ಹೈದರಾಬಾದ್: ಗಂಡನಿಲ್ಲದೇ ಮಹಿಳೆಯರಿಗೆ ಗೊತ್ತು ಜೀವನ ಎದುರಿಸುವುದು ಎಷ್ಟು ಕಷ್ಟ ಅಂತಾ. ಜೀವನಪೂರ್ತಿ ತಾಯಿ ಜಾಗರೂಕರಾಗಿರುವುದು ಮಾತ್ರವಲ್ಲ, ಮಗುವಿನ ಮೇಲೆ ನಿಗಾ ಇಡುತ್ತಾರೆ. ಸಮಾಜದ ಕೆಟ್ಟ ದೃಷ್ಟಿ ಹಾಗೂ ಆಂತರಿಕ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವುದು ಸುಲಭವಲ್ಲ. ಕೆಲವೊಬ್ಬರು ಸಮಾಜಕ್ಕೆ ಅಂಜಿ ಬದುಕಿದರೆ, ಇನ್ನು ಕೆಲವರು ತಮ್ಮಿಷ್ಟದಂತೆ ಬಾಳ್ವೆ ನಡೆಸುತ್ತಾರೆ. ಇನ್ನು ಕೆಲವರು ಅಡ್ಡದಾರಿಯು ಹಿಡಿಯುತ್ತಾರೆ ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆ.
ನಗರಕ್ಕೆ ಮನಸೋತು ಬಂದ
ಬಾಡಿಗೆ ಮನೆಯಲ್ಲಿ ವಾಸವಿದ್ದ ಯುವಕನೊಂದಿಗೆ ತಾಯಿ-ಮಗಳ ಸಂಬಂಧದ ದುರಂತ ಕತೆ ಇದು. ಆಂಧ್ರ ಪ್ರದೇಶದ ಗುಂಟೂರು ಮೂಲದ ಪರಮೇಶ್ ಪದವಿ ಪೂರ್ಣಗೊಳಿಸುತ್ತಾನೆ. ಊರಿನಲ್ಲೇ ತುಂಬಾ ಆಸ್ತಿ, ಜಮೀನು ಮತ್ತು ಉತ್ತಮವಾದ ನೀರಾವರಿ ವ್ಯವಸ್ಥೆ ಇದ್ದರೂ, ನಗರಕ್ಕೆ ಮನಸೋತು ಒಳ್ಳೆಯ ಉದ್ಯೋಗ ಅರಸಿ ಹೈದರಾಬಾದ್ಗೆ ಬರುತ್ತಾನೆ.
ಆರ್ಥಿಕವಾಗಿ ಸದೃಢ
ಅಮರಪೇಟೆಯಲ್ಲಿ ಬಾಡಿಗೆ ಮನೆ ಪಡೆದು ಕೆಲ ಕಾಲ ಅಲ್ಲಿಯೇ ನೆಲಸಿ ಬಳಿಕ ಪೆಂಟ್ಹೌಸ್ಗೆ ಸ್ಥಳಾಂತರ ಮಾಡುತ್ತಾನೆ. ಮನೆಯ ಮಾಲೀಕರು ಕೆಳಗಿನ ಮಹಡಿಯಲ್ಲಿ ನೆಲೆಸಿರುತ್ತಾರೆ. ಆರ್ಥಿಕವಾಗಿ ಸದೃಢರಾಗಿದ್ದ ಪರಮೇಶ್, ತನಗೆ ಇಚ್ಛಿಸಿದ ಕೆಲಸ ಮಾಡಿ 6 ತಿಂಗಳು ಹೈದರಾಬಾದ್ ನಗರ ಸುತ್ತಾಡಿ ಬಳಿಕ ಗುಂಟೂರಿಗೆ ಹೋಗಿ ನೆಲೆಸಲು ನಿರ್ಧರಿಸುತ್ತಾನೆ.
ತಾಯಿ-ಮಗಳ ಸಣ್ಣ ಕುಟುಂಬ
ಪರಮೇಶ್ ಉಳಿದುಕೊಂಡಿದ್ದ ಮನೆಯ ಮಾಲಕಿ ಸುನಾಯಾನ ಪತಿ ನಾಲ್ಕು ವರ್ಷಗಳ ಹಿಂದೆ ತೀರಿಕೊಂಡಿರುತ್ತಾರೆ. ಓರ್ವ ಮಗಳಿರುತ್ತಾಳೆ. ಆಕೆ ಪಿಯು ವಿದ್ಯಾರ್ಥಿನಿಯಾಗಿರುತ್ತಾಳೆ. ಪತಿಯ ಪಿಂಚಣಿ ಮತ್ತು ಬಾಡಿಗೆ ಹಣದಿಂದ ಸಣ್ಣ ಕುಟುಂಬ ಜೀವನ ನಡೆಸುತ್ತಿರುತ್ತದೆ. ಅಲ್ಲದೆ, ಅವರಿಗೆ ಒಳ್ಳೆಯ ಆಸ್ತಿಯು ಸಹ ಇರುತ್ತದೆ. ಹೀಗಾಗಿ ಸುನಾಯನ ಮಗಳ ಭವಿಷ್ಯಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಸುನಾಯನಾ 40 ವಯಸ್ಸಿನ ಮಹಿಳೆ. ಬಾಡಿಗೆ ಮನೆಯಲ್ಲಿದ್ದ ಪರಮೇಶ್ ಪರಿಚಯವಾಗಿರುತ್ತದೆ.
ಬಲೆ ಬೀಸಲು ಆರಂಭ
ಒಂದು ದಿನ ಪರಮೇಶ್ ಕೆಲಸ ಹುಡುಕಿಕೊಂಡು ಹೋಗಿ ಮಧ್ಯಾಹ್ನದ ಬಳಿಕ ಬರುತ್ತಾನೆ. ಇದನ್ನು ಗಮನಿಸಿದ ಸುನಾಯಾನ ಪರಮೇಶ್ ಬಳಿ ಮಾತನಾಡಲು ಬರುತ್ತಾಳೆ. ತನ್ನ ಮನೆಗೆ ಕರೆದು ಆತನಿಗೆ ಕುಡಿಯಲು ತಾಜಾ ನೀರು ಕೊಡುತ್ತಾಳೆ. ಈ ವೇಳೆ ತಮ್ಮ ತಮ್ಮ ಬಗ್ಗೆ ಹೇಳಿಕೊಂಡು ಪರಿಚಯ ಮಾಡಿಕೊಳ್ಳುತ್ತಾರೆ. ಗಂಡನ ಸತ್ತ ಬಗ್ಗೆಯು ಸುನಾಯಾನ ಹೇಳಿ ಅಂದಿನಿಂದ ಕುಟುಂಬದಲ್ಲಿ ಯಾರೂ ಹಿರಿಯರಿಲ್ಲ ಎಂದು ಹೇಳಿಕೊಳ್ಳುತ್ತಾಳೆ. ಇದರಿಂದ ಪರಮೇಶ್ಗೆ ಆಶ್ಚರ್ಯವಾಗುತ್ತದೆ.
ನಿಮ್ಮನ್ನು ನೋಡಿದ್ರೆ ಪತಿ ನೆನಪಾಗ್ತಾರೆ
ಮಾತು ಮುಂದುವರಿಸಿದ ಸುನಾಯಾನಾ ನಿಮ್ಮನ್ನು ನೋಡಿದರೆ ನನ್ನ ಪತಿ ನೆನಪಾಗುತ್ತದೆ ಎಂದು ಹೇಳುತ್ತಾಳೆ. ಹೀಗಿ ಮಾತನಾಡುತ್ತಾ ಪರಮೇಶ್ನನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಾಳೆ. ಅಲ್ಲದೆ, ಪರಮೇಶ್ ಆಕೆಯೊಂದಿಗೆ ಏಕಾಂತವನ್ನು ಕಳೆಯುತ್ತಾನೆ. ಅಂದಿನಿಂದ ಕೆಲಸ ಹುಡುಕುವುದಕ್ಕೆ ವಿರಾಮ ಹಾಕಿ ಪೂರ್ತಿದಿನ ಸುನಾಯಾನ ಜತೆ ಕಳೆಯುವುದನ್ನೇ ಕೆಲಸ ಮಾಡಿಕೊಳ್ಳುತ್ತಾನೆ. ಇತ್ತ ಸುನಾಯಾನಾ ಕೂಡ ಮಗಳನ್ನು ಕಾಲೇಜಿಗೆ ಕಳುಹಿಸುವುದನ್ನೇ ಕಾಯುತ್ತಿರುತ್ತಾಳೆ.
ಸುನಾಯಾನ ಮಗಳ ಜತೆ ಲವ್
ಒಂದು ದಿನ ಮಗಳು ಪ್ರಿಯಾಳನ್ನು ಕಾಲೇಜಿಗೆ ಬಿಟ್ಟುಬರುವಂತೆ ಸುನಾಯಾನ ಪರಮೇಶ್ಗೆ ಹೇಳುತ್ತಾಳೆ. ಅದರಂತೆ ಪ್ರಿಯಾಳನ್ನು ಪರಮೇಶ್ ಕಾಲೇಜಿಗೆ ಡ್ರಾಪ್ ಮಾಡುತ್ತಾನೆ. ಹೀಗೆ ಪಿಕಪ್ ಮತ್ತು ಡ್ರಾಪ್ ನಡೆಯುತ್ತಿರುತ್ತದೆ. ಪ್ರಿಯಾ ಸಣ್ಣವಳಾಗಿರುವುದರಿಂದ ಏನು ಆಗುವುದಿಲ್ಲ ಎಂದು ನಿರ್ಲಕ್ಷಿಸುತ್ತಾಳೆ. ಕಾಲೇಜು ಮುಗಿಯುತ್ತಿದ್ದಂತೆ ಪ್ರಿಯಾ ಮಹಡಿ ಮೇಲೆ ತೆರಳಿ ಪರಮೇಶ್ ಜತೆ ಮಾತನಾಡುತ್ತಿರುತ್ತಾಳೆ. ಓದಿನಲ್ಲೂ ಆಸಕ್ತಿ ಕಳೆದುಕೊಂಡಿರುತ್ತಾಳೆ. ಇದರಿಂದ ಸುನಾಯಾನಗೆ ಅನುಮಾನವು ಬರುತ್ತದೆ. ಅಷ್ಟರಲ್ಲಾಗಲೇ ಪ್ರಿಯಾ ಪರಮೇಶ್ ಪ್ರೀತಿಯ ಬಲೆಯಲ್ಲಿ ಬಿದ್ದಿರುತ್ತಾಳೆ. ಹೀಗಿ ಪ್ರತಿದಿನ ಅವರ ಲವ್ ಮುಂದುವರಿದಿರುತ್ತದೆ. ಅಲ್ಲದೆ, ದೈಹಿಕ ಸಂಬಂಧಕ್ಕೂ ಒಪ್ಪಿಗೆ ನೀಡಿರುತ್ತಾಳೆ.
ತಾಯಿ-ಮಗಳ ಜತೆ ದೈಹಿಕ ಸಂಬಂಧ
ಇತ್ತ ಪರಮೇಶ್ ತಾಯಿ ಜತೆ ದೈಹಿಕ ಸಂಬಂಧ ಮತ್ತು ಮಗಳ ಜತೆ ರೊಮ್ಯಾನ್ಸ್ ಮುಂದುವರಿಸಿರುತ್ತಾನೆ. ಒಂದು ದಿನ ಮಧ್ಯಾಹ್ನ ಸುನಾಯಾನಾ ಜತೆ ಪರಮೇಶ್ ಸರಸವಾಡುವಾಗ ಕಾಲೇಜು ಮುಗಿಸಿಕೊಂಡು ಪ್ರಿಯಾ ಆಕಸ್ಮಿಕವಾಗಿ ಮನೆಗೆ ಬರುತ್ತಾಳೆ. ತಾಯಿ, ಪರಮೇಶ್ ಜತೆ ಮಂಚದ ಮೇಲೆ ಸರಸವಾಡುತ್ತಿರುವುದನ್ನು ನೇರವಾಗಿ ನೋಡುತ್ತಾಳೆ. ಈ ವೇಳೆ ಮೂವರಿಗೂ ಶಾಕ್ ಆಗುತ್ತದೆ. ಬಳಿಕ ಪರಮೇಶ್ ಸುನಾಯಾನ ಮಗಳನ್ನು ಸಮಾಧಾನ ಮಾಡಲು ಹೋಗುತ್ತಾನೆ. ಕೋಪದಿಂದ ನೀನು ಇಂಥವನು ಎಂದು ತಿಳಿದಿರಲಿಲ್ಲ ಎಂದು ಪ್ರಿಯಾ ನಿಂದಿಸುತ್ತಾಳೆ.
ಮಗಳನ್ನು ಕೊಲ್ಲಲು ತಂತ್ರ
ಘಟನೆ ನಡೆದ ದಿನವೇ ಸಂಜೆ ಪರಮೇಶ್ನನ್ನು ಸುನಾಯಾನ ಕರೆಯುತ್ತಾಳೆ. ಇಂದು ರಾತ್ರಿ ಪ್ರಿಯಾಳನ್ನು ಕೊಲೆ ಮಾಡುವುದಾಗಿ ಹೇಳುತ್ತಾಳೆ. ಇದರಿಂದ ಪರಮೇಶ್ಗೆ ಶಾಕ್ ಆಗುತ್ತದೆ. ನಾನು ಪ್ರಿಯಾಳನ್ನು ಮದುವೆಯಾದರೂ ನಾನು ನಿಮ್ಮನ್ನು ಬಿಡುವುದಿಲ್ಲ ಎಂದು ಪರಮೇಶ್ ಹೇಳುತ್ತಾನೆ. ಆದರೆ, ಮದುವೆ ಆದರೂ ಸಮಸ್ಯೆ ಬಗೆಹರಿಯುವುದಿಲ್ಲ. ನಮಗಿರುವ ಒಂದೇ ದಾರಿಯೆಂದರೆ ಪ್ರಿಯಾಳನ್ನು ಕೊಲ್ಲುವುದು ಎಂದು ಸುನಾಯಾನಾ ಹೇಳುತ್ತಾಳೆ. ಅಲ್ಲದೆ, ಇಬ್ಬರಿಗೂ ಮೋಸ ಮಾಡಿದ ಎಂದು ದೂರು ನೀಡುತ್ತೇವೆ ಎಂದು ಬೆದರಿಕೆ ಹಾಕುತ್ತಾಳೆ. ಕೊನೆಗೆ ಪ್ರಿಯಾಳನ್ನು ಕೊಲೆ ಮಾಡಲು ಪರಮೇಶ್ ಒಪ್ಪಿಕೊಳ್ಳುತ್ತಾನೆ.
ನಡೆಯಿತು ಘೋರ ದುರಂತ
ಅದರಂತೆ ಮನೆಯ ಮುಖ್ಯದ್ವಾರವನ್ನು ರಾತ್ರಿ ಲಾಕ್ ಮಾಡಲಾಗುತ್ತದೆ. 10 ಗಂಟೆ ಸುಮಾರಿಗೆ ಪ್ರಿಯಾ ಬೆಡ್ರೂಮಿಗೆ ತೆರಳುತ್ತಾರೆ. ಬಳಿಕ ಸುನುಯಾನಾ ಪ್ರಿಯಾಳ ಕಾಲುಗಳನ್ನು ಹಿಡಿದು ಉಸಿರುಗಟ್ಟಿಸಿ ಸಾಯಿಸುತ್ತಾರೆ. ಮಾರನೇ ದಿನ ದೊಡ್ಡ ಡ್ರಾಮವನ್ನು ಸೃಷ್ಟಿ ಮಾಡುತ್ತಾರೆ. ಪ್ರಿಯಾ ಆತ್ಮಹತ್ಯೆ ಮಾಡಿಕೊಂಡಿರುವಂತೆ ಬಿಂಬಿಸುತ್ತಾರೆ. ಆದರೆ, ಪೊಲೀಸರಿಗೆ ಈ ಘಟನೆ ಬಗ್ಗೆ ಅನುಮಾನ ಇರುತ್ತದೆ. ಬಳಿಕ ತನಿಖೆಯು ಆರಂಭವಾಗುತ್ತದೆ. ಪ್ರಿಯಾ ಕೈಯಲ್ಲಿ ಪರಮೇಶ್ ಟ್ಯಾಟೂ ಇರುವುದು ತಿಳಿಯುತ್ತದೆ. ಬಳಿಕ ಆಕೆಯ ಮೃತದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಿ ಪರಮೇಶ್ನನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ.
ಮರಣೋತ್ತರ ವರದಿಯಲ್ಲಿ ಆಘಾತಕಾರಿ ಅಂಶ
ಮರಣೋತ್ತರ ವರದಿಯಲ್ಲಿ ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತದೆ. ಆಕೆಯ ಮೇಲೆ ಅನೇಕ ಬಾರಿ ಲೈಂಗಿಕ ಸಂಪರ್ಕ ಆಗಿರುತ್ತದೆ. ಅಲ್ಲದೆ, ಆಕೆಯು ಗರ್ಭಿಣಿಯು ಆಗಿರುತ್ತಾಳೆ. ಆಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂಬುದು ವರದಿಯಿಂದ ತಿಳಿಯುತ್ತದೆ. ಇದು ಪೂರ್ವನಿಯೋಜಿತ ಕೊಲೆ ಎಂಬುದು ಗೊತ್ತಾಗುತ್ತದೆ. ಬಳಿಕ ಪರಮೇಶ್ನನ್ನು ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆತ ಎಲ್ಲವನ್ನು ಬಾಯ್ಬಿಡುತ್ತಾನೆ. ಇದಾದ ಬಳಿಕ ಸುನಾಯಾನಾ ಕೂಡ ತಪ್ಪೊಪ್ಪಿಕೊಳ್ಳುತ್ತಾನೆ. ಈ ಘಟನೆ ಕೆಲವೇ ವರ್ಷಗಳ ಹಿಂದೆ ನಡೆದಿದ್ದು, ಹೈದರಾಬಾದ್ನಲ್ಲಿ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಸದ್ಯ ಪರಮೇಶ್ ಮತ್ತು ಸುನಾಯಾನಾ ಬಂಧನದಲ್ಲಿದ್ದಾರೆ. (ಏಜೆನ್ಸೀಸ್)
ಪ್ರಿಯಕರನ ಮನೆಯಲ್ಲಿ ಯುವತಿ ಶವ ಪತ್ತೆ! ಮೃತಳ ಪೋಷಕರಿಂದ ನಡೆದೇ ಹೋಯ್ತು ಘೋರ ದುರಂತ
ಟ್ರ್ಯಾಕ್ಟರ್ ಹರಿದು ಗಾಯಗೊಂಡಿದ್ದ ಬಾಲಕ ಸಾವು: ಪಶ್ಚತ್ತಾಪದಿಂದ ಆತ್ಮಹತ್ಯೆಗೆ ಶರಣಾದ ಪಿಎಚ್ಡಿ ವಿದ್ಯಾರ್ಥಿ!
ಜನ ಕೇಳುವ ಪ್ರಶ್ನೆಗೆ ಉತ್ತರಿಸಲು ಇರಿಸುಮುರಿಸು: ನೋವಿನಿಂದಲೇ ಮಹಿಳಾ ಎಸ್ಐ ಆತ್ಮಹತ್ಯೆ!
ಪಕ್ಕದೂರಲ್ಲಿ 22 ವರ್ಷದ ಯುವತಿ ಸಾವು! ಶವದ ಪಕ್ಕದಲ್ಲೇ ಇತ್ತು ಆಸಿಡ್, ಚಾಕು…