ಚುನಾವಣಾ ಪ್ರಚಾರಕ್ಕೆ ಮಾಜಿ ಸಿಎಂ ಎಸ್​.ಎಂ. ಕೃಷ್ಣರನ್ನು ಆಹ್ವಾನಿಸಿದ ಆರ್​. ಅಶೋಕ್​

ಬೆಂಗಳೂರು: ಲೋಕಸಭೆ ಚುನಾವಣೆ ಉಸ್ತುವಾರಿ ಹೊತ್ತಿರುವ ಮಾಜಿ ಡಿಸಿಎಂ ಆರ್​. ಅಶೋಕ್​ ಮಾಜಿ ಸಿಎಂ ಎಸ್​.ಎಂ. ಕೃಷ್ಣ ಅವರನ್ನು ಸೋಮವಾರ ಭೇಟಿ ಮಾಡಿದ್ದರು. ಬಿಜೆಪಿ ಪರ ಲೋಕಸಭೆ ಚುನಾವಣೆಯ ಪ್ರಚಾರಕ್ಕೆ ಬರುವಂತೆ ಎಸ್​ಎಂಕೆಗೆ ಅಶೋಕ್​ ಮನವಿ ಮಾಡಿಕೊಂಡರು ಎನ್ನಲಾಗಿದೆ.

ಕಟ್ಟಾ ಜತೆ ಮನಸ್ತಾಪ ಇಲ್ಲ

ತಮಗೂ ಹಾಗೂ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಡುವೆ ಮನಸ್ತಾಪ ಉಂಟಾಗಿದ್ದು, ಭಾರಿ ಜಗಳವಾಗಿದೆ ಎಂಬ ಸಂಗತಿಯನ್ನು ಆರ್​. ಅಶೋಕ್​ ತಳ್ಳಿಹಾಕಿದ್ದಾರೆ. ತಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪ ಇಲ್ಲ. ಇಬ್ಬರ ನಡುವೆ ಸೌಹಾರ್ದ ಸಂಬಂಧ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ.