ಮಂಡ್ಯ: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ (Micro Finance) ಹಾವಳಿಗೆ ತಾಯಿ, ಮಗ ಆತ್ಮಹತ್ಯೆಗೆ ಶರಣಾದ ವಿಚಾರ ಕೇಳಿ ಬೇಸರ ವ್ಯಕ್ತಪಡಿಸಿದ ವಿಪಕ್ಷ ನಾಯಕ ಆರ್. ಅಶೋಕ, ಜಿಲ್ಲೆಯ ಕೊನ್ನಾಪುರ ಗ್ರಾಮಕ್ಕೆ ಆಗಮಿಸಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಇದನ್ನೂ ಓದಿ: Kumar Bangarappa | ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಕುಮಾರ್ ಬಂಗಾರಪ್ಪ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೊನ್ನಾಪುರ ಗ್ರಾಮದ ಪ್ರೇಮಾ, 2018ರಲ್ಲಿ ಉಜ್ಜೀವನ್ ಬ್ಯಾಂಕ್ನಲ್ಲಿ 6 ಲಕ್ಷ ರೂ. ಸಾಲ ಪಡೆದಿದ್ದರು. ಮೂರು ತಿಂಗಳಿನಿಂದ ಕಂತು ಕಟ್ಟದ ಹಿನ್ನಲೆ ಬ್ಯಾಂಕ್ ಸಿಬ್ಬಂದಿಗಳು ಮನೆಯನ್ನು ಸೀಜ್ ಮಾಡಿದ್ದರು. ಇದರಿಂದ ಮನನೊಂದು ಜನವರಿ 28ರಂದು ಆತ್ಮಹತ್ಯೆಗೆ ಪ್ರೇಮಾ ಸಾವಿಗೆ ಶರಣಾದರು. ತಾಯಿ ಸಾವಿನಿಂದ ಮನನೊಂದ ಮಗ ರಂಜಿತ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು.
ಇನ್ನು ತಾಯಿ ಮತ್ತು ಸಹೋದರನನ್ನು ಕಳೆದುಕೊಂಡ ಪ್ರೇಮಾ ಪುತ್ರಿಯರು, “ಇದುವರೆಗೂ ನಮ್ಮ ಮನೆಗೆ ಯಾರು ಬಂದಿಲ್ಲ. ಯಾವ ಮಂತ್ರಿ, ಶಾಸಕರೂ ಭೇಟಿ ನೀಡಿಲ್ಲ. ನಮಗೆ ಸರ್ಕಾರದಿಂದ ನ್ಯಾಯ ಕೊಡಿಸಿ” ಎಂದು ಆರ್. ಅಶೋಕ್ಗೆ ಒತ್ತಾಯಿಸಿದ್ದಾರೆ. “ಈಗ ನಾವು ಸಂಬಂಧಿಕರಿಂದ ಬದುಕುತ್ತಿದ್ದೇವೆ. ಮುಂದೆ ನಮ್ಮ ಜೀವನ ಹೇಗೆ ಎಂಬ ಕಲ್ಪನೆಯೂ ಇಲ್ಲ” ಎಂದು ಪ್ರೇಮಾ ಪುತ್ರಿಯವರಾದ ಮಾಣಿಕ್ಯ ಮತ್ತು ಸುಷ್ಮಾ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: ಬ್ರೇಕ್ ಇಲ್ಲದೆ ನೀರಿನಲ್ಲಿ ಚಲಿಸುವ ಬೃಹತ್ ಹಡಗುಗಳನ್ನು ಯಾವ ತಂತ್ರಜ್ಞಾನ ಬಳಸಿ ನಿಲ್ಲಿಸುತ್ತಾರೆ ಗೊತ್ತೇ? | Technology
ಕುಟುಂಬಸ್ಥರ ಬಳಿ ಮೈಕ್ರೋ ಫೈನಾನ್ಸ್ ಹಾವಳಿ ಬಗ್ಗೆ ಮಾಹಿತಿ ಪಡೆದ ಆರ್. ಅಶೋಕ, “ಇಂತಹ ಪರಿಸ್ಥಿತಿ ಯಾರೊಬ್ಬರಿಗೂ ಆಗಬಾರದು. ನಿಮ್ಮೊಂದಿಗೆ ನಾವಿದ್ದೇವೆ. ಹೋರಾಟ ಮಾಡಿ, ನಿಮಗೆ ಸರ್ಕಾರದಿಂದ ಸಹಾಯ ಮಾಡಿಕೊಡಿಸುತ್ತೇವೆ. ಈ ಬಗ್ಗೆ ಸರ್ಕಾರದ ಜತೆ ಮಾತನಾಡುತ್ತೇನೆ” ಎಂದು ಮೃತ ಪ್ರೇಮಾ ಪುತ್ರಿಯರಿಗೆ ಆರ್. ಅಶೋಕ ಭರವಸೆ ನೀಡಿದ್ದಾರೆ.
ಈ ವೇಳೆ ಜಿಲ್ಲಾಧಿಕಾರಿ ಕುಮಾರ್ಗೆ ಕರೆ ಮಾಡಿದ ಆರ್ ಅಶೋಕ, ಮನೆ ಸೀಜ್ ವೇಳೆ ಪೊಲೀಸರು ದರ್ಪದಿಂದ ನಡೆದುಕೊಂಡಿದ್ದಾರೆ. ಫೈನಾನ್ಸ್ ಸಿಬ್ಬಂದಿಗಳಿಗಿಂತ ಪೊಲೀಸರೇ ದೌರ್ಜನ್ಯ ಮಾಡಿದ್ದಾರೆ. ಅವರನ್ನು ತಕ್ಷಣವೇ ಸಸ್ಪೆಂಡ್ ಮಾಡುವಂತೆ ಸೂಚನೆ ನೀಡಿದರು. ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ ಪರಿಹಾರ ನೀಡಿದ ವಿಪಕ್ಷ ನಾಯಕರು, ಪ್ರೇಮಾ ಪುತ್ರಿಯರಿಗೆ ಸಾಂತ್ವನ ಹೇಳಿದ್ದಾರೆ.