಿ ಕಲ್ಲಂಗಡಿಯನ್ನು ಆಶ್ರಯಿಸುತ್ತೇವೆ.…

ಈ ಗಿಡಗಳನ್ನು ಬೆಳೆಸಿದರೆ ಸಾಕು, ನಿಮ್ಮ ಮನೆಗೆ ಒಂದೇ ಒಂದು ಸೊಳ್ಳೆಯೂ ಬರುವುದಿಲ್ಲ..Plants

Plants: ಮಳೆಗಾಲ ಬಂತೆಂದರೆ ಸಾಕು ಅನೇಕ ಜನರು ತಮ್ಮ ಮನೆಯಂಗಳದಲ್ಲಿ ವಿವಿಧ ಗಿಡಗಳನ್ನ ನೆಡಲು ಪ್ರಾರಂಭಿಸುತ್ತಾರೆ.…

blank