
ಬೆಂಗಳೂರು: ನಟ ಆಶಿಶ್ ವಿದ್ಯಾರ್ಥಿ ಆಹಾರ ಪ್ರಿಯರು. ಅವರು ಇದಕ್ಕಾಗಿ ವಿಲಾಗ್ ಅನ್ನೇ ಆರಂಭಿಸಿಬಿಟ್ಟಿದ್ದಾರೆ. ಬೆಂಗಳೂರು ಸೇರಿದಂತೆ ಬೇರೆ ಎಲ್ಲೆಡೆ ಹೋದರೂ ಅಲ್ಲಿನ ಪ್ರಸಿದ್ಧ ಸ್ವಾದಿಷ್ಟಕರ ಊಟ ಸವಿದು ಅದರ ವಿಡಿಯೋ ಮಾಡಿ ಸಾಮಾಜಿಕ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಕಳೆದ ಬಾರಿ ಮುದ್ದೆ ಊಟ ಮಾಡಿ ಸೂಪರ್ ಎಂದಿದ್ದ ಆಶಿಶ್ ಅವರು ಇದೀಗ ಮಾಂಸಾಹಾರ ಊಟದ ರುಚಿಯನ್ನು ಸವಿದು ತೃಪ್ತಿಪಟ್ಟಿದ್ದಾರೆ. ಈ ಬಾರಿ ಅವರ ವಿ ಲಾಗ್ನಲ್ಲಿ ಬೆಂಗಳೂರಿನ ಶಿವಾಜಿ ನಗರದಲ್ಲಿನ ಒಂದು ಹೋಟೆಲ್ ಮತ್ತು ಅಲ್ಲಿನ ಆಹಾರದ ರುಚಿ, ವಿಶೇಷತೆಯನ್ನು ವಿವರಿಸಿದ್ದಾರೆ.
ಹೌದು ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಮಿಲಿಟರಿ ಹೋಟೆಲ್ ನಲ್ಲಿ ಆಹಾರದ ರುಚಿ ಇದೆ ಎಂದು ಊಟ ಮಾಡುತ್ತಲೇ ವಿವರಿಸಿದ್ದಾರೆ. ಶಿವಾಜಿ ನಗರದಲ್ಲಿರುವ ಮಿಲಿಟರಿ ಹೋಟೆಲ್ ನಲ್ಲಿ ದೊನ್ನೆ ಬಿರಿಯಾನಿ, ಚಿಕನ್ ಕರಿ, ಮಟನ್ ಸುಕ್ಕಾ, ಪಾಯಾ ಸೂಪ್ ಹಲವು ಫುಡ್ ಸವಿದು ವಾವ್ ಎಂದಿದ್ದಾರೆ.
Koo AppBengaluru’s most popular Shivaji Military Hotel 😍🤤 Donne Biryani, Chicken Curry, Mutton Sukkha, Paya Soup and much more Beware you’ll get hungry 😋 The Vlog is live now…🤩 #reels #reelitfeelit #reelinstagram #reelkarofeelkaro #foodreels #food #bengaluru #shivajimilitaryhotel #foodie #bengalurufoodie #ashishvidyarthi #ashishvidyarthiactorvlogs #fun #friends– Ashish Vidyarthi (@ashishvidyarthi) 20 Sep 2022
VIDEO| ಮಾರ್ಗ ಮಧ್ಯೆ ವಿಮಾನದಲ್ಲಿ ಪಾಕ್ ಪ್ರಯಾಣಿಕನಿಂದ ಹೈಡ್ರಾಮ: ಕಿಟಕಿ ಗಾಜು ಒಡೆಯಲು ಯತ್ನ
ರಸ್ತೆಗುಂಡಿಗಳ ನಡುವೆ ವೆಡ್ಡಿಂಗ್ ಫೋಟೋಶೂಟ್! ವಧುವಿನ ನಡೆಗೆ ನೆಟ್ಟಿಗರಿಂದ ಬಹುಪರಾಕ್
ಕೇಂದ್ರ ಸಚಿವ ರಾಣೆಗೆ ಬಿಗ್ ಶಾಕ್! ಬಂಗಲೆ ಕೆಡವಲು ಹೈಕೋರ್ಟ್ ಆದೇಶ, 10 ಲಕ್ಷ ರೂ. ದಂಡ