More

  ಕಾಶ್ಮೀರದಲ್ಲಿ ಹೆಚ್ಚಾಗುತ್ತಿರುವ ನಾಗರಿಕ ಹತ್ಯೆ ಪ್ರಕರಣ: 18 ಸ್ಥಳಗಳ ಮೇಲೆ ಎನ್​ಐಎ ದಾಳಿ

  ನವದೆಹಲಿ: ಇತ್ತೀಚೆಗೆ ಕಾಶ್ಮೀರದಲ್ಲಿ ನಾಗರಿಕ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಏಕಕಾಲದಲ್ಲಿ ದೆಹಲಿ, ಉತ್ತರ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದ 18 ಸ್ಥಳಗಳಲ್ಲಿ ದಾಳಿ ನಡೆಸಿದೆ.

  ಗಾಲ್ಬಾಗ್ ಕಾಕಪೋರಾ ನಿವಾಸಿ ಅಬ್​ ಖಾಲಿಕ್ ದಾರ್ ಪುತ್ರ ಓವೈಸ್ ಅಹ್ಮದ್ ದಾರ್ ಮನೆ ಮೇಲೆಯೂ ದಾಳಿ ನಡೆದಿದೆ. ಉಗ್ರರ ಸಂಘಟನೆಗಳಿಗೆ ಇರುವ ಭೂಗತ ಜಾಲಗಳನ್ನು ಪತ್ತೆಹಚ್ಚಲು ಎನ್​ಐಎ ಈ ದಾಳಿ ನಡೆಸಿದೆ.

  ಲಷ್ಕರ್​ ಇ ತೊಯ್ಬಾ, ಜೈಷ್​ ಇ ಮೊಹಮ್ಮದ್​, ಹಿಜ್ಬುಲ್​ ಮುಜಾಹಿದೀನ್​, ಅಲ್​ ಬದ್ರ್​​ ಮತ್ತು ಇರತೆ ಉಗ್ರ ಸಂಘಟನೆಗಳು ಜಮ್ಮು ಮತ್ತು ಕಾಶ್ಮೀರದಿಂದಾಚೆಗೆ ಹರಡಿಕೊಂಡಿದ್ದು, ಅವರ ಹೆಡೆಮುರಿಕಟ್ಟಲು ಅವರಿಗೆ ಸಂಪರ್ಕ ಇರುವ ಶಂಕಿತರ ಮೇಲೆ ಎನ್​ಐಎ ದಾಳಿ ಮಾಡಿದೆ.

  ನಿನ್ನೆ (ಅ.11) ಉಗ್ರನೊಬ್ಬನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿತ್ತು. ಮೃತ ಉಗ್ರನನ್ನು ಇಮ್ತಿಯಾಜ್​ ಅಹ್ಮರ್​ ದಾರ್​ ಎಂದು ಗುರುತಿಸಲಾಗಿದೆ. ಈತ ಲಷ್ಕರ್​ ಇ ತೊಯ್ಬಾ ಸಂಘಟನೆ ಜತೆ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಇದೆ. ಅಲ್ಲದೆ, ಬಂಡಿಪೋರಾದ ಶಹಗುಂದ್​ನಲ್ಲಿ ನಡೆದ ನಾಗರಿಕರ ಹತ್ಯೆಯಲ್ಲಿ ಈತನ ಕೈವಾಡ ಇರುವುದು ದೃಢವಾಗಿದೆ. (ಏಜೆನ್ಸೀಸ್​)

  ದಯವಿಟ್ಟು ಅವರಂತೆ ನೀವು ಆಗಬೇಡಿ: ಆರ್​ಸಿಬಿ ಸೋತ ಬೆನ್ನಲ್ಲೇ ಮನಸ್ಸಿನ ನೋವು ಹೊರಹಾಕಿದ ಮ್ಯಾಕ್ಸ್​ವೆಲ್​

  ಡಿವೋರ್ಸ್​ ಬೆನ್ನಲ್ಲೇ ಮಾಡಿದ ಇನ್​ಸ್ಟಾಗ್ರಾಂ ಪೋಸ್ಟ್​ನಿಂದ ಭಯದಲ್ಲಿ ದಿನ ದೂಡುತ್ತಿರುವ ಸಮಂತಾರ ಡಿಸೈನರ್..!​

  ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ಕೇರಳ ಮೂಲದ ಯೋಧ ಸೇರಿ ಐವರು ಹುತಾತ್ಮ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts