ಅಶ್ಲೀಲ ಮೆಸೇಜ್​ ಮೂಲಕ ಟೇಬಲ್​ ಟೆನ್ನಿಸ್​ ಆಟಗಾರ್ತಿ ನೈನಾ ಜೈಸ್ವಾಲ್​ಗೆ ಕಿರುಕುಳ: ಕಿಡಿಗೇಡಿ ವಿರುದ್ಧ ದೂರು

ಹೈದರಾಬಾದ್​: ಸಾಮಾಜಿಕ ಜಾಲತಾಣದಲ್ಲಿ ವೇಷ ಮರೆಸಿಕೊಂಡಿರುವ ಕೆಲವು ಕಿಡಿಗೇಡಿಗಳು ಇನ್ನೊಬ್ಬರಿಗೆ ತೊಂದರೆ ಕೊಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಇದೀಗ ಟೇಬಲ್​ ಟೆನ್ನಿಸ್​ ಆಟಗಾರ್ತಿ ನೈನಾ ಜೈಸ್ವಾಲ್​ ಅವರನ್ನು ಟಾರ್ಗೆಟ್​ ಮಾಡಿರುವ ಕಿಡಿಗೇಡಿಯೊಬ್ಬ ಅಶ್ಲೀಲ ಸಂದೇಶಗಳೊಂದಿಗೆ ಅವರಿಗೆ ಕಿರುಕುಳ ನೀಡುತ್ತಿದ್ದು, ನೈನಾ ತಂದೆ ಸೈಬರ್​ ಕ್ರೈಂ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಶ್ರೀಕಾಂತ್​ ಹೆಸರಿನ ಯುವಕನೊಬ್ಬ ಟ್ವಿಟರ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ನೈನಾಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾನೆ. ಸಾಕಷ್ಟು ಬಾರಿ ಎಚ್ಚರಿಕೆ ನೀಡಿದಾದರೂ, ಕಿಡಿಗೇಡಿ ತನ್ನ ವರ್ತನೆಯನ್ನು ಬದಲಿಸಿಕೊಂಡಿಲ್ಲ. ಪೊಲೀಸರಿಂದ ಎಚ್ಚರಿಕೆ … Continue reading ಅಶ್ಲೀಲ ಮೆಸೇಜ್​ ಮೂಲಕ ಟೇಬಲ್​ ಟೆನ್ನಿಸ್​ ಆಟಗಾರ್ತಿ ನೈನಾ ಜೈಸ್ವಾಲ್​ಗೆ ಕಿರುಕುಳ: ಕಿಡಿಗೇಡಿ ವಿರುದ್ಧ ದೂರು