More

    ಬುಲ್ಸ್​ಗೆ ಹ್ಯಾಟ್ರಿಕ್ ಜಯ ತಪ್ಪಿಸಿದ ಬೆಂಗಾಲ್: ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯಲ್ಲಿ ಬೆಂಗಳೂರಿಗೆ ಮೊದಲ ಸೋಲು

    | ಗುರುರಾಜ್ ಶಿವಶಂಕರ್

    ಬೆಂಗಳೂರು: ನಾಯಕ ಮಣಿಂದರ್ ಸಿಂಗ್ (11 ಅಂಕ) ಮತ್ತು ಡಿಫೆಂಡರ್ ಗಿರೀಶ್ (5) ತೋರಿದ ಸಂಘಟಿತ ಪ್ರದರ್ಶನದ ಎದುರು ಆರಂಭಿಕ ಮುನ್ನಡೆ ಕಾಯ್ದುಕೊಳ್ಳುವಲ್ಲಿ ವಿಫಲವಾದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯಲ್ಲಿ ಹ್ಯಾಟ್ರಿಕ್ ಗೆಲುವಿನಿಂದ ವಂಚಿತವಾಗಿದೆ.

    ರೈಡರ್​ಗಳಾದ ವಿಕಾಸ್ ಖಂಡೋಲ (7) ಮತ್ತು ಭರತ್ (8) ದಿಟ್ಟ ನಿರ್ವಹಣೆಯ ನಡುವೆಯೂ ಬೆಂಗಳೂರು ಬುಲ್ಸ್ ತಂಡ ಟೂರ್ನಿಯ ತನ್ನ 3ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡದ ಎದುರು 33-42 ಅಂತರದಿಂದ ಸೋಲು ಅನುಭವಿಸಿತು.

    ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಎದುರಾದ ಬೆಂಗಳೂರು ಬುಲ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳು ಆರಂಭದಿಂದಲೂ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದವು. ಮೊದಲ 10 ನಿಮಿಷದವರೆಗೂ ಉತ್ತಮ ಆಟ ಪ್ರದರ್ಶಿಸಿದ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದವು. ಮೊದಲಾರ್ಧದಲ್ಲಿ ಬೆಂಗಳೂರು ಬುಲ್ಸ್ ತಂಡದ ಡಿಫೆಂಡರ್ ಅಮಾನ್ ಬಲೆಗೆ ಸಿಲುಕಿದ ಬೆಂಗಾಲ್ ತಂಡ 16ನೇ ನಿಮಿಷದಲ್ಲಿ ಆಲೌಟಾಯಿತು. ನಂತರ ಮಿಂಚಿನ ದಾಳಿ ನಡೆಸಿದ ಬೆಂಗಾಲ್​ನ ಮಣಿಂದರ್ 18ನೇ ನಿಮಿಷದಲ್ಲಿ ಎದುರಾಳಿ ತಂಡದ ನಾಯಕ ಮಹೇಂದರ್ ಅವರನ್ನು ಔಟ್ ಮಾಡುವ ಮೂಲಕ ಬೆಂಗಳೂರಿಗೆ ಮೊದಲ ಶಾಕ್ ನೀಡಿದರು.

    ಬೆಂಗಾಲ್ ಮೊದಲಾರ್ಧ ಮುಕ್ತಾಯಕ್ಕೆ 15-14 ರಿಂದ ಅಲ್ಪ ಮುನ್ನಡೆ ಕಂಡಿತು. ನಂತರ ದ್ವಿತೀಯಾರ್ಧದ ಆರಂಭದ 3 ನಿಮಿಷಗಳಲಿ ಬುಲ್ಸ್ ತಂಡವನ್ನು ಮೊದಲ ಬಾರಿಗೆ ಆಲೌಟ್ ಮಾಡಿತು. 26ನೇ ನಿಮಿಷದಲ್ಲಿ ಸೂಪರ್ ರೈಡ್ ಮಾಡುವ ಮೂಲಕ 3 ಅಂಕ ಕಲೆ ಹಾಕಿದ ಮಣಿಂದರ್, ಬುಲ್ಸ್​ಗೆ ಆಘಾತ ನೀಡಿದರು. 28ನೇ ನಿಮಿಷದಲ್ಲಿ ಎರಡನೇ ಬಾರಿಗೆ ಆಲೌಟ್ ಮಾಡಿ 11 ಅಂಕಗಳ ಮೇಲುಗೈ ಸಾಧಿಸಿತು. ಇದರಿಂದ ಬುಲ್ಸ್​ಗೆ ಗೆಲುವಿನ ಸನಿಹ ತಲುಪುವ ಅವಕಾಶ ಕೈತಪ್ಪಿತು.

    ಪಂದ್ಯ ವೀಕ್ಷಿಸಿದ ಸುದೀಪ್
    ಬೆಂಗಳೂರು ಬುಲ್ಸ್ ತಂಡದ ರಾಯಭಾರಿ ಹಾಗೂ ನಟ ಸುದೀಪ್ ಪಂದ್ಯವನ್ನು ವೀಕ್ಷಿಸಿ ಆತೀಥೇಯ ತಂಡಕ್ಕೆ ಬೆಂಬಲ ಸೂಚಿಸಿದರು. ಕಬಡ್ಡಿ ಬಗ್ಗೆ ಮಾತನಾಡಿದ ಸುದೀಪ್, ನಾವೆಲ್ಲರೂ ಬಾಲ್ಯದಲ್ಲಿ ಕಬಡ್ಡಿ ಆಡಿದವರೆ ಎಂದರು.

    ಮಾಲ್ಡೀವ್ಸ್​ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ರಶ್ಮಿಕಾ: ನಿರೀಕ್ಷೆ ಇಟ್ಟುಕೊಂಡಿದ್ದವರಿಗೆ ಭಾರಿ ನಿರಾಸೆ!

    ಬಡವರ ಅನ್ನಕ್ಕೆ ಕಳ್ಳರ ಕನ್ನ: ನೆರೆರಾಜ್ಯಗಳಿಗೆ ಪಡಿತರ ಅಕ್ರಮ ಸಾಗಾಟ; ಪಾಲಿಷ್ ಮಾಡಿ ಮಾರಾಟ

    ಕೇರಳ ನರಬಲಿ ಪ್ರಕರಣ: ವಯಸ್ಕರ ಸಿನಿಮಾದಲ್ಲಿ ನಟಿಸುವ ಆಸೆ, ತನಿಖೆಯಲ್ಲಿ ಬಯಲಾಯ್ತು ಭಯಾನಕ ಸಂಗತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts