More

  ಕಚ್ಚಾ ಬಾದಾಮ್​ ಹಾಡಿಗೆ ಸೊಂಟ ಬಳುಕಿಸಿದ ಶಾಸಕಿ ರೋಜಾ: ವಿಡಿಯೋ ವೈರಲ್​!

  ನವದೆಹಲಿ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹಲ್​ಚಲ್​ ಎಬ್ಬಿಸಿರುವ ಹಾಡೆಂದರೆ ಅದು ಕಚ್ಚಾ ಬಾದಾಮ್. ಫೇಸ್​ಬುಕ್​, ಟ್ವಿಟರ್​, ಯೂಟ್ಯೂಬ್​ ಮತ್ತು ಇನ್​ಸ್ಟಾಗ್ರಾಂ ಎಲ್ಲಿ ನೋಡಿದರೂ ಬರೀ ಕಚ್ಚಾ ಬಾದಾಮ್​ ರೀಮಿಕ್ಸ್​ ಹಾಡೇ ಕಣ್ಣು ಮುಂದೆ ಬರುತ್ತಿದೆ. ಇನ್ನೂ ಕೂಡ ಅದರ ಪ್ರಭಾವ ಮಾತ್ರ ಕಡಿಮೆಯಾಗಿಲ್ಲ. ಅಲ್ಲದೆ, ಈ ಹಾಡಿಗೆ ಫಿದಾ ಆದ ಎಷ್ಟೋ ಮಂದಿ ಸೊಂಟ ಬಳಕಿಸುತ್ತಿದ್ದಾರೆ. ಇದೀಗ ಶಾಸಕಿ ಹಾಗೂ ನಟಿ ರೋಜಾ ಕೂಡ ಇದೇ ಹಾಡಿಗೆ ಡಾನ್ಸ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​​ ಆಗಿದೆ.

  ರೋಜಾ ಅಲಿಯಾಸ್​ ರೋಜಾ ಸೆಲ್ವಮಣಿ ಆಂಧ್ರ ಪ್ರದೇಶದ ಚಿತ್ತೂರಿನ ನಗರಿ ಕ್ಷೇತ್ರದ ಶಾಸಕಿ. ಸಿಎಂ ಜಗನ್​ ಮೋಹನ್​ ರೆಡ್ಡಿ ನೇತೃತ್ವದ ವೈಎಸ್​ಆರ್​ಸಿಪಿ ಪಕ್ಷದ ಶಾಸಕಿಯಾಗಿದ್ದು, ರಾಜಕಾರಣದ ಜತೆಗೆ ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಬಣ್ಣದ ಜಗತ್ತಿನಲ್ಲೂ ತೊಡಗಿಸಿಕೊಂಡಿದ್ದಾರೆ.

  ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹಲ್​ಚಲ್​ ಎಬ್ಬಿಸಿರುವ ಕಚ್ಚಾ ಬಾದಾಮ್​ ಹಾಡಿಗೆ ನೀಲಿ ಉಡುಗೆ ತೊಟ್ಟ ರೋಜಾ ಸೊಂಟ ಬಳುಕಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಸಾಕಷ್ಟು ಮಂದಿ ರೋಜಾ ಅವರ ನೃತ್ಯಕ್ಕೆ ಮನಸೋತು ಲೈಕ್​ಗಳ ಸುರಿಮಳೆ ಸುರಿಸುತ್ತಿದ್ದಾರೆ.

  ಹಾಡಿನ ಹಿನ್ನೆಲೆ ಏನು?
  ಪಶ್ಚಿಮ ಬಂಗಾಳದ ಬಿರ್​ಭಮ್​ ಜಿಲ್ಲೆಯ ನಿವಾಸಿ ಆಗಿರುವ ಭುವನ್ ಬದ್ಯಕರ್​​ ಕಚ್ಚಾ ಬಾದಾಮ್​ ಹಾಡು ಹೇಳಿಕೊಂಡು ಊರೂರು ತಿರುಗುತ್ತಾ ಕಡಲೆಕಾಯಿ ಮಾರಾಟ ಮಾಡಿ ಒಂದೆರೆಡು ಕಾಸು ಸಂಪಾದನೆ ಮಾಡುತ್ತಿದ್ದರು. ಅವರ ಹಾಡನ್ನು ಗುರುತಿಸಿದ ಗೋಧುಲಿಬೆಲಾ ಮ್ಯೂಸಿಕ್​ ಕಂಪನಿ ರೀಮಿಕ್ಸ್​ ಮಾಡಿ, ಭುವನ್​ ಕೈಯಲ್ಲೇ ಹಾಡಿಸಿದ್ದಾರೆ. ಇದಾದ ಬಳಿಕ ಭುವನ್​ ಬದುಕೇ ಬದಲಾಗಿದೆ. ಕಚ್ಚಾ ಬಾದಾಮ್​ ಒರಿಜಿನಲ್​ ಸಾಂಗ್​ ಅನ್ನು ರೀಮಿಕ್ಸ್​ ಮಾಡಲು ಸಂಭಾವನೆಯಾಗಿ ಭುವನ್​ಗೆ 3 ಲಕ್ಷ ರೂ. ನೀಡಲಾಗಿದೆ ಎಂದು ತಿಳಿದುಬಂದಿದೆ. ಕಡಲೆಕಾಯಿ ಮಾರಾಟ ಮಾಡಿ ದಿನದೂಡುತ್ತಿದ್ದ ಭುವನ್​ ಇದೀಗ ಕಚ್ಚಾ ಬಾದಾಮ್​ ಮೂಲಕ ಖ್ಯಾತಿಯಾಗಿದ್ದು, ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಅವರ ಲಕ್​ ಬದಲಾಗಿದೆ. (ಏಜೆನ್ಸೀಸ್​)

  ವೈರಲ್​ ಆಯ್ತು ಕಚ್ಚಾ ಬಾದಮ್​ ಹಾಡಿಗೆ ಪೊಲೀಸ್​ ಸಿಬ್ಬಂದಿ ಹಾಕಿದ ಸ್ಟೆಪ್ಸ್​: ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ ನೋಡಿ…

  ಏರುತ್ತಲೇ ಇದೆ ಇಂಧನ ದರ, ಜನ ಸಾಮಾನ್ಯರ ಬದುಕು ಭಾರ: ಇಂದಿನ ಪೆಟ್ರೋಲ್​-ಡೀಸೆಲ್​ ದರ ಹೀಗಿದೆ

  ಡಿವೋರ್ಸ್ ಬೆನ್ನಲ್ಲೇ ಮಾಜಿ ಪತಿಗೆ ಶಾಕ್​ ಕೊಟ್ಟ ಸೆಲೆಬ್ರಿಟಿ IAS ಅಧಿಕಾರಿ ಟೀನಾ ಡಾಬಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts