20.4 C
Bengaluru
Monday, January 20, 2020

ಜಲಾಗಾರಗಳಿಗೆ ಕ್ವಾರಿ ಕುತ್ತು

Latest News

ಸಿಎಎ ಬೆಂಬಲಿಸಿ ರ‌್ಯಾಲಿ

ಬಾದಾಮಿ: ವಿಶ್ವದ ದೊಡ್ಡ ಹಿಂದು ರಾಷ್ಟ್ರವಾದ ಭಾರತದ ಸಂಸ್ಕೃತಿ ಉಳಿಸಿ ಬೆಳೆಸಲು ಕೇಂದ್ರ ಸರ್ಕಾರ ಪೌರತ್ವ ತಿದ್ದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಇದರಿಂದ...

ಕೋಟೆನಗರಿಯಲ್ಲಿ ಆಕರ್ಷಕ ಪಥ ಸಂಚಲನ

ಬಾಗಲಕೋಟೆ: ಸಂಕ್ರಾಂತಿ ಹಬ್ಬದ ಅಂಗವಾಗಿ ಆರ್‌ಎಸ್‌ಎಸ್ ಅಂಗ ಸಂಸ್ಥೆ ರಾಷ್ಟ್ರ ಸೇವಿಕಾ ಸಮಿತಿ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಸೇವಕಿಯರ ಘೋಷ ಸಹಿತ...

ಧರ್ಮದಲ್ಲಿ ರಾಜಕೀಯ ಸಲ್ಲ

ತೇರದಾಳ: ಧರ್ಮ ಶ್ರೇಷ್ಠವಾಗಿದ್ದು, ಧರ್ಮದಲ್ಲಿ ರಾಜಕೀಯ ಬೆರೆಸಬೇಡಿ. ವೀರಶೈವರು ಲಿಂಗವನ್ನು ತ್ರಿಕಾಲಗಳಲ್ಲಿ ಪೂಜೆಗೈಯುತ್ತ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಧರ್ಮ ಮತ್ತು ಗುರು ಜೀವನ...

ಕಲಾದಗಿಯಲ್ಲಿ ಆರ್ಥಿಕ ಗಣತಿಗೆ ಅಸಹಕಾರ

ಕಲಾದಗಿ: ಗ್ರಾಮದಲ್ಲಿ ರಾಷ್ಟ್ರೀಯ 7ನೇ ಆರ್ಥಿಕ ಗಣತಿ ಕಾರ್ಯ ಒಂದು ವಾರದಿಂದ ಸ್ಥಗಿತಗೊಂಡಿದ್ದು, ಪ್ರಬಲ ಕೋಮಿನ ನೂರಾರು ಮನೆಯವರು ಆರ್ಥಿಕ ಗಣತಿದಾರರಿಗೆ ಮಾಹಿತಿ...

ವೇಗ ಕಾಣದ ಫಾಸ್ಟ್ಯಾಗ್​ !

ಹೀರಾನಾಯ್ಕ ಟಿ. ವಿಜಯಪುರ: ವಾಹನಗಳಿಗೆ ಕಡ್ಡಾಯವಾಗಿ ಫಾಸ್ಟ್ಯಾಗ್ ​ಅಳವಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದೆ. ಆದರೆ, ಸಾಕಷ್ಟು ವಾಹನಗಳಿಗೆ ಫಾಸ್ಟ್ಯಾಗ್  ಅಳವಡಿಸದೆ ಇರುವುದರಿಂದ...

ಪುರುಷೋತ್ತಮ ಪೆರ್ಲ ಕಾಸರಗೋಡು

ಜಿಲ್ಲೆಯಲ್ಲಿ ಜಲಸಂರಕ್ಷಣಾ ಕಾರ್ಯಕ್ಕೆ ಕೇಂದ್ರದ ಜಲಶಕ್ತಿ ಅಭಿಯಾನ್ ಯೋಜನೆ ತಯಾರಿಸುತ್ತಿದ್ದರೆ, ಇನ್ನೊಂದೆಡೆ ಪ್ರಕೃತಿಯ ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಅಧಿಕಾರಿಗಳೇ ಬೆಂಬಲವಾಗಿ ನಿಂತಿದ್ದಾರೆ.

ಕಾಸರಗೋಡು ಜಿಲ್ಲೆಯ ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯಲ್ಲಿ ಪಾರಂಪರಿಕ ಜಲಸಂಗ್ರಹಾಗಾರಗಳಿಗೆ ಮಾರಕವಾಗುವ ರೀತಿಯಲ್ಲಿ ಕೆಂಪುಕಲ್ಲಿನ ಕ್ವಾರಿಗಳು ಕಾರ್ಯಾಚರಿಸುತ್ತಿದ್ದು, ಜಲಸಂರಕ್ಷಣಾ ಕಾರ್ಯಗಳಿಗೆ ತೊಡಕಾಗಿದೆ. ಬೇಂಗಪದವು ಆಸುಪಾಸು ಕೆಂಪುಕಲ್ಲಿನ ಕ್ವಾರಿಗಳಲ್ಲಿ ಯಂತ್ರಗಳ ಸದ್ದು ದಿನಕಳೆದಂತೆ ಹೆಚ್ಚಾಗುತ್ತಿದೆ. ಇಲ್ಲಿನ ಗಿರಿಜಾಂಬಾ ಕಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಕ್ವಾರಿಗಳ ಸಂಖ್ಯೆ ಹೆಚ್ಚುತ್ತಿದ್ದು, ವಿದ್ಯಾರ್ಥಿಗಳ ಸಂಚಾರ ಹಾಗೂ ಕಲಿಕೆಗೆ ತಡೆಯಾಗುತ್ತಿದೆ. ಕಲ್ಲು ಕತ್ತರಿಸುವ ಯಂತ್ರಗಳ ಸದ್ದು ಮಕ್ಕಳ ಪಾಠಪ್ರವಚನಕ್ಕೂ ಅಡಿ ಮಾಡುತ್ತಿದೆ. ಶಾಲೆ ಆಸುಪಾಸಿನ ಒಂದು ಕಿ.ಮೀ. ವ್ಯಾಪ್ತಿಯಲ್ಲಿ 20 ಕ್ಕೂ ಹೆಚ್ಚು ಸಣ್ಣ ಹಾಗೂ ದೊಡ್ಡ ಕೆಂಪುಕಲ್ಲು ಕ್ವಾರಿಗಳು ಕಾರ್ಯಾಚರಿಸುತ್ತಿವೆ.

ಅವನತಿಯ ಹಾದಿಯಲ್ಲಿ ಇಟ್ಟಿಪಳ್ಳ: ಶಾಲೆಯಿಂದ ಕೂಗಳತೆ ದೂರದಲ್ಲಿರುವ ಪಾರಂಪರಿಕ ಜಲಸಂಗ್ರಹಾಗಾರ ಇಟ್ಟಿಪಳ್ಳ ಅಂಚಿಗೇ ಬೃಹತ್ ಕ್ವಾರಿ ಕಾರ್ಯಾಚರಿಸುತ್ತಿದೆ. ಕಲ್ಲು ಕತ್ತರಿಸುವ ಯಂತ್ರಕ್ಕೆ ಭಾರಿ ಪ್ರಮಾಣದಲ್ಲಿ ನೀರಿನ ಅಗತ್ಯವಿದ್ದು, ಇಟ್ಟಿಪಳ್ಳದಲ್ಲಿರುವ ಅಗಾಧ ಜಲಸಂಗ್ರಹವನ್ನು ಗಮನದಲ್ಲಿರಿಸಿ ಇದರ ಬುಡದಲ್ಲೇ ಕ್ವಾರಿ ನಿರ್ಮಿಸಲಾಗಿದೆ. ಪ್ರಸಕ್ತ ಇಟ್ಟಿಪಳ್ಳದಿಂದ ಆಸುಪಾಸಿನ ಕ್ವಾರಿಗಳಿಗೂ ಬೃಹತ್ ಪಂಪ್ ಅಳವಡಿಸಿ ನೀರು ಕೊಂಡೊಯ್ಯಲಾಗುತ್ತಿದೆ. ವಿಪರ್ಯಾಸವೆಂದರೆ, ಎಣ್ಮಕಜೆ ಗ್ರಾಮದಲ್ಲಿ ಐದು ಕ್ವಾರಿಗಳಿಗೆ ಮಾತ್ರ ಪರವಾನಗಿ ಇದ್ದು, ಉಳಿದವು ಅನಧಿಕೃತವಾಗಿ ಕಾರ್ಯಾಚರಿಸುತ್ತಿವೆ.

ಅಧಿಕಾರಿ ವರ್ಗ ಮೌನ: ಪ್ರಕೃತಿಯ ಶೋಷಣೆ ತಡೆಯಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಪಾರಂಪರಿಕ ಜಲಸಂಗ್ರಹಾಗಾರಗಳು ವಿನಾಶದ ಹಾದಿಯಲ್ಲಿದ್ದರೂ, ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ, ಇಟ್ಟಿಪಳ್ಳ ಸನಿಹದ ಕೊಡಂಗೆ ಪಳ್ಳ ಆಸುಪಾಸೂ ಕಲ್ಲು ಕ್ವಾರಿ ಕಾರ್ಯಾಚರಿಸುತ್ತಿದೆ. ಅಂತರ್ಜಲಮಟ್ಟ ಗಣನೀಯವಾಗಿ ಕುಸಿಯುತ್ತಿರುವ ಜಿಲ್ಲೆಗಳಲ್ಲಿ ಕಾಸರಗೋಡನ್ನು ಒಳಪಡಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಜಲಶಕ್ತಿ ಅಭಿಯಾನದಲ್ಲಿ ಜಿಲ್ಲೆಯನ್ನು ಒಳಪಡಿಸಲಾಗಿದೆ. ಇದರಲ್ಲಿ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ವರ್ಷ ಕಳೆದಂತೆ ಕುಸಿಯುತ್ತಿರುವುದು ಅಧ್ಯಯನದಿಂದ ಸಾಬೀತಾಗಿದ್ದರೂ, ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಜಿಲ್ಲೆಯಲ್ಲಿ ಕೃತಕ ಕೆರೆಗಳ ನಿರ್ಮಾಣ, ಲಕ್ಷ ಬಿದಿರು ಸಸಿ ನೆಡುವ ಯೋಜನೆ ಮೂಲಕ ಸುದ್ದಿಯಲ್ಲಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ಬಾಬು ಮಧ್ಯ ಪ್ರವೇಶಿಸುವಂತೆ ಇಲ್ಲಿನ ಜನರು ಆಗ್ರಹಿಸಿದ್ದಾರೆ.

ಶಾಲೆಯಲ್ಲಿ ಮಕ್ಕಳಿಗೆ ಪಾಠ ನಡೆಸಲು ಕಷ್ಟವಾಗುವ ರೀತಿಯಲ್ಲಿ ಶಬ್ದ ಮಾಲಿನ್ಯ ಉಂಟಾಗುತ್ತಿದೆ. ವರ್ಷದ ಹಿಂದೆ ಈ ಬಗ್ಗೆ ವಿದ್ಯಾರ್ಥಿಗಳು ಚೈಲ್ಡ್‌ಲೈನ್ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಪ್ರಯೋಜನವಾಗಿಲ್ಲ.
ಶಿವಕುಮಾರ್, ಮುಖ್ಯಶಿಕ್ಷಕರು, ಗಿರಿಜಾಂಬಾ ಕಿರಿಯ ಪ್ರಾಥಮಿಕ ಶಾಲೆ

ಎಣ್ಮಕಜೆ ಗ್ರಾಮದಲ್ಲಿ ಐದು ಕ್ವಾರಿಗಳಿಗಷ್ಟೆ ಅನುಮತಿ ನೀಡಲಾಗಿದೆ. ಅನಧಿಕೃತ ಕ್ವಾರಿಗಳ ಬಗ್ಗೆ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಹಳ್ಳಗಳಿಗೆ ಮಾರಕವಾಗುವ ರೀತಿಯಲ್ಲಿ ನಡೆಯುವ ಗಣಿಗಾರಿಕೆಯನ್ನು ತಕ್ಷಣದಿಂದ ನಿಲುಗಡೆಗೊಳಿಸಲಾಗುವುದು.
ಚಂದ್ರಶೇಖರ ನಾಯ್ಕ, ಗ್ರಾಮಾಧಿಕಾರಿ, ಎಣ್ಮಕಜೆ ಗ್ರಾಮ

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...