ಸಿದ್ದರಾಮಯ್ಯ ಒಂಥರಾ ಭಸ್ಮಾಸುರ: ಆರ್. ಅಶೋಕ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಒಂಥರಾ ಡೂಪ್ಲಿಕೇಟ್. ಈಗಾಗಲೇ ರಾಜ್ಯದಲ್ಲಿನ ಜನತಾ ದಳ ಮುಳುಗಿಸಿ ಕಾಂಗ್ರೆಸ್​ಗೆ ಸೇರಿದ್ದಾರೆ. ಅದರಂತೆ ಕಾಂಗ್ರೆಸ್ ಅ​ನ್ನು ಕೂಡ ನಾಶ ಮಾಡಲಿದ್ದಾರೆ. ಈಗಾಗಲೇ ಜಾತಿ ಜಾತಿ ನಡುವೆ ವಿಷ ಬೀಜ ಬಿತ್ತಿರುವ ಅವರು ಒಂಥರಾ ಭಸ್ಮಾಸುರ ಇದ್ಹಂಗೆ ಎಂದು ಮಾಜಿ ಡಿಸಿಎಂ ಆರ್​.ಅಶೋಕ್​ ತಿಳಿಸಿದ್ದಾರೆ.

ಪ್ರೆಸ್​ಕ್ಲಬ್​ನಲ್ಲಿ ಆಯೋಜಿಸಿದ್ದ ಮಾತು ಮಂಥನ ಸಂವಾದ ಮಾತನಾಡಿ, ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಇಟ್ಟುಕೊಂಡು ಚುನಾವಣಾ ಯುದ್ಧ ಭೂಮಿಯಲ್ಲಿ ‌ನಿಂತಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬರುವ ವಾತಾವರಣ ರಾಜ್ಯದಲ್ಲಿ ಮೂಡಿದೆ. ಕಳೆದ‌ ಐದು ವರ್ಷದಿಂದ ಕಾಂಗ್ರೆಸ್ ಸರ್ಕಾರ ನಿದ್ದೆ ಮಾಡ್ತಿದೆ. ರಾಜಕೀಯ ಕೊಲೆಗಳು, ರೈತರ ಅತ್ಮಹತ್ಯೆಗಳು ಹೆಚ್ಚಾಗಿವೆ. ಯಡಿಯೂರಪ್ಪ ಸರ್ಕಾರ ಬಂದರೆ ರಾಜ್ಯದ ಅಭಿವೃದ್ಧಿಯಾಗುತ್ತದೆ ಎಂದರು.

ಅಧಿಕಾರಕ್ಕೆ ಬಂದ್ರೆ ಸಾಲ ಮನ್ನಾ
ಬಿಜೆಪಿ ಅಧಿಕಾರಕ್ಕೆ ಬಂದರೆ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿನ ಸಾಲ ಮನ್ನಾ ವಿಚಾರವಾಗಿ ಮಾತನಾಡಿ, ನಾವು ಅಧಿಕಾರಕ್ಕೆ ಬಂದ ಕೂಡಲೇ ಸಾಲ‌ ಮನ್ನಾ ಮಾಡುತ್ತೇವೆ. ಕೇಂದ್ರ ಸರ್ಕಾರ ಕೇವಲ ಒಂದೇ ರಾಜ್ಯಕ್ಕೆ ಸಾಲ‌ ಮನ್ನಾ ಮಾಡುವುದಕ್ಕೆ ಆಗುವುದಿಲ್ಲ. ಈಗಾಗಲೇ ಬೇರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವ ರಾಜ್ಯದಲ್ಲಿ ಸಾಲ ಮನ್ನಾ ಮಾಡಲಾಗಿದೆ. ಅದರಂತೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ್ರೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದರು.

ಮಹದಾಯಿ ಸಮಸ್ಯೆ
ಮಹದಾಯಿ ಸಮಸ್ಯೆ ಕುರಿತು ಪ್ರತಿಕ್ರಿಯಿಸಿ, ಇಲ್ಲಿರುವುದು ಕಾಂಗ್ರೆಸ್ ಸರ್ಕಾರ. ಈ ಸಮಸ್ಯೆಯನ್ನು ‌ಈ ಸರ್ಕಾರವೇ ಬಗೆ ಹರಿಸಬೇಕು. ಅವರು ಸಮಸ್ಯೆ ಬಗ್ಗೆ ಗಮನ ಹರಿಸಿಲ್ಲ. ಈಗಾಗಲೇ ‌ನಮ್ಮ ರಾಷ್ಟ್ರೀಯ ಅಧ್ಯಕ್ಷರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಅದರಂತೆ ನಮ್ಮ ಸರ್ಕಾರ ಬಂದ ಮೇಲೆ ಈ ಸಮಸ್ಯೆ ಬಗ್ಗೆ ಖಂಡಿತವಾಗಿಯೂ ಬಗೆ ಹರಿಸುತ್ತೇವೆ ಎಂದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *