More

  ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಗುಂಡಿನ ದಾಳಿಗೆ ಇಬ್ಬರು ಪಾಕ್​ ಪ್ರಜೆ ಸೇರಿದಂತೆ 6 ಉಗ್ರರು ಉಡೀಸ್​

  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್​ ಮತ್ತು ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎರಡು ಪ್ರತ್ಯೇಕ ಎನ್​ಕೌಂಟರ್​ನಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆ ಸೇರಿದಂತೆ 6 ಉಗ್ರರು ಹತರಾಗಿದ್ದಾರೆ. ​

  ನಿನ್ನೆ (ಡಿ.29) ಸಂಜೆ ಭದ್ರತಾ ಪಡೆಗಳು ಕುಲ್ಗಾಮ್ ಜಿಲ್ಲೆಯ ಮಿರ್ಹಾಮ ಮತ್ತು ಅನಂತ್‌ನಾಗ್ ಜಿಲ್ಲೆ ನೌಗಾಮ್ ಗ್ರಾಮದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಒಂದರ ಹಿಂದೆ ಒಂದರಂತೆ ನಡೆದ ಎನ್‌ಕೌಂಟರ್‌ನಲ್ಲಿ ಉಗ್ರರು ಉಡೀಸ್​ ಆಗಿದ್ದಾರೆ.

  ಎರಡು ಪ್ರತ್ಯೇಕ ಎನ್​ಕೌಂಟರ್​ನಲ್ಲಿ ಜೆಇಎಂ ಉಗ್ರ ಸಂಘಟನೆಗೆ ಸೇರಿದ ಆರು ಉಗ್ರರು ಹತರಾಗಿದ್ದಾರೆ. ಅದರಲ್ಲಿ ನಾಲ್ವರಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಹಾಗೂ ಇನ್ನಿಬ್ಬರು ಸ್ಥಳೀಯ ಉಗ್ರರು ಎಂದು ಗುರುತಿಸಲಾಗಿದೆ. ಇನ್ನಿಬ್ಬರ ಗುರುತು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ. ಇದೊಂದು ನಮಗೆ ಸಿಕ್ಕಿರುವ ದೊಡ್ಡ ಯಶಸ್ಸು ಎಂದು ಕಾಶ್ಮೀರದ ಐಜಿಪಿ ವಿಜಯ್​ ಕುಮಾರ್​ ಹೇಳಿಕೆಯನ್ನು ಕಾಶ್ಮೀರ ವಲಯ ಪೊಲೀಸ್​ ಟ್ವೀಟ್​ ಮಾಡಿದೆ.

  ಮೊದಲ ಎನ್​ಕೌಂಟರ್​ ಅನಂತನಾಗ್​ ಜಿಲ್ಲೆಯ ನೌಗಾಮ್​ ಗ್ರಾಮದಲ್ಲಿ ಆರಂಭವಾಯಿತು. ಕಾರ್ಯಾಚರಣೆಯ ವೇಳೆ ಓರ್ವ ಪೊಲೀಸ್​ ಸಿಬ್ಬಂದಿಗೆ ಗಾಯವಾಗಿದೆ. ಇಲ್ಲಿನ ಗುಂಡಿನ ಚಕಮಕಿಯಲ್ಲಿ ಓರ್ವ ಪಾಕಿಸ್ತಾನಿ ಉಗ್ರ ಸೇರಿದಂತೆ ಮೂವರು ಉಗ್ರರು ಹತರಾಗಿದ್ದಾರೆ. ಇದಾದ ಕೆಲವೇ ಕ್ಷಣದಲ್ಲಿ ಭದ್ರತಾ ಪಡೆಗಳು ಕುಲ್ಗಾಮ್​ನ ಮಿರ್ಹಾಮದಲ್ಲಿ ಮತ್ತೊಂದು ಎನ್​ಕೌಂಟರ್​ ನಡೆಸಿದರು. ಇಲ್ಲಿ ಮೂವರು ಉಗ್ರರು ಮೃತಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಮತ್ತೊಬ್ಬ ಭಯೋತ್ಪಾದಕನ ಉಪಸ್ಥಿತಿಯ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

  ವಯಾಗ್ರ ತಂದ ಆಪತ್ತು! ಲೈಂಗಿಕ ಕ್ರಿಯೆಗೆ ಒಪ್ಪದ 61ರ ಪತ್ನಿಯನ್ನೇ ಬರ್ಬರ ಹತ್ಯೆಗೈದ 80ರ ವೃದ್ಧ

  ಸ್ಟಾರ್​ ನಟ-ನಟಿಯರನ್ನೇ ಹಿಂದಿಕ್ಕಿದ ರಾಮ್​ಚರಣ್​ ಪತ್ನಿ ಉಪಾಸನ: ಟಾಲಿವುಡ್​ನಲ್ಲೇ ಇದು ಮೊದಲು!

  VIDEO| ಹೆಬ್ಬೆರಳಿನ ಗುರುತಿನಂತಿರುವ ದ್ವೀಪ: ಈ ಸುಂದರ ತಾಣದ ಬಗ್ಗೆ ತಿಳಿದರೆ ಅಚ್ಚರಿ ಖಂಡಿತ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts