More

    ಉಷ್ಣವಲಯದ ಜಿರಳೆ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಚಲಿಸುವ ಜೀವಿಯೇ? ಫ್ಯಾಕ್ಟ್​ಚೆಕ್​ನಲ್ಲಿ ತಿಳಿದುಬಂದಿದ್ದೇನು?

    ಹೈದರಾಬಾದ್​: ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಚಲಿಸುವ ವಸ್ತು ಉಷ್ಣವಲಯದ ಜಿರಳೆಯ ಎಂಬ ಅಡಿಬರಹದೊಂದಿಗೆ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    Facts4genius ಎಂಬ ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಫೋಟೋವನ್ನು ಪೋಸ್ಟ್​ ಮಾಡಲಾಗಿದ್ದು, ಬಹುತೇಕರು ಇದನ್ನು ಸತ್ಯ ಎಂದು ನಂಬಿದ್ದಾರೆ ಹಾಗೂ ಹೆಚ್ಚಾಗಿ ಶೇರ್​ ಮಾಡಿಕೊಂಡಿದ್ದಾರೆ. ಆದರೆ, ಈ ಕುರಿತು ನ್ಯೂಸ್​ ಮೀಟರ್​ ನಡೆಸಿರುವ ಫ್ಯಾಕ್ಟ್​ಚೆಕ್​ನಲ್ಲಿ ಅಸಲಿ ವಿಚಾರ ಬೆಳಕಿಗೆ ಬಂದಿದೆ.

    ಉಷ್ಣವಲಯದ ಜಿರಳೆ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಚಲಿಸುವ ಜೀವಿಯೇ? ಫ್ಯಾಕ್ಟ್​ಚೆಕ್​ನಲ್ಲಿ ತಿಳಿದುಬಂದಿದ್ದೇನು?

    ಫ್ಯಾಕ್ಟ್​ಚೆಕ್​ ಪ್ರಕಾರ ಇದೊಂದು ತಪ್ಪು ಸಂದೇಶವಾಗಿದೆ. ವಿಶ್ವದ ಅತ್ಯಂತ ವೇಗದ ಪ್ರಾಣಿ ಯಾವುದು ಎಂಬುದರ ಕುರಿತು ಈಗಾಗಲೇ ಸಾಕಷ್ಟು ಸಂಶೋಧನೆಗಳು ನಡೆದಿವೆ ಮತ್ತು ನಡೆಯುತ್ತಿವೆ. ಕೀಟಗಳಲ್ಲಿಯೂ ಯಾವುದು ಅತ್ಯಂತ ವೇಗದ್ದು ಎಂಬುದರ ಸಂಶೋಧನೆಯು ನಡೆಯುತ್ತಿದೆ.

    1991ರಲ್ಲಿ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿ ವಿಜ್ಞಾನಿಗಳು ಪ್ರಕಾರ ಅತ್ಯಂತ ವೇಗದ ಕೀಟವೆಂದರೆ ಅದು ಅಮೆರಿಕನ್​ ಜಿರಳೆ ಎಂದಿದ್ದಾರೆ. ಈ ಜಿರಳೆ ಗಂಟೆಗೆ 5 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಆದರೆ, ಇದಕ್ಕಿಂತಲೂ ಹೆಚ್ಚಿನ ವೇಗ ಹೊಂದಿರುವ ಕೀಟವನ್ನು ನೆದರ್ಲೆಂಡ್​ ವಿಜ್ಞಾನಿಗಳು 1996ರಲ್ಲಿ ಪತ್ತೆ ಹಚ್ಚಿದ್ದಾರೆ. ಟೈಗರ್​ ಬೀಟಲ್​ (ದುಂಬಿ) ಗಂಟೆಗೆ 9 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಈ ಬಗ್ಗೆ 2014ರಲ್ಲಿ ಬಿಬಿಸಿ ವರದಿಯನ್ನು ಮಾಡಿದೆ.

    ಅತ್ಯಂತ ವೇಗದ ವಸ್ತು ಯಾವುದು ಎಂಬ ವಿಚಾರಕ್ಕೆ ಬರುವುದಾದರೆ, ನಾಸಾದ ಪಾರ್ಕರ್​ ಸೋಲಾರ್​ ಪ್ರೋಬ್​ ಕ್ಲಾಕಿಂಗ್​ ಆಗಿದೆ. ಇದು ಗಂಟೆಗೆ 531083.52 ವೇಗದಲ್ಲಿ ಚಲಿಸುತ್ತದೆ. ಮತ್ತೊಂದೆಡೆ ಜಾಗತಿಕ ಮಟ್ಟದಲ್ಲಿ ವೇಗವಾದ ವಿಷಯವೆಂದರೆ ಅದು ಬೆಳಕು. ಇದು 3×10⁸ M/S ವೇಗದಲ್ಲಿ ಚಲಿಸುತ್ತದೆ.

    ಹೀಗಾಗಿ ಫ್ಯಾಕ್ಟ್​ಚೆಕ್​ನಿಂದ ತಿಳಿಯುವುದೇನೆಂದರೆ ಉಷ್ಣವಲಯದ ಜಿರಳೆ ವಿಶ್ವದ ಅತ್ಯಂತ ವೇಗದ ವಸ್ತು ಅಲ್ಲವೇ ಅಲ್ಲ. ಹೀಗಾಗಿ ಜಾಲತಾಣದಲ್ಲಿ ಹರಿದಾಡುತ್ತಿರುವ ಸಂದೇಶ ತಪ್ಪು ಎಂಬುದು ಖಚಿತವಾಗುತ್ತದೆ. (ಏಜೆನ್ಸೀಸ್​)

    ಒಂದೇ ಮನೆಯಲ್ಲಿದ್ದರು ಪತ್ನಿ-ಪತಿ-ಸ್ನೇಹಿತ! ಪೊಲೀಸರ ಮುಂದೆ ಬಯಲಾಯ್ತು ಚೆಂದುಳ್ಳಿ ಚೆಲುವೆಯ ಅಸಲಿ ಮುಖ

    ರಶ್ಮಿಕಾ ಮಾಡಿದ ಈ ಕೆಲಸಕ್ಕೆ ಪೋಷಕರಿಗೆ ಬೇಜಾರು… ಕಾರಣ ಏನ್​ ಗೊತ್ತಾ?

    ಶುಭಾ, ಶಮಂತ್​ ಎಲಿಮಿನೇಶನ್​ನಿಂದ ಲ್ಯಾಗ್​ ಮಂಜುಗೆ ಬಂಪರ್​, ಅರವಿಂದ್​ ಕನಸಿಗೆ ತಣ್ಣೀರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts