ಹೈದರಾಬಾದ್: ವದಂತಿಗಳು ಸಿನಿಮಾ ರಂಗದ ಒಂದು ಭಾಗ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ, ಸ್ವಲ್ಪ ವಾಸ್ತವತೆ ಇದ್ದರೆ ಮಾತ್ರ ಇಂತಹ ವದಂತಿಗಳಿಗೆ ರೆಕ್ಕೆ-ಪುಕ್ಕ ಬರುವುದು ಸಹಜ. ಇದೀಗ ಸೌತ್ ಬ್ಯೂಟಿ ಸಮಂತಾ ವಿಚಾರದಲ್ಲೂ ಇದೇ ಆಗಿದೆ.
ಸದ್ಯ ನಾಗಚೈತನ್ಯರಿಂದ ಡಿವೋರ್ಸ್ ಪಡೆದು ಏಕಾಂಗಿಯಾಗಿ ಬದುಕು ನಡೆಸುತ್ತಿರುವ ಸಮಂತಾ, ಟಾಲಿವುಡ್, ಕಾಲಿವುಡ್, ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾಗಳತ್ತ ತಮ್ಮ ಗಮನಹರಿಸುವ ಮೂಲಕ ಸಿನಿ ರಂಗದಲ್ಲಿ ಸಂಪೂರ್ಣ ಬಿಜಿಯಾಗಿದ್ದಾರೆ. ಇದೀಗ ಸಮಂತಾ ಕುರಿತು ಬಂದಿರುವ ವದಂತಿಗಳು ನಿಜವಾಗಿದ್ದರೆ, ಖಂಡಿತವಾಗಿಯೂ ಆ ಬಗ್ಗೆ ಸಮಂತಾ ಚಿಂತಿಸಲೇ ಬೇಕಾಗುತ್ತದೆ.
ಸಖತ್ ಬಿಜಿಯಾಗಿರುವ ಸಮಂತಾ, ಮುಂಬೈನಲ್ಲಿ ಬೀಡುಬಿಟ್ಟಿದ್ದು, ಹಲವಾರು ಸಭೆಗಳು ಮತ್ತು ಪ್ರಶಸ್ತಿ ಕಾರ್ಯಕ್ರಮಗಳು ಹಾಗೂ ಪಿಆರ್ ಚಟುವಟಿಕೆಗಳನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ. ಬಾಲಿವುಡ್ನಲ್ಲಿ ಹೆಚ್ಚು ಬಿಜಿಯಾಗಿರುವುದು ಸೌತ್ ಸಿನಿರಂಗದ ಅವರ ಸಿನಿಮಾ ಕೆಲಸಗಳ ಮೇಲೆ ಪರಿಣಾಮ ಬೀರಲಿದೆ. ಮುಂಬೈನಲ್ಲಿ ಹೋಗಿ ಕೂತುಬಿಟ್ಟರೆ, ಈ ಸಿನಿಮಾಗಳನ್ನು ಯಾರು ಮುಗಿಸಿಕೊಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆಯಂತೆ.
ಮುಂಬೈನಲ್ಲಿ ನಡೆಯುವ ಸಭೆಗಳು ಮತ್ತು ಕಾರ್ಯಕ್ರಮಗಳಿಗೆ ಸ್ಯಾಮ್ ಹಾಜರಾಗಲು ಕೆಲವೊಮ್ಮೆ ಚಿತ್ರೀಕರಣವನ್ನು ಮಧ್ಯದಲ್ಲಿ ರದ್ದುಗೊಳಿಸುತ್ತಿದ್ದಾರೆ ಎಂಬುದು ಇತ್ತೀಚಿನ ವದಂತಿಯಾಗಿದೆ. ಇತ್ತೀಚೆಗಷ್ಟೇ ಸೆಟ್‌ನಲ್ಲಿ ನಡೆದ ಇಂತಹ ಘಟನೆಯೊಂದು ಬಲವಾದ ವದಂತಿ ಎಂಬುದು ಉದ್ಯಮ ವಲಯದಲ್ಲಿ ಚರ್ಚೆಯಾಗುತ್ತಿದೆ. ಅನೇಕ ದಿನಗಳಿಂದ ಸಮಂತಾ ಅವರನ್ನು ನೋಡುತ್ತಿರುವವರು ಇದು ನಾವು ಮೊದಲು ನೋಡಿದ ಸಮಂತಾ ಅಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರಂತೆ.
ಈ ಮೊದಲು ಸಮಂತಾ ಅವರು ತುಂಬಾ ಪರಿಶ್ರಮ ವಹಿಸಿ ಕೆಲಸ ಮಾಡುತ್ತಿದ್ದರಂತೆ. ಅಲ್ಲದೆ, ವೃತ್ತಿಪರತೆ ಮತ್ತು ಸೆಟ್‌ಗಳಲ್ಲಿ ತುಂಬಾ ಕೂಲ್ ಆಗಿ ಮತ್ತು ವಿನಮ್ರವಾಗಿ ವರ್ತಿಸಲು ಹೆಸರುವಾಸಿಯಾಗಿದ್ದರಂತೆ. ಆದರೀಗ ಸೆಟ್‌ನಲ್ಲಿ ಮೂಡ್ ಸ್ವಿಂಗ್ ಮತ್ತು ಆಗಾಗ ಸಿಡಿಮಿಡಿಗೊಳ್ಳವುದು ಮಾಡುತ್ತಾರಂತೆ. ಇದು ಅವರ ಗೌರವಕ್ಕೆ ಧಕ್ಕೆಯಾಗಬಹುದು ಎಂದು ಅವರನ್ನು ಹತ್ತಿರದಿಂದ ನೋಡಿದವರ ಅಭಿಪ್ರಾಯವಾಗಿದೆ. ಇದನ್ನು ಅರಿತುಕೊಂಡು ಸಮಂತಾ ಸರಿಮಾಡಿಕೊಳ್ಳುತ್ತಾರೆ ಎಂಬ ನಂಬಿಕೆಯು ಅವರಲ್ಲಿ ಇದೆ. (ಏಜೆನ್ಸೀಸ್)
ಗುಪ್ತಾಂಗದಲ್ಲಿ ನೋವು: ಆಸ್ಪತ್ರೆಯ ಮೆಟ್ಟಿಲೇರಿದ ಮಹಿಳೆಯ ಎಕ್ಸ್ರೇ ರಿಪೋರ್ಟ್ ನೋಡಿ ಬೆಚ್ಚಿಬಿದ್ದ ವೈದ್ಯರು!
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಅಕಾಲಿಕ ಮಳೆ ಗಾಳಿ ಆರ್ಭಟ; ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಅಸ್ತವ್ಯಸ್ತ