38 ಸ್ಥಾನ ಪಡೆದ ಜೆಡಿಎಸ್​ನವ್ರೆ ಸಿಎಂ ಆಗ್ತಾರೆ ಅಂದ್ರೆ ನಾವೇನು ಕಡ್ಲೆಕಾಯಿ ತಿನ್ನೋಕೆ ಬಂದಿದೀವಾ: ಆರ್​. ಅಶೋಕ್​

ಮಂಡ್ಯ: ಚುನಾವಣೆಯಲ್ಲಿ ನಾವು 104 ಸ್ಥಾನ ಗೆದ್ದಿದ್ದೇವೆ. ಸುಮ್ಮನೆ ಕೂರಲು ನಾವೇನು ರಾಜಕೀಯ ಸನ್ಯಾಸಿಗಳಲ್ಲ ಎಂದು ಮಾಜಿ ಡಿಸಿಎಂ ಆರ್​.ಅಶೋಕ್​ ತಿಳಿಸಿದ್ದಾರೆ.

ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿ, 38 ಸ್ಥಾನ ಪಡೆದ ಜೆಡಿಎಸ್​ನವರು ಸಿಎಂ ಆಗುತ್ತಾರೆ. ನಾವೇನು ಕಡಲೆಕಾಯಿ ತಿನ್ನೋಕೆ ಬಂದಿದೀವಾ? ನಾವೂ ರಾಜಕಾರಣ ಮಾಡುವುದಕ್ಕೆ ಬಂದಿರೋದು ಎಂದು ಕಿಡಿಕಾರಿದರು.

ಮೈತ್ರಿ ಸರ್ಕಾರದ ಬಗ್ಗೆ ಜನರಲ್ಲಿ ಬೇಸರವಿದೆ. ಈ ಸರ್ಕಾರ ಹೋದರೆ ಸಾಕು ಅನ್ನೋ ಭಾವನೆ ಇದೆ. ನಾವೂ ನಮ್ಮ ಕರ್ತವ್ಯ ಮಾಡಬೇಕಿದೆ, ನಾವು ರಾಜಕೀಯ ಸನ್ಯಾಸಿಗಳಲ್ಲ. ಇವತ್ತಲ್ಲ ನಾಳೆ ಸರ್ಕಾರ ರಚನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಆ ತಂತ್ರಗಾರಿಕೆಯಿಂದಲೇ ಯಡಿಯೂರಪ್ಪ ಅವರು ಯಾವ ಶಾಸಕರೂ ಎಂಪಿ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿರುವ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು. (ದಿಗ್ವಿಜಯ ನ್ಯೂಸ್)