ಸಾವಿನಲ್ಲೂ ಒಂದಾದ ತಾಯಿ ಮತ್ತು ಮಗ: ಸವಣೂರು ತಾಲೂಕಿನ ಕಲಕೋಟಿ ಗ್ರಾಮದಲ್ಲಿ ನಡೆದ ಘಟನೆ

ಹಾವೇರಿ: ತಾಯಿ ಮತ್ತು ಮಗ ಸಾವಿನಲ್ಲೂ ಒಂದಾದ ಘಟನೆ ಸವಣೂರು ತಾಲೂಕಿನ ಕಲಕೋಟಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ತಾಯಿ ಎಲ್ಲವ್ವ ತಿಮ್ಮನಹಳ್ಳಿ (80) ಹಾಗೂ ಮಗ ಷಣ್ಮುಖಪ್ಪ ತಿಮ್ಮನಹಳ್ಳಿ (45) ಎಂದು ಗುರುತಿಸಲಾಗಿದೆ. ಎಲ್ಲವ್ವ ಬೆಳಿಗ್ಗೆ ಹತ್ತೂವರೆ ಗಂಟೆಗೆ ವಯೋಸಹಜವಾಗಿ ಮೃತಪಟ್ಟರು. ಮೃತ ಎಲ್ಲವ್ವಳಿಗೆ ಒಟ್ಟು ಮೂವರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಎಲ್ಲವ್ವ ಕಿರಿಯ ಪುತ್ರನ ಮನೆಯಲ್ಲಿ ವಾಸವಾಗಿದ್ದರು. ಎಲ್ಲವ್ವ ಮೃತಪಡುತ್ತಿದ್ದಂತೆ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಎರಡನೆಯ ಪುತ್ರ ಷಣ್ಮುಖಪ್ಪನಿಗೆ ವಿಷಯ ತಿಳಿಸಲು ಮನೆಯವರು … Continue reading ಸಾವಿನಲ್ಲೂ ಒಂದಾದ ತಾಯಿ ಮತ್ತು ಮಗ: ಸವಣೂರು ತಾಲೂಕಿನ ಕಲಕೋಟಿ ಗ್ರಾಮದಲ್ಲಿ ನಡೆದ ಘಟನೆ