ಮಂಡ್ಯ: ನಿರಂತರ ಮಳೆಯಿಂದಾಗಿ ಕೃಷ್ಣರಾಜಸಾಗರ ಜಲಾಶಯ (ಕೆಆರ್ಎಸ್) ಭರ್ತಿಯತ್ತ ಸಾಗುತ್ತಿದ್ದು, ಇನ್ನು ಒಂದೇ ಅಡಿ ಅಷ್ಟೇ ಬಾಕಿ ಇದೆ. ಕಾವೇರಿ ಕೊಳ್ಳದ ರೈತರಲ್ಲಿ ಈ ಬಾರಿಯೂ ವರುಣ ದೇವ ಆತಂಕವನ್ನು ದೂರ ಮಾಡಿದ್ದಾನೆ.
ಮುಂಗಾರು ಆರಂಭದಲ್ಲಿ ವರುಣ ದೇವ ನಿರಾಸೆ ಮೂಡಿಸಿದ್ರಿಂದ ರೈತರ ಆತಂಕದಲ್ಲಿದ್ದರು. ಈ ಬಾರಿ ಡ್ಯಾಂ ಭರ್ತಿ ಆಗದಿದ್ರೆ ಬೇಸಿಗೆ ಬೆಳೆ ಬೆಳೆಯಲಾಗದ ಆತಂಕ ಎದುರಾಗಿತ್ತು. ಆರಂಭದಲ್ಲಿ ಮುಂಗಾರು ಕೈಕೊಟ್ಟರೂ ಕಡೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಡ್ಯಾಂ ಭರ್ತಿಯತ್ತ ಸಾಗುತ್ತಿದೆ.
ಫಲಿಸಿದ ಸಿಎಂ ಬೊಮ್ಮಾಯಿ ಪೂಜೆ ಫಲ
ವಾಡಿಕೆಯಂತೆ ಜಲಾಶಯ ಭರ್ತಿಯಾಗದ ಹಿನ್ನೆಲೆ ವಿಶೇಷ ಪೂಜೆ ನಡೆದಿತ್ತು. ಕೆಲ ದಿನಗಳ ಹಿಂದದಷ್ಟೇ ಕೆಆರ್ಎಸ್ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ನಾರಾಯಣಗೌಡ ಪೂಜೆ ನೆರವೇರಿಸಿದ್ದರು. ಖ್ಯಾತ ಜ್ಯೋತಿಷಿ ಡಾ.ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಪರ್ಜನ್ಯ ಹೋಮ ನಡೆದಿತ್ತು. ಇದೀಗ ವಿಶೇಷ ಪೂಜೆ ಬಳಿಕ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ.
ಜಲಾಶಯ ಭರ್ತಿಯಾಗಲು ಕೇವಲ ಒಂದು ಅಡಿ ಬಾಕಿ ಇದೆ. ಜಲಾಶಯದ ನೀರಿನ ಗರಿಷ್ಠ ಮಟ್ಟ 124.80 ಅಡಿಗಳಿದ್ದು, ಜಲಾಶಯದ ಇಂದಿನ ನೀರಿನ ಮಟ್ಟ 123.40 ಅಡಿಗಳಾಗಿದೆ. ಸದ್ಯ ಡ್ಯಾಂಗೆ 19,341 ಕ್ಯೂಸೆಕ್ ಒಳ ಹರಿವು ಇದೆ. ನಾಳೆ ಡ್ಯಾಂ ಸಂಪೂರ್ಣ ಭರ್ತಿ ಆಗುವ ಸಾಧ್ಯತೆ ಇದೆ. ಡ್ಯಾಂನಿಂದ 3,535 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. 49.452 ಟಿಎಂಸಿ ನೀರು ಶೇಖರಣೆ ಸಾಮರ್ಥ್ಯ ಹೊಂದಿರುವ ಕೆಆರ್ಎಸ್ ಡ್ಯಾಂನಲ್ಲಿ ಒಟ್ಟು 47.516 ಟಿಎಂಸಿ ನೀರಿನ ಶೇಖರಣೆ ಆಗಿದೆ. (ದಿಗ್ವಿಜಯ ನ್ಯೂಸ್)
ಫೇಸ್ಬುಕ್ ನೋಡ್ತಿದ್ದ ಬಾಹುಬಲಿ ಸಿನಿಮಾ ನಟಿಗೆ ಬಿಗ್ ಶಾಕ್! ಲೈಂಗಿಕತೆಯ ಭರವಸೆ ನೆಪದಲ್ಲಿ ನೀಚ ಕೃತ್ಯ
ದುಬೈನಲ್ಲಿ ಸೋತವರ ಹಣಾಹಣಿ; ವೆಸ್ಟ್ ಇಂಡೀಸ್-ದಕ್ಷಿಣ ಆಫ್ರಿಕಾ ಮುಖಾಮುಖಿ
11 ಆಟಗಾರರಿರುವ ತಂಡದಲ್ಲಿ ಮುಸ್ಲಿಂನನ್ನೇ ಟಾರ್ಗೆಟ್ ಮಾಡುತ್ತಿರುವುದೇಕೆ? ಅಸಾದುದ್ದೀನ್ ಓವೈಸಿ ಆಕ್ರೋಶ