More

  ಸರ್ಕಾರ ಭತ್ತ ಬೆಳೆಯುವ ರೈತರ ಬೆಂಬಲಕ್ಕೆ ಬರಲಿ

  ಕ್ವಿಂಟಾಲ್, ಕನಿಷ್ಠ, ಬೆಂಬಲ ಬೆಲೆ, ಸಾಮಾಜಿಕ ಕಾರ್ಯಕರ್ತ, ಕೇಂದ್ರ ಸರ್ಕಾರ, Quintal, minimum, support price, social worker, central government

  ಸಾಗರ: ಭತ್ತ ಬೆಳೆಯುವ ರೈತರ ಸಹಾಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಕ್ಷಣ ಬರಬೇಕು. ಕೃಷಿಯಿಂದ ವಿಮುಖರಾಗುತ್ತಿರುವುದರ ಹಿಂದೆ ಸರ್ಕಾರದ ನಿರ್ಲಕ್ಷ್ಯ ಧೋರಣೆ ಅಡಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಶಿವಾನಂದ ಕುಗ್ವೆ ದೂರಿದರು.

  ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಎಸಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರು ಹ್ಮಮಿೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಒಂದು ಕ್ವಿಂಟಾಲ್ ಭತ್ತ ಬೆಳೆಯಲು ರೈತನಿಗೆ 6 ಸಾವಿರ ರೂ. ಖರ್ಚು ಬರುತ್ತಿದೆ. ಆದರೆ ಸರ್ಕಾರ 1,888 ರೂ. ಬೆಂಬಲ ಬೆಲೆ ಘೊಷಿಸಿದೆ. ಇದರಿಂದಾಗಿ ರೈತ ತೀವ್ರ ನಷ್ಟಕ್ಕೆ ಒಳಗಾಗುವಂತಾಗಿದೆ. ಒಂದೊಂದು ಹೋಬಳಿಯಲ್ಲಿ ಒಂದೊಂದು ರೀತಿಯ ಬೆಳೆ ಇಳುವರಿ ಬರುತ್ತದೆ. ರೈತರು ಉತ್ಪತ್ತಿ ಲಾಭಕ್ಕಿಂತ ಹೆಚ್ಚಿನ ನಷ್ಟಕ್ಕೆ ಒಳಗಾಗುವಂತಾಗಿದೆ ಎಂದು ತಿಳಿಸಿದರು.

  ಸರ್ಕಾರ ರೈತರಿಗೆ ಕ್ವಿಂಟಾಲ್​ಗೆ ಕನಿಷ್ಠ 5 ಸಾವಿರ ರೂ.ಬೆಂಬಲ ಬೆಲೆ ಘೊಷಿಸಬೇಕು. ನರೇಗಾದಡಿ ರೈತರ ಭತ್ತದ ಬೆಳೆಯ ಕೆಲಸ ಸಹ ಸೇರಿಸಬೇಕು. ಈಗಾಗಲೇ ತೋಟಗಾರಿಕಾ ಬೆಳೆ ತೆಗೆಯುವವರನ್ನು ನರೇಗಾ ವ್ಯಾಪ್ತಿಗೆ ತರಲಾಗಿದೆ. ಭತ್ತ ಬೆಳೆಯುವ ರೈತರು ಏನು ತಪ್ಪು ಮಾಡಿದ್ದಾರೆ? ಸರ್ಕಾರ ಭತ್ತಕ್ಕೆ ಬೆಂಬಲ ಬೆಲೆ ಕನಿಷ್ಠ 5 ಸಾವಿರ ರೂ. ನೀಡಬೇಕು. ಭತ್ತದ ಬೆಳೆ ಕುರಿತು ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

  ರೈತ ಸಂಘದ ಅಧ್ಯಕ್ಷ ಮಂಜಪ್ಪ ಹಿರೇನೆಲ್ಲೂರು, ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್, ಹೊಯ್ಸಳ ಗಣಪತಿ, ಪ್ರಮುಖರಾದ ರವಿಕುಗ್ವೆ, ಎನ್.ಡಿ.ವಸಂತಕುಮಾರ್, ದೂಗೂರು ಪರಮೇಶ್ವರ್, ರಾಮಣ್ಣ ಹಸಲರು, ಅಮೃತ್​ರಾಸ್, ದುರ್ಗಪ್ಪ, ರಾಘು ಶಿರವಾಳ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts