More

    ಪ್ರೊ ಕಬಡ್ಡಿ ಲೀಗ್: ಗುಜರಾತ್-ತಲೈವಾಸ್ ಫೈಟ್ ರೋಚಕ ಟೈ, ಪಟನಾ ಪೈರೇಟ್ಸ್-ಪುಣೇರಿ ಪಲ್ಟಾನ್ ಪಂದ್ಯವೂ ಸಮಬಲ

    ಬೆಂಗಳೂರು: ಮೊದಲಾರ್ಧದ 2 ಅಂಕಗಳ ಹಿನ್ನಡೆ ನಡುವೆಯೂ ಪುಟಿದೆದ್ದ ಪವನ್ ಕುಮಾರ್ ಶೆರಾವತ್ ನೇತೃತ್ವದ ತಮಿಳ್ ತಲೈವಾಸ್ ತಂಡ ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 31-31 ಅಂಕಗಳಿಂದ ಟೈ ಸಾಧಿಸುವಲ್ಲಿ ಯಶಸ್ವಿಯಾಯಿತು.

    ಪ್ರೊ ಕಬಡ್ಡಿ ಲೀಗ್: ಗುಜರಾತ್-ತಲೈವಾಸ್ ಫೈಟ್ ರೋಚಕ ಟೈ, ಪಟನಾ ಪೈರೇಟ್ಸ್-ಪುಣೇರಿ ಪಲ್ಟಾನ್ ಪಂದ್ಯವೂ ಸಮಬಲಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಶನಿವಾರದ 2ನೇ ಪಂದ್ಯದಲ್ಲಿ ತಲೈವಾಸ್ ತಂಡದ ನಾಯಕ ಹಾಗೂ ಟೂರ್ನಿಯ ದುಬಾರಿ ಆಟಗಾರ ಪವನ್ ಕುಮಾರ್ 10ನೇ ನಿಮಿಷದಲ್ಲಿ ಬಲ ಮೊಣಕಾಲಿಗೆ ಆದ ಗಾಯದಿಂದಾಗಿ ಹೊರನಡೆದರು. ಬಳಿಕ ಅವರ ಅನುಪಸ್ಥಿತಿಯಲ್ಲೂ ತಲೈವಾಸ್ ತಂಡ ಗಮರ್ನಾಹ ಪ್ರದರ್ಶನ ನೀಡಿತು. ಪಂದ್ಯದ ಆರಂಭದಿಂದಲೂ ಉತ್ತಮ ಪ್ರದರ್ಶನ ತೋರಿದ ಗುಜರಾತ್ ತಂಡ ಮೊದಲಾರ್ಧದಲ್ಲಿ ತಲೈವಾಸ್ ತಂಡವನ್ನು ಆಲೌಟ್ ಮಾಡುವ ಮೂಲಕ 18-16ರಿಂದ ಮುನ್ನಡೆ ಸಾಧಿಸಿತು. ಆದರೆ ದ್ವಿತೀಯಾರ್ಧದ ಆರಂಭದಲ್ಲೇ ಗುಜರಾತ್ ತಂಡವನ್ನು ಆಲೌಟ್ ಬಲೆಗೆ ಬೀಳಿಸಿ ತಿರುಗೇಟು ನೀಡಿದ ತಲೈವಾಸ್ 3 ಅಂಕಗಳ ಮುನ್ನಡೆಯನ್ನೂ ಕಂಡುಕೊಂಡಿತು. ಬಳಿಕ ತಲೈವಾಸ್ ರಕ್ಷಣಾತ್ಮಕ ಆಟವಾಡಿ ಮುನ್ನಡೆ ಉಳಿಸಿಕೊಳ್ಳಲು ಯತ್ನಿಸಿದರೂ, ಗುಜರಾತ್ ತಂಡ ಉತ್ತಮ ಪ್ರದರ್ಶನದಿಂದ ಪಂದ್ಯದಲ್ಲಿ ಸಮಬಲ ಸಾಧಿಸಿತು.

    ಸಮಬಲ ಸಾಧಿಸಿದ ಪೈರೇಟ್ಸ್- ಪಲ್ಟಾನ್: ಮೊದಲಾರ್ಧದ 7 ಅಂಕಗಳ ಮುನ್ನಡೆ ಕಾಯ್ದುಕೊಳ್ಳುವಲ್ಲಿ ವಿಫಲವಾದ ಪುಣೇರಿ ಪಲ್ಟಾನ್ ತಂಡ ದಿನದ ಮೊದಲ ಪಂದ್ಯದಲ್ಲಿ 3 ಬಾರಿಯ ಚಾಂಪಿಯನ್ ಪಟನಾ ಪೈರೇಟ್ಸ್ ಎದುರು 34-34 ಅಂಕಗಳ ಸಮಬಲ ಸಾಧಿಸಿತು. ಮೊದಲಾರ್ಧದಲ್ಲಿ ಎದುರಾಳಿಯನ್ನು ತಲಾ ಒಂದು ಬಾರಿ ಅಲೌಟ್ ಮಾಡಿದ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ಪ್ರದರ್ಶಿಸಿದವು. 7 ಅಂಕಗಳ ಹಿನ್ನಡೆಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಪೈರೇಟ್ಸ್ ರೈಡಿಂಗ್ ಹಾಗೂ ಟ್ಯಾಕಲ್​ಗಳ ಮೂಲಕ ನಿರಂತರ ಅಂಕ ಕಲೆ ಹಾಕಿ 26ನೇ ನಿಮಿಷದಲ್ಲಿ ಪುಣೆ ತಂಡವನ್ನು ಆಲೌಟ್ ಮಾಡುವ ಮೂಲಕ ತಿರುಗೇಟು ನೀಡಿತು. ಕಡೇ ಕ್ಷಣದಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ಇತ್ತಂಡಗಳು ಟೈ ಸಾಧಿಸಿದವು.

    ಮೇಲುಕೋಟೆಯಲ್ಲಿ ತೆಲುಗು ಚಿತ್ರತಂಡದಿಂದ ಮತ್ತೆ ಎಡವಟ್ಟು: ನಾಗಚೈತನ್ಯ ಚಿತ್ರದ ವಿರುದ್ಧ ಮಂಡ್ಯ ಜನರ ಆಕ್ರೋಶ

    ತುಮಕೂರಿನಲ್ಲಿ 2ನೇ ದಿನದ ಭಾರತ್​ ಜೋಡೋ ಯಾತ್ರೆ ಆರಂಭ: ರಾಹುಲ್​ಗೆ ಡಿಕೆಶಿ, ಸಿದ್ದು, ಪರಂ ಸಾಥ್​

    ಅಕ್ರಮ-ಸಕ್ರಮಕ್ಕೆ ನಾಲ್ಕು ಸೂತ್ರ: ನಗರಾಭಿವೃದ್ಧಿ ಇಲಾಖೆಯಿಂದ ಪ್ರಸ್ತಾವನೆ; ಬೆಂಗಳೂರು ಹೊರತು ಉಳಿದೆಡೆ ಮಾತ್ರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts