ಸಮಂತಾ-ನಾಗ ಚೈತನ್ಯ ದಾಂಪತ್ಯದಲ್ಲಿ ಬಿರುಕು ಮೂಡಿತಾ? ಜಾಲತಾಣದಲ್ಲಿ ದಿಢೀರ್​ ಶಾಕ್​ ಕೊಟ್ಟ ನಟಿ

ಹೈದರಾಬಾದ್​: ತಮಿಳು ಮತ್ತು ತೆಲುಗು ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾದ ಸಮಂತಾ ಅಕ್ಕಿನೇನಿ ಮತ್ತೊಮ್ಮೆ ವೈಯಕ್ತಿಕ ವಿಚಾರವಾಗಿ ಸುದ್ದಿಯಾಗಿದ್ದಾರೆ. ತಮ್ಮ ಹೆಸರಿನ ಮುಂದೆ ಇದ್ದ​ ಅಕ್ಕಿನೇನಿ ಹೆಸರನ್ನು ತೆಗೆದಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಟ್ವಿಟರ್​ ಮತ್ತು ಇನ್​ಸ್ಟಾಗ್ರಾಂ ಖಾತೆಗಳನ್ನು ಅಕ್ಕಿನೇನಿ ಹೆಸರನ್ನು ತೆಗೆದುಹಾಕಿದ್ದು, ಫೇಸ್​ಬುಕ್​ನಲ್ಲಿ ಉಳಿಸಿಕೊಂಡಿದ್ದಾರೆ. ಸಮಂತಾ ಮತ್ತು ನಟ ನಾಗಚೈತನ್ಯ 2017ರಲ್ಲಿ ಸಪ್ತಪದಿ ತುಳಿದಿದ್ದಾರೆ. ಸಮಂತಾ ಅವರು ಪ್ರಸ್ತುತ ನಿರ್ದೇಶಕ ಗುಣಶೇಖರ ನಿರ್ದೇಶನದ ಶಾಕುಂತಲಮ್​ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಚಿತ್ರೀಕರಣಕ್ಕಾಗಿ ಹೈದರಾಬಾದ್​ನಲ್ಲಿ ಬೀಡುಬಿಟ್ಟಿದ್ದಾರೆ. ಇತ್ತೀಚೆಗಷ್ಟೇ ಚಿತ್ರತಂಡ ಅಲ್ಲು ಅರ್ಜುನ್​ … Continue reading ಸಮಂತಾ-ನಾಗ ಚೈತನ್ಯ ದಾಂಪತ್ಯದಲ್ಲಿ ಬಿರುಕು ಮೂಡಿತಾ? ಜಾಲತಾಣದಲ್ಲಿ ದಿಢೀರ್​ ಶಾಕ್​ ಕೊಟ್ಟ ನಟಿ