More

    ಮತ್ತೆ ಗೂಡು ಸೇರಿದ ಕಾಣೆಯಾಗಿದ್ದ ಗಿಣಿ! ಕೊಟ್ಟ ಮಾತಂತೆ 85 ಸಾವಿರ ರೂ. ಬಹುಮಾನ ನೀಡಿದ ಕುಟುಂಬ

    ತಮಕೂರು: ಕೆಲವರಿಗೆ ಸಾಕು ಪ್ರಾಣಿ-ಪಕ್ಷಿಗಳು ತಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿಬಿಟ್ಟಿರುತ್ತವೆ. ತಮ್ಮಿಷ್ಟದ ಜೀವಿಗಳು ಕಣ್ಣ ಮುಂದೆ ಒಂದು ಕ್ಷಣ ಇಲ್ಲದಿದ್ದರೆ ಏನೋ ಕಳೆದುಕೊಂಡ ಭಾವನೆ ಕಾಡುತ್ತಿರುತ್ತದೆ. ಅಂತಹುದರಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾದರೆ, ಅದಕ್ಕಿಂತ ದೊಡ್ಡ ನೋವು ಬೇರೊಂದಿಲ್ಲ. ಅದೇ ರೀತಿ ಕಳೆದು ಹೋದ ಅಥವಾ ನಾಪತ್ತೆಯಾದ ಪ್ರೀತಿ ಪಾತ್ರರು ಮರಳಿ ಮನೆ ಸೇರಿದರೆ ಅದಕ್ಕಿಂತ ಖುಷಿ ಬೇರೆ ಇಲ್ಲ. ಅಂಥದ್ದೇ ಸನ್ನಿವೇಶ ಇದೀಗ ತುಮಕೂರಿನ ಕುಟುಂಬವೊಂದು ಎದುರಿಸಿದೆ. ತಮ್ಮ ನೆಚ್ಚಿನ ಸಾಕು ಗಿಣಿಯನ್ನು ಕಳೆದುಕೊಂಡು ನೋವಿನಲ್ಲಿದ್ದ ಕುಟುಂಬ ಇದೀಗ ಅತಿಯಾದ ಸಂತೋಷದಲ್ಲಿದೆ.

    ತುಮಕೂರಿನ ಜಯನಗರದ ನಿವಾಸಿ ಅರ್ಜುನ್​ ಅವರ ಕುಟುಂಬ ತಮ್ಮ ಪ್ರೀತಿಯ ಗಿಣಿ ಕಳೆದುಕೊಂಡ ದುಃಖದಲ್ಲಿತ್ತು. ಅಲ್ಲದೆ, ಗಿಣಿ ಪತ್ತೆ ಮಾಡಿಕೊಟ್ಟವರಿಗೆ ಆರಂಭದಲ್ಲಿ 50 ಸಾವಿರ ರೂಪಾಯಿ ಬಹುಮಾನವನ್ನು ಘೋಷಣೆ ಮಾಡಿದ್ದರು. ಇದಾದ ಬಳಿಕ ಮತ್ತೆ 35 ಸಾವಿರ ಸೇರಿ ಒಟ್ಟು 85 ಸಾವಿರ ಬಹುಮಾನವನ್ನು ಅರ್ಜುನ್​ ಕುಟುಂಬ ಘೋಷಣೆ ಮಾಡಿತ್ತು. ಇದೀಗ ಆ ಗಿಣಿ ಮತ್ತೆ ಅರ್ಜುನ್​ ಕುಟುಂಬವನ್ನು ಮರಳಿ ಸೇರಿದೆ.

    ವಿವರಣೆಗೆ ಬರುವುದಾದರೆ, ಅರ್ಜುನ್​ ಕುಟುಂಬ ಸಾಕಿದ್ದ ಆಫ್ರಿಕನ್ ಗ್ರೇ ಜಾತಿಯ ಗಿಣಿ ಇದೇ 16ರಂದು ತಮ್ಮ ಮನೆಯಿಂದ ನಾಪತ್ತೆಯಾಗಿತ್ತು. ಪ್ರೀತಿಯ ಗಿಣಿ ಕಾಣೆಯಾಗಿರುವುದಕ್ಕೆ ಅರ್ಜುನ್​ ಕುಟುಂಬ ಕಣ್ಣೀರಿಡುತ್ತಿತ್ತು. ಗಿಣಿಗೆ ರುಸ್ತುಮಾ ಎಂಬ ಹೆಸರಿಟ್ಟು ಮನೆಯಲ್ಲಿ ತುಂಬಾ ಮುದ್ದಾಗಿ ಸಾಕಿಕೊಂಡಿದ್ದರು. ಆಫ್ರೀಕನ್‌ ಗ್ರೇ ತಳಿಯ ಎರಡು ಗಿಣಿಗಳನ್ನು ಎರಡೂವರೆ ವರ್ಷದಿಂದ ಮನೆಯಲ್ಲಿ ಸಾಕಲಾಗಿತ್ತು. ಅದರಲ್ಲಿ ರುಸ್ತುಮಾ ಗಿಣಿ ನಾಪತ್ತೆಯಾಗಿತ್ತು.

    ನೆಚ್ಚಿನ ಗಿಣಿಗಾಗಿ ಹಗಲು ರಾತ್ರಿ ಎನ್ನದೆ ಕುಟುಂಬ ಒಂದು ವಾರಗಳ ಕಾಲ ಹುಡುಕಾಟ ನಡೆಸಿತ್ತು. ಆದರೂ ಗಿಣಿ ಎಲ್ಲಿಯೂ ಪತ್ತೆಯಾಗಲಿಲ್ಲ. ಕೊನೆಗೆ ಗಿಣಿ ಕಾಣಿಸಿದರೆ ಮಾಹಿತಿ ನೀಡುವಂತೆ ಹಾಗೂ ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ ನೀಡುವುದಾಗಿ ಆರಂಭದಲ್ಲಿ ತುಮಕೂರು‌ ನಗರದ ಹಲವೆಡೆ ಅರ್ಜುನ್​ ಕುಟುಂಬದ ಬ್ಯಾನರ್ ಹಾಕಿತ್ತು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿಯೂ ಗಿಣಿ ಕಾಣೆಯಾಗಿರುವ ಬಗ್ಗೆ ಕುಟುಂಬ ಮಾಹಿತಿ ಹಂಚಿಕೊಂಡಿತ್ತು.

    ಕೆಲವು ದಿನಗಳ ಹಿಂದೆ 50 ಸಾವಿರ ಇದ್ದ ಬಹುಮಾನ ಮೊತ್ತವನ್ನು ಅರ್ಜುನ್​ ಕುಟುಂಬ 85 ಸಾವಿರಕ್ಕೆ ಏರಿಸಿತ್ತು. ಇದೀಗ ತಮ್ಮ ಪ್ರಯತ್ನಕ್ಕೆ ಪ್ರತಿಫಲ ದೊರೆತಿದ್ದು ಕಾಣೆಯಾಗಿದ್ದ ರುಸ್ತುಮಾ ಮರಳಿ ಮನೆಗೆ ಬಂದಿದ್ದಾಳೆ. ಇದರಿಂದಾಗಿ ಅರ್ಜುನ್​ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಅವರ ಖುಷಿಗೆ ಪಾರವೇ ಇಲ್ಲದಂತಾಗಿದೆ. ಖುಷಿಯಲ್ಲೂ ತಮ್ಮ ಮಾತನ್ನು ಉಳಿಸಿಕೊಂಡಿರುವ ಅರ್ಜುನ್​ ಕುಟುಂಬ ಗಿಣಿ ಹುಡುಕಿಕೊಟ್ಟವರಿಗೆ ಬರೊಬ್ಬರಿ 85 ಸಾವಿರ ರೂಪಾಯಿ ಬಹುಮಾನದ ಹಣವನ್ನು ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ನಾಪತ್ತೆಯಾದ ಮುದ್ದಿನ ಗಿಣಿಗಾಗಿ ಕಣ್ಣೀರಿಡುತ್ತಿರುವ ಕುಟುಂಬ: ಹುಡುಕಿ ಕೊಟ್ಟವರಿಗೆ 50 ಸಾವಿರ ರೂ. ಬಹುಮಾನ

    ಉದ್ಯೋಗ ಸೃಷ್ಟಿಯತ್ತ ದೃಷ್ಟಿ; ಮೂರು ಪಟ್ಟು ಹೆಚ್ಚಳ ನಿರೀಕ್ಷೆ  

    ಏಲಕ್ಕಿ ಕಂಪಿನ ಹಾವೇರಿ; ಹಾಲಿಗಳಿಗೆ ಆಕಾಂಕ್ಷಿತರ ವರಿ!

    ಉದ್ಯೋಗ ನಿರೀಕ್ಷೆ ಈಡೇರಲಿ; ನೂತನ ನೀತಿಯ ಸೂಕ್ತ ಅನುಷ್ಠಾನ ಅಗತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts