ತೀವ್ರ ಹೋರಾಟ ನಡೆಸಿ ಕೊನೆಗೂ ತನ್ನ ಪ್ರೇಯಸಿಯನ್ನು ಮರುಪಡೆದ ಆಧಿಲಾ: ಗೆದ್ದು ಬೀಗಿದ ಸಲಿಂಗ ಜೋಡಿ!

ಕೊಚ್ಚಿ: ದಿಕ್ಕು ತೋಚದೇ ನ್ಯಾಯಕ್ಕಾಗಿ ಕೋರ್ಟ್​ ಮೆಟ್ಟಿಲೇರಿದ್ದ ಸಲಿಂಗ ಜೋಡಿಗೆ ಸಿಹಿ ಸುದ್ದಿ ಸಿಕ್ಕಿದೆ. ಇಬ್ಬರು ಒಟ್ಟಿಗೆ ಬಾಳಲು ಕೇರಳದ ಹೈಕೋರ್ಟ್​ ಅನುಮತಿ ನೀಡಿ ಆದೇಶ ಹೊರಡಿಸಿದೆ. ಅಲುವಾ ಮೂಲದ ಆಧಿಲಾ ನಸ್ರಿನ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ಅಡಿಯಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ. ಆಧಿಲಾಳ ಮನವಿಯನ್ನು ಪರಿಗಣಿಸಿದ ನ್ಯಾಯಾಲಯವು ಅವಳು ತನ್ನ ಸಂಗಾತಿಯೊಂದಿಗೆ ಮತ್ತೆ ಸೇರಬಹುದು. ಇಬ್ಬರು ವಯಸ್ಕರಾಗಿದ್ದು, ಅವರವರ ಇಚ್ಛೆಯಂತೆ ಒಟ್ಟಿಗೆ ಬಾಳಬಹುದಾಗಿದೆ ಎಂದು ಹೈಕೋರ್ಟ್​ ನಿನ್ನೆ (ಮೇ.31) ಮಹತ್ವದ ಆದೇಶ ಹೊರಡಿಸಿದೆ. … Continue reading ತೀವ್ರ ಹೋರಾಟ ನಡೆಸಿ ಕೊನೆಗೂ ತನ್ನ ಪ್ರೇಯಸಿಯನ್ನು ಮರುಪಡೆದ ಆಧಿಲಾ: ಗೆದ್ದು ಬೀಗಿದ ಸಲಿಂಗ ಜೋಡಿ!