ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೊದಲ ಒಮ್ರಿಕಾನ್ ಪ್ರಕರಣ ಪತ್ತೆಯಾಗಿದೆ.
ಒಂಬತ್ತು ವರ್ಷದ ಮಗುವಿಗೆ ಒಮೈಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಹೊರದೇಶದಿಂದ 9 ವರ್ಷದ ಹೆಣ್ಣು ಮಗುವಿಗೆ ಒಮಿಕ್ರಾನ್ ಸೋಂಕು ತಗುಲಿದ್ದು, ಮಗುವಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಸದ್ಯ ಮಗುವನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಪ್ರಾಥಮಿಕ ದ್ವಿತೀಯ ಸಂಪರ್ಕಿತರ ತಪಾಸಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ಡಿಸೆಂಬರ್.19 ರಂದು ಪೋಷಕರ ಜೊತೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಂಕಿತ ಮಗು ಆಗಮಿಸಿತ್ತು. ಡಿ.19 ರಂದು ರಕ್ತ ಸ್ಯಾಂಪಲ್ ಪಡೆಯಲಾಗಿತ್ತು. ನಿನ್ನೆ ಮಗುವಿಗೆ ಒಮಿಕ್ರಾನ್ ಪಾಸಿಟಿವ್ ದೃಢವಾಗಿದೆ. ಪೋಷಕರಿಗೆ ಒಮಿಕ್ರಾನ್ ನೆಗೆಟಿವ್, ಮಗುವಿಗೆ ಪಾಸಿಟಿವ್ ಬಂದಿದೆ. ಸದ್ಯ ಸೋಂಕಿತ ಮಗು ಆರೋಗ್ಯವಾಗಿದೆ. ಮಗುವಿನ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರ ಮಾಹಿತಿಯನ್ನ ಆರೋಗ್ಯ ಇಲಾಖೆ ಕಲೆ ಹಾಕುತ್ತಿದೆ ಎಂದು ಡಿ.ಎಚ್.ಓ. ಪ್ರಸಾದ್ ಮಾಹಿತಿ ನೀಡಿದ್ದಾರೆ.
ಈ ರಾಷ್ಟ್ರದ ವಿಡಿಯೋಗಳನ್ನು ನೋಡಿದ 7 ಮಂದಿಗೆ ಗಲ್ಲುಶಿಕ್ಷೆ: ಉ. ಕೊರಿಯಾದ ಕರಾಳ ಮುಖ ಅನಾವರಣ
ಸುಳ್ಳು ರೇಪ್ ಕೇಸ್ ಹಾಕುವವರೇ ಎಚ್ಚರ: ಮಹಿಳೆಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
ದ. ಆಫ್ರಿಕಾದಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳನ್ನು ಕಾಡುವ ಬೌಲರ್ ಹೆಸರೇಳಿದ ವಾಸಿಂ ಜಾಫರ್!