ಸಾರಾ, ಅನನ್ಯ ನಿರಾಕರಿಸಿದ ಕಾಂಡೋಮ್​ ಟೆಸ್ಟರ್ ಪಾತ್ರವನ್ನು ರಾಕುಲ್​ ಒಪ್ಪಿಕೊಂಡಿದ್ದೇಕೆ?

ಮುಂಬೈ: ಯಾರಿಯನ್​ ಚಿತ್ರದಲ್ಲಿ ಮೂಲಕ ಬಾಲಿವುಡ್​ಗೆ ಕಾಲಿಟ್ಟ ಬಹುಭಾಷಾ ನಟಿ ರಾಕುಲ್​ ಪ್ರೀತ್​ ಸಿಂಗ್​ ಸದ್ಯ ಬಹು ಬೇಡಿಕೆ ನಟಿ. ತನ್ನ ಸಿನಿ ಜರ್ನಿಯಲ್ಲಿ ವಿವಿಧ ಬಗೆಯ ಚಿತ್ರಗಳನ್ನು ಮಾಡಿರು ರಾಕುಲ್​ ಈ ಬಾರಿ ವಿಭಿನ್ನ ಚಿತ್ರವೊಂದಕ್ಕ ಸಹಿ ಮಾಡಿದ್ದಾರೆ.

ಹೌದು, ತಮ್ಮ ಮುಂದಿನ ಚಿತ್ರದಲ್ಲಿ ರಾಕುಲ್,​ ಕಾಂಡೋಮ್​ ಪರೀಕ್ಷಕಳಾಗಿ ಕಾಣಿಸಿಕೊಳ್ಳುತ್ತಿದ್ದಾಳೆ. ಕಾಂಡೋಮ್​ ಟೆಸ್ಟ್​ ಮಾಡುವ ವಿಭಿನ್ನ ಪಾತ್ರಕ್ಕೆ ಈ ಮೊದಲು ಸಾರಾ ಅಲಿ ಖಾನ್​ ಮತ್ತು ಅನನ್ಯ ಪಾಂಡೆರನ್ನು ಕೇಳಲಾಗಿತ್ತು. ಆದರೆ, ಅವರು ನಿರಾಕರಿಸಿದ್ದರು.

ಆ ಬಳಿಕ ಈ ಪಾತ್ರ ರಾಕುಲ್​ ಪಾಲಾಗಿದೆ. ದೊಡ್ಡ ಕಾಂಡೋಮ್ ಉತ್ಪಾದನಾ ಕಂಪನಿಗಳು 18 ವರ್ಷಕ್ಕಿಂತ ಮೇಲ್ಪಟ್ಟವರನ್ನು ಕೆಲಸಕ್ಕಾಗಿ ನೇಮಿಸಿಕೊಳ್ಳುತ್ತವೆ. ಈ ಆಧಾರದ ಮೇಲೆ ಚಿತ್ರಕತೆಯನ್ನು ಎಣೆಯಲಾಗಿದ್ದು, ಕತೆ ಕೇಳಿದ ರಾಕುಲ್​ ಥ್ರಿಲ್​ ಆಗಿ ಒಂದೇ ಮಾತಿಗೆ ಒಪ್ಪಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ರಾಕುಲ್​, ಸಮಾಜದಲ್ಲಿ ಜಾಗೃತಿ ಮೂಡಿಸಲು ಇಂತಹ ಚಿತ್ರಗಳು ಅವಶ್ಯಕತೆ ಇವೆ ಎಂದು ಹೇಳಿದ್ದಾರೆ. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ರಾಕುಲ್​ ಹಾಟ್​ ಅಂಡ್​ ಬೋಲ್ಡ್​ ಚಿತ್ರಗಳನ್ನು ಶೇರ್​ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. (ಏಜೆನ್ಸೀಸ್​)

ಬಾಯ್​ಫ್ರೆಂಡ್​ ಜತೆ ಬ್ರೇಕಪ್​, ಗರ್ಭಿಣಿ, ಆತ್ಮಹತ್ಯೆ ಯತ್ನ ಕುರಿತು ಸ್ಪಷ್ಟನೆ ನೀಡಿದ ಇಲಿಯಾನಾ!

ಮದ್ವೆಯಾದ 2 ವರ್ಷಕ್ಕೆ ಡಿವೋರ್ಸ್​: ಖ್ಯಾತ ನಿರ್ದೇಶಕನ ದಾಂಪತ್ಯದಲ್ಲಿ ಬಿರುಗಾಳಿ ಎಬ್ಬಿಸಿದ ಹೀರೋಯಿನ್!

ನುಡಿದಂತೆ ನಡೆದ ಸಂಸದೆ ಸುಮಲತಾ ಅಂಬರೀಶ್​ಗೆ ಸಾರ್ವಜನಿಕರಿಂದ ಪ್ರಶಂಸೆ ​

Share This Article

ಪುರುಷರೇ ಎಡಗೈ, ಮಹಿಳೆಯರ ಬಲ ಅಂಗೈ ತುರಿಕೆಯಾದ್ರೆ ಕಾದಿದೆ ಈ ಗಂಡಾಂತರ!

ಬೆಂಗಳೂರು: ಅಂಗೈ ತುರಿಕೆಯಾಗಿದೆ ಎಂದರೆ ಹಣ ಬರುತ್ತದೆ ಎಂದು ಹಲವರು ಹೇಳುತ್ತಾರೆ. ಕೆಲವರು ಹಣ ಕಳೆದುಕೊಳ್ಳುತ್ತಿದ್ದಾರೆ…

ಈ ದಿನಾಂಕದಂದು ಜನಿಸಿದವರು ಜೀವನದಲ್ಲಿ ರಾಜರಂತೆ ಬದುಕುತ್ತಾರೆ… ನೀವೂ ಇದೇ ದಿನ ಹುಟ್ಟಿದ್ದೀರಾ ನೋಡಿ!

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಈ ಮೂರು ಕೆಲಸಗಳನ್ನು ಮಾಡಿದ ನಂತರ ಹಲ್ಲುಜ್ಜಬೇಡಿ! ಅನಾರೋಗ್ಯಕ್ಕೊಳಗಾಗುವುದು ಖಂಡಿತ..

ಬೆಂಗಳೂರು: ಬಾಯಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಆರೋಗ್ಯಕ್ಕೆ ಬಹಳ ಮುಖ್ಯ. ಸೂಕ್ಷ್ಮಜೀವಿಗಳು ಬಾಯಿಯ ಮೂಲಕ ಹೊಟ್ಟೆಯನ್ನು ಪ್ರವೇಶಿಸುತ್ತವೆ. ಇದು…