ಬೆಂಗಳೂರು: ಚಿರಂಜೀವಿ ಸರ್ಜಾ ಇಲ್ಲವಾಗಿ ಇಂದಿಗೆ (ಜೂ. 7) ಎರಡು ವರ್ಷವಾಯಿತು. ಆ ಒಂದು ನೆನಪಲ್ಲಿಯೇ ಇಡೀ ಕುಟುಂಬ ಇಂದು ಚಿರು ಸಮಾಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದೆ.
ಕನಕಪುರ ರಸ್ತೆಯ ನೆಲಗುಳಿ ಬಳಿ ಇರುವ ಬೃಂದಾವನ ಫಾರ್ಮ್ಹೌಸ್ನಲ್ಲಿ ಚಿರು ಸರ್ಜಾ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ಅದೇ ಸ್ಥಳಕ್ಕೆ ಮೇಘನಾ ರಾಜ್, ಧ್ರುವ ಸರ್ಜಾ, ಪತ್ನಿ ಪ್ರೇರಣಾ, ಪ್ರಮೀಳಾ ಜೋಷಾಯ್, ಸುಂದರ್ ರಾಜ್ ಹಾಗೂ ಅರ್ಜುನ್ ಸರ್ಜಾ ಸೇರಿ ಹಲವರು ತೆರಳಿ ವಿಧಿವಿಧಾನ ನೆರವೇರಿಸಿದರು. ಜ್ಯೂನಿಯರ್ ಚಿರು ಸಹ ಈ ಕಾರ್ಯದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಚಿರು ನೆನಪಲ್ಲೇ ಇರುವ ಮೇಘನಾ ವಿಶೇಷ ಪೂಜೆಗೂ ಮುನ್ನ ಇನ್ಸ್ಟಾಗ್ರಾಂನಲ್ಲಿ ಭಾವುಕವಾಗಿ ಬರೆದುಕೊಂಡಿದ್ದಾರೆ. ನೀವು ಮತ್ತು ನಾನು … ಶಾಶ್ವತತೆಗಾಗಿ. ನಿನ್ನಂತೆ ಯಾರು ಇರಲಿಲ್ಲ ಮತ್ತು ನಿಮ್ಮಂತೆ ಯಾರೂ ಇರುವುದಿಲ್ಲ. ಚಿರು ನೀವು ಒಬ್ಬರೇ ಮತ್ತು ಏಕೈಕ. ನಿನ್ನನ್ನು ಸದಾ ಪ್ರೀತಿಸುತ್ತೇನೆ ಎಂದು ಮೇಘನಾ ಸ್ಮರಿಸಿದ್ದಾರೆ.
ಚಿರು ಮತ್ತು ಮೇಘನಾ ಇಬ್ಬರೂ 2018ರಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಎರಡೇ ವರ್ಷಕ್ಕೆ ಅಂದರೆ 2020ರ ಜೂನ್ 7ರಂದು ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾದರು. (ದಿಗ್ವಿಜಯ ನ್ಯೂಸ್)
ಸ್ಥಳೀಯ ರಾಜಕಾರಣಿಗಳಿಗೆ ನಾಚಿಕೆಯಾಗ್ಬೇಕು: ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ ಕಿರಣ್ ಮಜುಂದಾರ್ ಶಾ
ಪತ್ನಿಗೆ ಸರ್ಕಾರಿ ಕೆಲಸ ಸಿಕ್ಕಿದ್ದಕ್ಕೆ ಆಕೆಯ ಕೈ ಕತ್ತರಿಸಿದ ಗಂಡ: ಅಸೂಯೆ ಜತೆಗೆ ಇನ್ನೊಂದು ಕಾರಣವೂ ಇತ್ತು!