ಬೆಂಗಳೂರು: ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ (ಏ.8ರಿಂದ 10) ಗ್ರಾಹಕರು ಹಾಗೂ ರಿಯಾಲ್ಟಿ ಕಂಪನಿಗಳ ನಡುವೆ ವೇದಿಕೆ ರೂಪಿಸಲು ‘ರಿಯಲ್ಎಸ್ಟೇಟ್ ಎಕ್ಸ್ಪೋ’ ಆಯೋಜಿಸಲಾಗುತ್ತಿದೆ.
ವಿಜಯವಾಣಿ, ದಿಗ್ವಿಜಯ 247 ನ್ಯೂಸ್ ವಾಹಿನಿ ಸಹಯೋಗದಲ್ಲಿ ಅಶ್ವಸೂರ್ಯ ರಿಯಾಲಿಟಿಸ್ ಅರ್ಪಿಸುವ ಎಕ್ಸ್ಪೋದಲ್ಲಿ ರಾಜ್ಯದ ಪ್ರಮುಖ ರಿಯಾಲ್ಟಿ ಕಂಪನಿಗಳಾದ ಪ್ರಾವಿಡೆಂಡ್, ಎಸ್ಆರ್ಎಸ್ ಪ್ರಮೋಟರ್ಸ್, ಅಥರ್ವ ಗ್ರೂಪ್ಸ್, ಡಿಎಸ್ ಮ್ಯಾಕ್ಸ್, ಕೆಎನ್ಎಸ್ ಇನ್ಫ್ರಾ, ಕಲ್ಯಾಣ್ ಶೆಲ್ಟರ್ಸ್, ಗುರು ಪುನ್ವಾನಿ, ಆರ್ಯನ್ ಡೆವಲಪರ್ಸ್ ಮತ್ತು ಪ್ರಮೋಟರ್ಸ್, ಶರಣ್ಯ ಫಾಮ್್ಸರ್ ಎಂ.ಆರ್. ಪ್ರಾಪರ್ಟೀಸ್, ಆಶೀರ್ವಾದ್ ಪ್ರಾಪರ್ಟೀಸ್, ಅಲೈಡ್ ಹ್ಯಾಬಿಟ್ಯಾಟ್ಸ್, ಕರ್ನಾಟಕ ಗೃಹ ಮಂಡಳಿ, ಓಂ ಶ್ರೀ ಇನ್ಫ್ರಾಸ್ಟ್ರಕ್ಚರ್, ಎ4 ಪ್ರಾಪರ್ಟೀಸ್, ಭಗಿನಿ ಡೆವಲಪರ್ಸ್, ಎಂಎಚ್ ಪ್ರಮೋಟರ್ಸ್, ಎಂಡಿಎಸ್, ಗೃಹಮಿತ್ರ ಡೆವಲಪರ್ಸ್, ಪಿ.ಸಿ. ರಿಯಾಲ್ಟಿ, ಮಥರ್ ಅರ್ಥ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಮತ್ತು ಎಟಿಝುಡ್ ಪ್ರಾಪರ್ಟೀಸ್ ಸೇರಿ ವಿವಿಧ ರಿಯಾಲ್ಟಿ ಕಂಪನಿಗಳು ಮೇಳದಲ್ಲಿ ಭಾಗವಹಿಸಿ ನಿವೇಶನ, ಅಪಾರ್ಟ್ವೆುಂಟ್ ಹಾಗೂ ವಿಲ್ಲಾಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಿವೆ.
ರಿಯಾಲ್ಟಿ ಕಂಪನಿಗಳು ಗ್ರಾಹಕರಿಗೆ ನಿವೇಶನ ಅಥವಾ ಫ್ಲ್ಯಾಟ್ ಖರೀದಿಗೆ ಆರ್ಥಿಕವಾಗಿ ಅನುಕೂಲ ಆಗುವಂತೆ ಇಂಡಿಯನ್ ಬ್ಯಾಂಕ್, ಕೆನರಾ ಬ್ಯಾಂಕ್ ಹಾಗೂ ಆರ್ಇಪಿಸಿಒ ಹೋಮ್ ಫೈನಾನ್ಸ್ಗಳಿಂದ ಹಣಕಾಸು ನೆರವವನ್ನು ಕೂಡ ಒದಗಿಸಲಿವೆ. ಮನೆ ಅಥವಾ ಕಟ್ಟಡ ನಿರ್ವಣಕ್ಕೆ ಅನುಕೂಲ ಆಗುವಂತೆ ಪೀಠೋಪಕರಣ ಉದ್ಯಮ, ಕಬ್ಬಿಣ ಹಾಗೂ ಸಿಮೆಂಟ್ ಕಂಪನಿಗಳು, ಮನೆಯ ಹೊರಾಂಗಣ ಹಾಗೂ ಒಳಾಂಗಣ ವಿನ್ಯಾಸ ತಜ್ಞರು, ಕಟ್ಟಡ ಸಾಮಗ್ರಿ ವಿತರಕರು ಕೂಡ ಎಕ್ಸ್ಪೋದಲ್ಲಿ ಪಾಲ್ಗೊಳ್ಳಲಿದ್ದಾರೆ.
20-25 ಸಾವಿರ ಗ್ರಾಹಕರ ಭೇಟಿ ನಿರೀಕ್ಷೆ
ಮೇಳಕ್ಕಾಗಿ ಬಸವನಗುಡಿ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ. ಪ್ರವೇಶ ದ್ವಾರದಲ್ಲಿ ಆಕರ್ಷಕ ಸ್ವಾಗತ ಕಮಾನು ನಿರ್ವಿುಸಲಾಗಿದ್ದು, ಸಂಪೂರ್ಣ ಹವಾನಿಯಂತ್ರಿತ ಸೌಲಭ್ಯವಿದೆ. ಸ್ಟಾಲ್ಗಳ ಪ್ರವೇಶದಲ್ಲಿ ಕಟೌಟ್ ನಿರ್ವಣವಾಗಿದೆ. ಎಲ್ಲ ಸ್ಟಾಲ್ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಎಕ್ಸ್ಪೋಗೆ ಆಗಮಿಸುವ ಸಾರ್ವಜನಿಕರಿಗೆ ಉಚಿತ ಪ್ರವೇಶ ಹಾಗೂ ವಾಹನಗಳಿಗೆ ರ್ಪಾಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೇ ಸೂರಿನಡಿ ಗ್ರಾಹಕರು ರಿಯಾಲ್ಟಿ ಕ್ಷೇತ್ರದ ವಿವಿಧ ಕಂಪನಿಗಳ ನಿವೇಶನ, ಅಪಾರ್ಟ್ವೆುಂಟ್, ವಿಲ್ಲಾ, ಫಾಮ್ರ್ ಹೌಸ್ ಯೋಜನೆಗಳ ಮಾಹಿತಿ ಪಡೆಯಬಹುದು. 3 ದಿನ ನಡೆಯುವ ಮೇಳದಲ್ಲಿ 20-25 ಸಾವಿರ ಗ್ರಾಹಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಸ್ವಂತ ಸೂರಿನ ಕನಸು ಸಾಕಾರಗೊಳ್ಳುವ ವೇದಿಕೆ
ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಒಂದು ಸ್ವಂತ ಮನೆಯನ್ನು ಹೊಂದಬೇಕೆಂಬ ಕನಸು ಕಂಡಿರುತ್ತಾನೆ. ಕೋವಿಡ್ ವೇಳೆ ಸ್ವಂತ ಮನೆಗಳ ನಿರ್ವಣಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಈ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಉಂಟಾಗಿದ್ದು, ಸಿಲಿಕಾನ್ಸಿಟಿ ಸುತ್ತಮುತ್ತ ಕೈಗೆಟುಕುವ ದರದಲ್ಲಿ ನಿವೇಶನ, ವಿಲ್ಲಾ, ಫ್ಲ್ಯಾಟ್ ಹಾಗೂ ಫಾಮರ್್ಹೌಸ್ ಖರೀದಿಗೆ ಮುಂದಾಗಿದ್ದಾರೆ. ಈಗಾಗಲೇ 3-4 ತಿಂಗಳಲ್ಲಿ ಶೇ.25 ನಿವೇಶನ ಮತ್ತು ಫ್ಲ್ಯಾಟ್ಗಳ ಮಾರಾಟ ಪ್ರಮಾಣ ಹೆಚ್ಚಳ ಆಗಿದೆ. ಸುಮಾರು 25ಕ್ಕೂ ಅಧಿಕ ರಿಯಾಲ್ಟಿ ಕಂಪನಿಗಳನ್ನು ಒಂದೆಡೆ ಸೇರಿಸಿ ಗ್ರಾಕರಿಗೆ ವೇದಿಕೆ ಕಲ್ಪಿಸಲಾಗುವುದು. ಬಿಡಿಎ ಹಾಗೂ ಬಿಎಂಆರ್ಡಿಎ ಅನುಮೋದಿತ ಸೈಟ್ಗಳು ಲಭ್ಯವಿದೆ. ಜತೆಗೆ, ಎಕ್ಸ್ಪೋದಲ್ಲಿ ಆಕರ್ಷಕ ಕೊಡುಗೆಗಳು ಸಿಗಲಿದ್ದು, ಒಳ್ಳೆಯ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬಹುದು.
ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಚಾನಲ್ ಆಯೋಜಿಸುವ ಪ್ರಾಪರ್ಟಿ ಎಕ್ಸ್ಪೋ ಅತ್ಯಂತ ಹೆಚ್ಚು ಜನಪ್ರಿಯವಾಗಿದೆ. ಪ್ರತಿಬಾರಿ ಎಕ್ಸ್ಪೋದಲ್ಲಿ ಭಾಗವಹಿಸಿದಾಗ ನಿರೀಕ್ಷೆಗಿಂತ ಅಧಿಕ ನಿವೇಶನ ಮತ್ತು ಫ್ಲ್ಯಾಟ್ಗಳು ಮಾರಾಟವಾಗುತ್ತಿವೆ. ಇಲ್ಲಿ ಕಮೀಷನ್ ಏಜೆಂಟರ ಹಾವಳಿ ಇಲ್ಲದೇ ಗ್ರಾಹಕರು ತಮಗೆ ಇಷ್ಟವಾದ ಮನೆ ಫ್ಲ್ಯಾಟ್ ಮತ್ತು ನಿವೇಶನ ಖರೀದಿ ಮಾಡಬಹುದು.
| ದಯಾನಂದ್, ಡಿಎಸ್-ಮ್ಯಾಕ್ಸ್ ಪ್ರಾಪರ್ಟೀಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ
ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಚಾನಲ್ ಮೇಲೆ ಜನರು ನಂಬಿಕೆ ಇಟ್ಟುಕೊಂಡಿದ್ದು, ಪ್ರತಿಬಾರಿ ಆಯೋಜಿಸುವ ಪ್ರಾಪರ್ಟಿ ಎಕ್ಸ್ಪೋಗೆ ಭಾರಿ ಬೆಂಬಲ ಸಿಗುತ್ತಿದೆ. ನಮ್ಮ ಎಂ.ಆರ್. ಪ್ರಾಪರ್ಟೀಸ್ನಿಂದ ಬಿಡಿಎ ಮತ್ತು ಬಿಎಂಆರ್ಡಿಎ ಅನುಮೋದಿತ ನಿವೇಶನಗಳನ್ನು ಸ್ಪರ್ಧಾತ್ಮಕ ಬೆಲೆಗೆ ಗ್ರಾಹಕರಿಗೆ ಒದಗಿಸಲು ಪ್ರಾಪರ್ಟಿ ಎಕ್ಸ್ಪೋದಲ್ಲಿ ಸ್ಟಾಲ್ ಹಾಕುತ್ತಿದ್ದೇವೆ.
| ಅಶೋಕ್, ಎಂಆರ್ ಪ್ರಾಪರ್ಟೀಸ್ ಮಾಲೀಕ
ಲಂಕಾದಲ್ಲಿ ಯೋಧರು vs ಪೊಲೀಸರು: ಮತ್ತಷ್ಟು ಬಿಗಡಾಯಿಸಿದ ಪರಿಸ್ಥಿತಿ, ಸರ್ಕಾರಿ ನೌಕರರ ಮನೆಗೆ ನುಗ್ಗಲು ಯತ್ನ
ನಿಲ್ಲದ ದರ ಏರಿಕೆಯ ಬರೆ: 16 ದಿನದಲ್ಲಿ 14 ಬಾರಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ಇಂದಿನ ಇಂಧನ ದರ ಹೀಗಿದೆ
ಮದ್ಯದ ಕಿಕ್ ಇಳಿಸಿದ ಸಾಫ್ಟ್ವೇರ್: ಪೂರೈಕೆಯಾಗದೆ ಮಾಲೀಕರು ಕಂಗಾಲು, ಇಂದು ಪ್ರತಿಭಟನೆ