More

    ಸೂಕ್ತ ಸಮಯದಲ್ಲಿ ಸಿಗದ ಆಂಬುಲೆನ್ಸ್​: ಬೈಕ್​ ಮೇಲೆ ಮಹಿಳೆ ಶವ ಕೊಂಡೊಯ್ದು ಅಂತ್ಯಕ್ರಿಯೆ

    ವಿಜಯವಾಡ: ಭಾರತ ಹಿಂದೆಂದು ಕಾಣದಂತಹ ಕಠೋರ ಪರಿಸ್ಥಿತಿಯನ್ನು ಮಹಾಮಾರಿ ಕರೊನಾ ವೈರಸ್ ತಂದಿಟ್ಟಿದೆ. ದೇಶದ ಬಹುತೇಕ ಆಸ್ಪತ್ರೆಗಳಲ್ಲಿ ಕೋವಿಡ್​ ಸೋಂಕಿತರೇ ತುಂಬಿಕೊಂಡಿರುವುದರಿಂದ ಯಾರು ಎದುರು ನೋಡದ ಸನ್ನಿವೇಶಗಳೆಲ್ಲ ಕಣ್ಣ ಮುಂದೆಯೇ ನಡೆಯುತ್ತಿದೆ.

    ಕರೊನಾದಿಂದಾಗಿ ಆಂಬುಲೆನ್ಸ್​ ಸೌಲಭ್ಯ ಇಲ್ಲದಿರುವುದರಿಂದ ಕುಟುಂಬವೊಂದು ಮಹಿಳೆಯ ಮೃತದೇಹವನ್ನು ಬೈಕ್​ ಮೇಲೆ ಹಾಕಿಕೊಂಡು ಹೋಗಿ ಶವಸಂಸ್ಕಾರ ಮಾಡಿರುವಂತಹ ಮನಕಲುಕುವ ಘಟನೆ ಆಂಧ್ರ ಪ್ರದೇಶದ ಶ್ರೀಕಾಕುಳಂನಲ್ಲಿ ನಡೆದಿದೆ.

    ಮೃತ ಮಹಿಳೆಯ ವಯಸ್ಸು 50 ಎಂದು ಅಂದಾಜಿಸಲಾಗಿದೆ. ಮಹಿಳೆ ಕೋವಿಡ್​ ರೋಗ ಲಕ್ಷಣಗಳಿಂದ ಬಳಲುತ್ತಿದ್ದಳು. ಪರೀಕ್ಷೆಯು ಸಹ ಮಾಡಿಸಲಾಗಿತ್ತು. ಆದರೆ, ಪರೀಕ್ಷಾ ವರದಿ ಬರುವ ಮುನ್ನವೇ ಮಹಿಳೆ ತೀರಿಕೊಂಡಿದ್ದಾಳೆ. ಮೃತ ಮಹಿಳೆ ಶ್ರೀಕಾಕುಳಂನ ಮಂದಾಸಾ ಮಂಡಲದಲ್ಲಿರುವ ಗ್ರಾಮದವಳು. ಸೋಮವಾರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿ ಮೃತಪಟ್ಟಿದ್ದಳು.

    ಆಂಬುಲೆನ್ಸ್​ ಸಿಗುವ ಭರವಸೆಯ ಮೇಲೆ ಮೃತದೇಹವನ್ನು ಕುಟುಂಬದವರು ಆಸ್ಪತ್ರೆಯಲ್ಲೇ ಇಟ್ಟುಕೊಂಡು ಕಾಯುತ್ತಿದ್ದರು. ಆದರೆ, ಯಾವುದೇ ಆಂಬುಲೆನ್ಸ್​ ಸಿಗದಿದ್ದಾಗ ಬೈಕ್​ ಮೇಲೆಯೇ ಹೆಣವನ್ನು ಸಾಗಿಸಿ ಅಂತ್ಯ ಸಂಸ್ಕಾರ ಮಾಡಲಾಗಿದೆ. (ಏಜೆನ್ಸೀಸ್​)

    ಇದು ‘ಪಾಸಿಟಿವ್‌’ ಸಪ್ತಪದಿ: ಕರೊನಾ ಬಂದರೂ ಡೋಂಟ್‌ ಕೇರ್‌- ನಡೆಯಿತು ಹೀಗೊಂದು ಮದುವೆ…

    ಸಿನಿಮಾ ಚಿತ್ರೀಕರಣಕ್ಕೆ ಗ್ರಹಣ: ಕೋಟ್ಯಂತರ ರೂ. ಹೂಡಿಕೆ ಮಾಡಿದವರಿಗೆ ನಷ್ಟದ ಭೀತಿ

    ನಗರವನ್ನೇ ಬೆಚ್ಚಿಬೀಳಿಸಿದ ನಾಲ್ವರು ಮಹಿಳೆಯರ ದಿಢೀರ್ ನಾಪತ್ತೆ! ಒಂದೊಂದು ಪ್ರಕರಣವೂ ವಿಭಿನ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts